UR Attention Please | ಸ್ವಯಂ ಉದ್ಯೋಗ ಆರಂಭಿಸಬೇಕೇ? ಇಲ್ಲಿದೆ ಸುವರ್ಣ ಅವಕಾಶ

YOUR ATTENTION PLZ

 

 

ಸುದ್ದಿ ಕಣಜ.ಕಾಂ‌ | DISTRICT | 27 AUG 2022
ಶಿವಮೊಗ್ಗ: ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಪ್ರಾಯೋಜಕತ್ವದಲ್ಲಿ ಸಿಡಾಕ್ (ಧಾರವಾಡದ ಕರ್ನಾಟಕ ಉದ್ಯಮಶೀಲತಾಭಿವೃದ್ದಿ ಕೇಂದ್ರ) ಸಂಸ್ಥೆಯಿಂದ ಸ್ವಯಂ ಉದ್ಯೋಗ ಕೈಗೊಳ್ಳಲು ಇಚ್ಚಿಸುವ ಜಿಲ್ಲೆಯ ಆಸಕ್ತ ಉದ್ಯಮ‌ ಆಕಾಂಕ್ಷಿಗಳಿಗೆ ವಸತಿರಹಿತ 10 ದಿನಗಳ ಉದ್ಯಮಶೀಲತಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಸೆಪ್ಟೆಂಬರ್ 19 ರಿಂದ 28 ರವರೆಗೆ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಏರ್ಪಡಿಸಲಾಗುತ್ತಿದೆ.

READ | ಶಿವಮೊಗ್ಗದಲ್ಲಿ ಡಿಜೆ ನಿಷೇಧ, ಯಾವಾಗಿಂದ ನಿಯಮ ಅನ್ವಯ?

ಈ ದಾಖಲೆಗಳೊಂದಿಗೆ ಇಲ್ಲಿ ಸಂಪರ್ಕಿಸಿ
ಕಾರ್ಯಕ್ರಮ ಉಚಿತವಾಗಿದ್ದು, 18 ರಿಂದ 55 ವರ್ಷ ವಯೋಮಿತಿಯ, 10ನೇ ತರಗತಿ ಪಾಸಾದ ಉದ್ಯಮಾಕಾಂಕ್ಷಿಗಳು 2 ಪಾಸ್‍ಪೋರ್ಟ್ ಅಳತೆಯ ಫೋಟೊ ಹಾಗೂ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಜಂಟಿ ನಿರ್ದೇಶಕರ ಕಚೇರಿ, ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, 3ನೇ ಮಹಡಿ, ಶಿವಪ್ಪನಾಯಕ ಕಾಂಪ್ಲೆಕ್ಸ್, ನೆಹರು ರಸ್ತೆ, ಶಿವಮೊಗ್ಗ, ಅವಿನಾಶ್.ಎ ತರಬೇತುದಾರ ಮೊ.ಸಂ: 9164811887, ವಿನಯ್.ಜಿ.ಕೆ, ತರಬೇತುದಾರ 9886115200 ಇವರನ್ನು ಸಂಪರ್ಕಿಸಬಹುದು ಎಂದು ದಾವಣಗೆರೆ ಸಿಡಾಕ್ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

https://suddikanaja.com/2022/03/14/shimoga-dc-dr-r-selvamani-called-important-meeting-with-industrialists-of-shivamogga/

Leave a Reply

Your email address will not be published. Required fields are marked *

error: Content is protected !!