Illegal sand | ಅಕ್ರಮ ಮರಳುಗಾರಿಕೆ ತಡೆಗೆ ಡಿಸಿ ಡಾ.ಆರ್.ಸೆಲ್ವಮಣಿ ಮಾಸ್ಟರ್ ಪ್ಲ್ಯಾನ್

Sand

 

 

ಸುದ್ದಿ ಕಣಜ.ಕಾಂ | DISTRICT | DC MEETING
ಶಿವಮೊಗ್ಗ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ‌ ಅಕ್ರಮ ಮರಳು‌ ತಡೆಗೆ‌ ರೂಪಿಸಿರುವ ಮಾಸ್ಟರ್ ಪ್ಲ್ಯಾನ್ ಬಗ್ಗೆ ಮಾಹಿತಿ‌ ನೀಡಿದರು. ಅನುಸರಿಸಬೇಕಾದ‌‌‌ ಕ್ರಮಗಳ ಕುರಿತು ಮಾಹಿತಿ ನೀಡಿದರು.

IMG 20220811 WA0000
ಶಿವಮೊಗ್ಗದ ‌ಡಿಸಿ‌ ಕಚೇರಿಯಲ್ಲಿ ಬುಧವಾರ ಕರೆದಿದ್ಜಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ‌‌ ಮಾತನಾಡಿದರು.

READ | ಶಿವಮೊಗ್ಗ ಜಿಪಂ ಸಿಇಓ ವರ್ಗಾವಣೆ, ಹೊಸ‌ ಸಿಇಓ‌ ಯಾರು?

  • ಡಿಸಿ‌ ನೀಡಿದ ವಾರ್ನಿಂಗ್?
  1. ಮರಳುಗಾರಿಕೆ ಅವಧಿ ಆರಂಭವಾಗುವುದಕ್ಕೂ ಪೂರ್ವದಲ್ಲೇ, ಅಕ್ರಮ ಮರಳುಗಾರಿಕೆ ನಡೆಯುವುದನ್ನು ತಡೆಗಟ್ಟಲು ತಪಾಸಣಾ ತಂಡಗಳನ್ನು ರಚಿಸಬೇಕು.
  2. ಅಕ್ರಮ ಮರಳುಗಾರಿಕೆಯನ್ನು ಪತ್ತೆ ಹಚ್ಚಿ ಅತಿ ಹೆಚ್ಚಿನ ದಂಡವನ್ನು ವಿಧಿಸಿ ಕಾನೂನು ಕ್ರಮ ಜರುಗಿಸಬೇಕು.
  3. ಪ್ರತಿ ತಾಲೂಕಿನಲ್ಲಿ ಈ ಹಿಂದೆ ರಚಿಸಲಾಗಿರುವ ತನಿಖಾ ಠಾಣೆಗಳು ಮತ್ತು ಚಾಲಿತ ದಳಗಳನ್ನು ಪುನಶ್ಚೇತನಗೊಳಿಸಬೇಕು.
  4. ಅಕ್ರಮ ಮರಳನ್ನು ದಾಸ್ತಾನು ಮಾಡಲು ಅರಣ್ಯ ಪ್ರದೇಶ ಬಳಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಪ್ರಕರಣಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಅರಣ್ಯ ಕಾಯ್ದೆ ಅಡಿ ಮೊಕದ್ದಮೆ ದಾಖಲಿಸಬೇಕು.
  • ಮೋಟಾರ್‌ ಬೋಟ್ ಬಳಸಿ‌‌ ಮರಳುಗಾರಿಕೆ!
    ಹೊಸನಗರ ತಾಲೂಕಿನ ಈಚಲಕೊಪ್ಪ, ಬಾವಿಕೊಪ್ಪ, ಮುಳುಗಡ್ಡೆ ಇತ್ಯಾದಿ ಮತ್ತು ಸಾಗರ ತಾಲೂಕಿನ ಕಾರ್ಗಲ್ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ಮೋಟಾರ್ ಬೋಟ್ ಬಳಸಿ ಅಕ್ರಮ ಮರಳುಗಾರಿಕೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ತಡೆಗಟ್ಟಲು ಪೊಲೀಸರನ್ನು ಒಳಗೊಂಡ ವಿಶೇಷ ಸ್ಕ್ಯಾಡ್ ರಚಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಲು 5 ಮರಳು ಬ್ಲಾಕ್‍ಗಳನ್ನು ಮಂಜೂರು ಮಾಡಲಾಗಿದೆ. ಈ ಬ್ಲಾಕ್‍ಗಳನ್ನು ಪಡೆದುಕೊಂಡಿರುವ ಇಲಾಖೆಗಳು, ಯಾವ ಸರ್ಕಾರಿ ಕಾಮಗಾರಿಗೆ ಎಷ್ಟು ಮರಳು ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಒದಗಿಸಬೇಕು.
| ಡಾ.ಆರ್.ಸೆಲ್ವಮಣಿ,‌ ಜಿಲ್ಲಾಧಿಕಾರಿ

  • ಹೊಸ ನೀತಿ‌‌‌ ಅನ್ವಯ 54 ಬ್ಲಾಕ್‌ ಮಂಜೂರು
    ಹೊಸ ಮರಳು ನೀತಿಯ ಪ್ರಕಾರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್‍ಗಳಿಗೆ 54 ಮರಳು ಬ್ಲಾಕ್‍ಗಳನ್ನು ಮಂಜೂರು ಮಾಡಲಾಗಿದ್ದು, ಈ ಪೈಕಿ 24 ಮರಳು ಬ್ಲಾಕ್‍ಗಳನ್ನು ನವೀಕರಣ ಮಾಡಬೇಕಾಗಿದೆ. ಗ್ರಾಮ ಪಂಚಾಯಿತಿಗಳು ಮರಳುಗಾರಿಕೆಗೆ ಕಟ್ಟಿರುವ ರಾಜಧನವನ್ನು ಪರಿಶೀಲನೆ ನಡೆಸಬೇಕು. ರಾಜಧನ ಪಾವತಿಸುವ ಕುರಿತಾಗಿ ಎಲ್ಲ ಪಿಡಿಒಗಳ ಸಭೆಯನ್ನು ಕರೆದು ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದರು.
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಹೆಚ್ಚುವರಿ‌‌ ಎಸ್.ಪಿ. ಡಾ.ವಿಕ್ರಮ್ ಅಮಟೆ, ಡಿಎಫ್‍ಒ ಶಿವಶಂಕರ್, ಹಿರಿಯ ಭೂ ವಿಜ್ಞಾನಿ ವಿಂಧ್ಯಾ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

https://suddikanaja.com/2021/03/23/criminal-case-for-violating-the-sand-guidelines/

Leave a Reply

Your email address will not be published. Required fields are marked *

error: Content is protected !!