ಶಿವಮೊಗ್ಗದ JNNCEನಲ್ಲಿ‌ ಹೊಸ ಕೋರ್ಸ್ ಆರಂಭ, ಯುವಕರಿಗೆ ಉತ್ತಮ ಅವಕಾಶ

JNNCE

 

 

ಸುದ್ದಿ ಕಣಜ.ಕಾಂ | DISTRICT | EDUCATION CORNER
ಶಿವಮೊಗ್ಗ: ನಗರದ ನವುಲೆಯಲ್ಲಿರುವ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿ(JNNCE)ನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಹೊಸ ಕೋರ್ಸ್ ಆರಂಭಿಸಲಾಗಿದೆ. ಈ‌ ಮೂಲಕ ಯುವಕರಿಗೆ ಅನುಕೂಲವಾಗಲಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ಡಾ.ಕೆ.ನಾಗೇಂದ್ರ ಪ್ರಸಾದ್, ಕಾಲೇಜಿನಲ್ಲಿ ರೊಬೊಟಿಕ್ಸ್ ಮತ್ತು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ (artificial intelligence) ಕೋರ್ಸ್ ಆರಂಭವಾಗಿದೆ. ಮಲೆನಾಡು ಪ್ರದೇಶದ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗುವುದರಲ್ಲಿ‌ ಸಂದೇಹವೇ ಇಲ್ಲ‌ ಎಂದರು.

ಈಗಾಗಲೇ ಕಾಲೇಜಿನಲ್ಲಿ ರೊಬೋಟ್ , ತ್ರಿಡಿ ಪ್ರಿಂಟರ್ ರೊಬೊಟ್ ಸಿ.ಎನ್.ಸಿ ಇಂಟರ್ಫೇಸ್ ಸೌಲಭ್ಯಗಳು ಲಭ್ಯವಿದ್ದು ಪರಿಣಾಮಕಾರಿ ಕಲಿಕೆಗೆ ಉನ್ನತ ವಾತಾವರಣ ನಿರ್ಮಾಣ ಮಾಡಲಾಗಿದೆ.
| ಡಾ.ಕೆ.ನಾಗೇಂದ್ರ ಪ್ರಸಾದ್, ಪ್ರಾಂಶುಪಾಲ

ಭಾರೀ ಬೇಡಿಕೆಯ ವಿಷಯ
ಆಟೋಮೇಷನ್ ಕ್ಷೇತ್ರದಲ್ಲಿ ರೊಬೊಟಿಕ್ಸ್ ಮತ್ತು ಆರ್ಟಿಫೀಷಿಯಲ್ ಇಂಟೆಲಿಜೆನ್ಸ್ ವಿಷಯಕ್ಕೆ ಭಾರಿ‌ ಬೇಡಿಕೆ ಇದೆ. ಉತ್ಪಾದನಾ ಕ್ಷೇತ್ರದಲ್ಲಿ ರೊಬೊಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಅನೇಕ ಉತ್ಪಾದನಾ ಸವಾಲುಗಳನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿದೆ. ಸಾಕಷ್ಟು ಉದ್ದಿಮೆಗಳು  ರೊಬೊಟಿಕ್ಸ್ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಈ ಎಲ್ಲ‌ ಕಾರಣಗಳಿಂದಾಗಿ ಜೆ.ಎನ್.ಎನ್.ಎಂಜಿನಿಯರಿಂಗ್ ಕಾಲೇಜಿನಲ್ಲಿ ನೂತನ ವಿಭಾಗ ಆರಂಭಿಸಲಾಗಿದೆ ಎಂದು ತಿಳಿಸಿದರು.

READ | ಭದ್ರಾವತಿಯಲ್ಲಿ‌ ತಮ್ಮನ ಮೇಲೆ‌ ಗುಂಡು ಹಾರಿಸಿದ ಅಣ್ಣ!

ರಾಷ್ಟ್ರೀಯ ಶಿಕ್ಷಣ ಸಮಿತಿ ಎಂಜಿನಿಯರಿಂಗ್ ಕುಲಸಚಿವ ಪ್ರೊ.ಟಿ.ಎಸ್.ಹೂವಯ್ಯಗೌಡ, ಕಾಲೇಜಿನ ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಈ ಬಸವರಾಜ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.

https://suddikanaja.com/2021/09/09/kuvempu-university-top-100-in-national-institutional-ranking-framework-ranking/

Leave a Reply

Your email address will not be published. Required fields are marked *

error: Content is protected !!