
ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಮೀನು ವಿಚಾರವಾಗಿ ಶರಾವತಿ ನಗರ(Sharavathi nagar)ದ ರೇವಣಪ್ಪ(51) ಎಂಬುವವರ ಕೊಲೆಗೈದವನಿಗೆ ಜೀವಾವಧಿ ಶಿಕ್ಷೆ ₹1 ಲಕ್ಷ ದಂಡ ವಿಧಿಸಿ ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಹೊಳಲೂರು ಗ್ರಾಮದ ಪ್ರಕಾಶ್(45) ವಿರುದ್ಧದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಜೀವಾವಧಿ ಶಿಕ್ಷೆ (life imprisonment) ಮತ್ತು ₹1,00,000 ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿರುತ್ತಾರೆ.
ಪತ್ನಿಯಿಂದ ದೂರು
ರೇವಣಪ್ಪ ಮತ್ತು ಅವರ ಸಹೋದರರ ಮಧ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿದ್ದು, 2018ರಲ್ಲಿ ಪ್ರಕಾಶದ ಮತ್ತಿತರರು ಸೇರಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೇವಣ್ಣಪ್ಪರನ್ನು ಕೊಲೆ ಮಾಡಿರುತ್ತಾರೆಂದು ಮೃತನ ಪತ್ನಿ ಕಮಲಮ್ಮ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆಗಿನ ತನಿಖಾಧಿಕಾರಿ ಜೆ. ಲೋಕೇಶ್ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು. ಸರ್ಕಾರಿ ಅಭಿಯೋಜಕ ಸುರೇಶ ಕುಮಾರ್ ವಾದ ಮಂಡಿಸಿದ್ದರು.
Antaraghattamma | 4 ವರ್ಷಗಳ ಬಳಿಕ ಅದ್ಧೂರಿ ಅಂತರಘಟ್ಟಮ್ಮ ಜಾತ್ರಾ ಮಹೋತ್ಸವ