Politics | ಬಿ.ಎಸ್.ಯಡಿಯೂರಪ್ಪ ಅವರನ್ನು ಮುಕ್ತಕಂಠದಿಂದ ಹೊಗಳಿದ ಕೆ.ಎಸ್.ಈಶ್ವರಪ್ಪ, ‌ಕಾರಣವೇನು?

KS Eshwarappa

 

 

ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ಅವರು ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಕ್ತಕಂಠದಿಂದ ಹೊಗಳಿದೆ.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ‌ ಅವರು, ಯಡಿಯೂರಪ್ಪ ಮಾಸ್ ಲೀಡರ್. ಅವರನ್ನು ಬಿಜೆಪಿ ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಪಂಚಾಯಿತಿಯಿಂದ ಅಸೆಂಬ್ಲಿ ಚುನಾವಣೆಯವರೆಗೆ ಅವರು‌ ಕ್ಷೇತ್ರಗಳಿಗೆ ಭೇಟಿ‌ ನೀಡಿ ಪ್ರಚಾರ ಮಾಡಿದ್ದಾರೆ. ಅಂತಹ ಮಾಸ್ ಲೀಡರ್ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಿಲ್ಲ ಎಂದರು.

READ | ಕೇಂದ್ರೀಯ ಸಂಸದೀಯ ಮಂಡಳಿಗೆ ಬಿ.ಎಸ್.ಯಡಿಯೂರಪ್ಪ, ಬಿ.ಎಲ್.ಸಂತೋಷ್ ಆಯ್ಕೆ

ಸಂಸದೀಯ ಮಂಡಳಿಗೆ ಜೋಡೆತ್ತುಗಳು
ಬಿಜೆಪಿಯ ಸಂಸದೀಯ ಮಂಡಳಿಗೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ‌ ಕಾರ್ಯದರ್ಶಿ ಬೊಮ್ಮರಬೆಟ್ಟು ಲಕ್ಷ್ಮೀಜನಾರ್ದನ ಸಂತೋಷ್ (ಬಿ.ಎಲ್.ಸಂತೋಷ್) ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಅದಕ್ಕಾಗಿ ನನಗೆ ತುಂಬಾ ಖುಷಿಯಾಗಿದೆ ಎಂದು ಈಶ್ವರಪ್ಪ ಹೇಳಿದರು.
ಈ‌ ಎರಡೂ ಜೋಡೆತ್ತುಗಳಿಂದ ಪಕ್ಷ ಮತ್ತು ಕಾರ್ಯಕರ್ತರಿಗೆ ಆನೆಬಲ ಬಂದಂತಾಗಿದೆ ಎಂದರು.
ಬಿಜೆಪಿಗೆ ಪೂರ್ಣ ಬಹುಮತ
ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಬರುವ ಭರವಸೆ ಇದೆ. ಇದಕ್ಕೆ‌ ಕಾರಣ, ರಾಜಕೀಯ ಅನುಭವಿ ಯಡಿಯೂರಪ್ಪ ಹಾಗೂ ಸಂಘಟನಾ ಚತುರ ಬಿ.ಎಲ್.ಸಂತೋಷ್. ಇಬ್ಬರ ಮಾರ್ಗದರ್ಶನದಲ್ಲಿ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ‌ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ‌ ಎಂದರು.

https://suddikanaja.com/2022/04/19/bs-yediyurappa-visited-shivamogga-airport/

Leave a Reply

Your email address will not be published. Required fields are marked *

error: Content is protected !!