Political news | ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜು ತಲ್ಲೂರು ರಾಜೀನಾಮೆ, ಜಿಲ್ಲಾಧ್ಯಕ್ಷರ ವಿರುದ್ಧ ಗಂಭೀರ ಆರೋಪ

Raju Tallur

 

 

HIGHLIGHTS

  • ಕಾಂಗ್ರೆಸ್ ಜಿಲ್ಲಾಧ್ಯಕ್ಷರ ವಿರುದ್ಧ ಸ್ವ‌ಪಕ್ಷದವರಿಂದಲೇ ಗಂಭೀರ ಆರೋಪ
  • ಸೊರಬ ಕಾಂಗ್ರೆಸ್ ಮುಖಂಡ ರಾಜು ತಲ್ಲೂರು‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
  • ಸದ್ಯಕ್ಕೆ ಬೇರೆ ಯಾವುದೇ ಪಕ್ಷಕ್ಕೆ ಸೇರುವ ತೀರ್ಮಾನ ಮಾಡಿಲ್ಲ. ವ್ಯಕ್ತಿ ಪೂಜೆ ಮಾಡಲ್ಲ ಎಂದ ಪಕ್ಷ ಇಂದು ವ್ಯಕ್ತಿಗೆ ಪ್ರಾಮುಖ್ಯತೆ ಕೊಟ್ಟಿರುವುದು ಬೇಸರ ತರಿಸಿದೆ.

ಸುದ್ದಿ ಕಣಜ.ಕಾಂ | DISTRICT | 27 SEP 2022
ಶಿವಮೊಗ್ಗ: ಸೊರಬ (sorab) ಕಾಂಗ್ರೆಸ್ (Congress) ಮುಖಂಡ ರಾಜು ತಲ್ಲೂರು‌ (Raju tallur) ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಜಿಲ್ಲಾಧ್ಯಕ್ಷರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ  ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆ ಖಂಡಿಸಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು.

ಓದಲೇಬೇಕಾದ ಸುದ್ದಿ | ಇಂದು ದೇಶ ಕಂಡ ಅಪ್ರತಿಮ ವಿಜ್ಞಾನಿಯ ಜನ್ಮದಿನ, ಇವರು ಡಾ.ವಿಕ್ರಂ ಸಾರಾಭಾಯ್ ಕನಸಿನ ಹಕ್ಕಿಗೆ ಶಕ್ತಿ ತುಂಬಿದವರು

ರಾಜು ತಲ್ಲೂರು ಮಾಡಿದ ಆರೋಪಗಳಿವು

  • ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಯಾವುದೇ ಪ್ರಯತ್ನ ಮಾಡುತ್ತಿಲ್ಲ.
    ಬಡವರಿಗೆ ಕಾಂಗ್ರೆಸ್ ನಿಂದ ಯಾವುದೇ ಒಳಿತಾಗುತ್ತಿಲ್ಲ.
    ಇವರು ಪಕ್ಷ ಸಂಘಟನೆ ಮಾಡದೇ ಬೇರೆ ಕೆಲಸಗಳಲ್ಲಿ ತೊಡಗಿದ್ದಾರೆ.
  • ಅಧ್ಯಕ್ಷರನ್ನು ಬದಲಾವಣೆ ಮಾಡುವಂತೆ ಪಕ್ಷದ ಹಿರಿಯ ಮುಖಂಡರಿಗೆ ಮನವಿ ಮಾಡಿದ್ದರೂ ಅವರನ್ನು ಬದಲಾವಣೆ ಮಾಡಿಲ್ಲ. ಈ ಕಾರಣದಿಂದ ತಾವು ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.
  • ಕಳೆದ ನಾಲ್ಕೂವರೆ ವರ್ಷದಿಂದ ಜಿಲ್ಲಾಧ್ಯಕ್ಷರು ಯಾವುದೇ ದೊಡ್ಡ ಹಾಗೂ ಸಣ್ಣ ಸಮುದಾಯಗಳ ಸಮಾವೇಶಗಳನ್ನು ನಡೆಸಿಲ್ಲ.
  • ಅಧ್ಯಕ್ಷರಾದ ಅವಧಿಯಲ್ಲಿ ನಡೆದ ಹಲವಾರು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲ್ಲಿಲ್ಲ. ಕಳೆದ ಗ್ರಾ.ಪಂ. ಚುನಾವಣೆಯಲ್ಲಿ 970 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ಅಧ್ಯಕ್ಷರು ಹೇಳಿರುವುದು ಅತ್ಯಂತ ಸುಳ್ಳು
  • ಜಿಲ್ಲೆಯ ಯಾವುದೇ ನಾಯಕರಿಗೂ ಪಕ್ಷವನ್ನು ಬಲಪಡಿಸುವ ಮನಸ್ಸಿಲ್ಲ. ಬದಲಾಗಿ ಜಿಲ್ಲಾಧ್ಯಕ್ಷರ ಹಾದಿಯಲ್ಲೇ ಸಾಗುತ್ತಿದ್ದಾರೆ.

https://suddikanaja.com/2021/09/25/dacoit-in-a-sagara-road/

Leave a Reply

Your email address will not be published. Required fields are marked *

error: Content is protected !!