Shivamogga rain | ಶಿವಮೊಗ್ಗದಲ್ಲಿ‌ ಮಳೆ‌ ಆವಾಂತರ, ಮನೆ‌ ಕುಸಿತ, ರಸ್ತೆ ಸಂಪರ್ಕ ಕಡಿತ‌‌ ಸಾಧ್ಯತೆ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

shivamogga rain 1

 

 

ಸುದ್ದಿ ಕಣಜ.ಕಾಂ | DISTRICT | RAIN REPORT
ಶಿವಮೊಗ್ಗ: ನಿರಂತರವಾಗಿ ರಚ್ಚೆ ಹಿಡಿದು ಸುರಿಯುತ್ತಿರುವ ಮಳೆಯು ಜಿಲ್ಲೆಯಲ್ಲಿ ಹಲವು ಅನಾಹುತಗಳಿಗೆ ಕಾರಣವಾಗಿದೆ. ಕೆಲವೆಡೆ‌ ಮನೆಗಳು ಕುಸಿದರೆ, ಕಿರುಸೇತುವೆ ಸಂಪರ್ಕ‌ ಕಡಿತಗೊಳ್ಳುವ ಭೀತಿಯಲ್ಲಿ ಜನರಿದ್ದಾರೆ.

READ | ಹವಾಮಾನ ಇಲಾಖೆ ಮುನ್ಸೂಚನೆ, ಇಂದು, ನಾಳೆ ಭಾರೀ ಮಳೆ

  • ನೆರೆ ಇಳಿಕೆ, ತಪ್ಪದ ಆತಂಕ | ಹೊಳೆಹೊನ್ನೂರು ಮತ್ತು ಭದ್ರಾವತಿಯಲ್ಲಿ ನೆರೆ‌ ಇಳಿಕೆಯಾಗಿದ್ದು, ಸಂತ್ರಸ್ತರ ಪ್ರಮಾಣ‌ ಕ್ರಮೇಣ ಕಡಿಮೆಯಾಗುತ್ತಿದೆ. ಮಳೆ ಸೃಷ್ಟಿಸಿ ಹೋಗಿರುವ ಅನಾಹುತಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ಜನರು ತಲ್ಲೀನರಾಗಿದ್ದಾರೆ. ಮನೆಗಳನ್ನು ಸ್ವಚ್ಛ ಮಾಡಿಕೊಳ್ಳುತಿದ್ದಾರೆ.
  • ಬೀಳುವ ಭೀತಿಯಲ್ಲಿ ಸೂರುಗಳು | ಧಾರಾಕಾರ ಮಳೆಯಿಂದ ಮನೆಯ ಗೋಡೆಗಳು ತೇವಾಂಶದಿಂದ ಕೂಡಿದ್ದು, ಯಾವ ಗಳಿಗೆಯಲ್ಲಾದರೂ ಗೋಡೆಗಳು ಕುಸಿಯುವ ಸಾಧ್ಯತೆ ಇದೆ. ಹೀಗಾಗಿ, ಒಂದೆರಡು ದಿನವಾದರೂ ಕಾಳಜಿ ಕೇಂದ್ರದಲ್ಲೇ ಇರಲು ಸಂತ್ರಸ್ತರು ನಿರ್ಧರಿಸಿದ್ದಾರೆ. ತರೀಕೆರೆ ರಸ್ತೆಯ ವಳ್ಳುವರ್ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರದಿಂದ ಜನರನ್ನು ಮನೆಗೆ ಕಳುಹಿಸಲಾಗಿದೆ.
  • ತೀರ್ಥಹಳ್ಳಿಯಲ್ಲಿ ಮೂರು ಮನೆ ಕುಸಿತ | ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಠಲನಗರದ ಶಾರದಾ, ಬೆಜ್ಜವಳ್ಳಿಯ ಮಂಜುನಾಥ್, ಜಾವಗಲ್ಲಿನಲ್ಲಿ ಡಾಕಪ್ಪ ಅವರ ಮನೆಗಳು ಭಾಗಶಃ ಕುಸಿದಿವೆ.
  • ಮಳೆಗೆ ಹಾಳಾದ ಹೋದ ರಸ್ತೆ | ಸೊರಬ ತಾಲೂಕಿನ ಆನವಟ್ಟಿ ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಮಳೆಗೆ ರಸ್ತೆ ಹಾಳಾಗಿದೆ. ಇದರಿಂದ ಜನರ ಓಡಾಟಕ್ಕೆ ತೊಂದರೆಯಾಗಿದೆ.
  • ಬಪ್ಪಿಗ ಕಿರುಸೇತುವೆ ಸಂಪರ್ಕ ಸಾಧ್ಯತೆ | ರಿಪ್ಪನಪೇಟೆ ಬಳಿಯ ಚಿಕ್ಕಜೇನಿ ಗ್ರಾಪಂ ಬಪ್ಪಿಗ ತಾವರೆಕೆರೆಯ ಕಿರುಸೇತುವೆ ಪಕ್ಕದಲ್ಲಿ ಮಳೆ‌ ನೀರಿನ ರಭಸಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ. ಹೊಸನಗರ, ಹರತಾಳು, ಹಿರೇಜೇನಿ, ಕೋಟೆತಾರಿಗನಕ್ಕೆ ಹೀಗೆ ವಿವಿಧ ಗ್ರಾಮಗಳಿಗೆ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ್ದ ಕಿರುಸೇತುವೆ ಕೂಡ ಕೊಚ್ಚಿ ಹೋಗಿದೆ.

READ | ಜನರ ಜೀವ ಮುಖ್ಯವೋ? ಧ್ವಜ ಹಾರಿಸುವುದು ಮುಖ್ಯವೋ? ಪಿಡಿಓ ವಿರುದ್ಧ ಕಾಂಗ್ರೆಸ್ ನಾಯಕಿ ಗರಂ

ಓದುಗರ ಗಮನಕ್ಕೆ | ನಿಮ್ಮ ಪ್ರದೇಶದಲ್ಲಿ ಮಳೆಯಿಂದ ಯಾವುದೇ ರೀತಿಯ ಹಾನಿ, ಮನೆ ಕುಸಿತ, ಧರೆ ಕುಸಿತ, ರಸ್ತೆ ಸಂಪರ್ಕ ಕಡಿತ ಯಾವುದೇ ರೀತಿಯ ತೊಂದರೆ ಉಂಟಾದರೆ ನಮ್ಮ ವಾಟ್ಸಾಪ್ ಸಂಖ್ಯೆ +91 94831 30291 ಒಂದು ಚಿತ್ರ, ಊರು, ಏನು ಸಮಸ್ಯೆ ಬರೆದು ಕಳುಹಿಸಿ.

https://suddikanaja.com/2022/07/26/shivamogga-rain-damages-properties-in-shimoga-district/

Leave a Reply

Your email address will not be published. Required fields are marked *

error: Content is protected !!