IAS Transfer | ಶಿವಮೊಗ್ಗ ಜಿಪಂ ಸಿಇಓ ಎಂ.ಎಲ್.ವೈಶಾಲಿ ವರ್ಗಾವಣೆ, ಹೊಸ‌ ಸಿಇಓ‌ ಯಾರು?

Breaking news

 

 

ಸುದ್ದಿ ಕಣಜ.ಕಾಂ | DISTRICT | ZP CEO
ಶಿವಮೊಗ್ಗ: ಜಿಲ್ಲಾ ಪಂಚಾಯಿತಿ‌ ಸಿಇಓ ಎಂ.ಎಲ್.ವೈಶಾಲಿ ಅವರನ್ನು‌ ವರ್ಗಾವಣೆ‌ ಮಾಡಿದ್ದು,‌ ತೆರವಾದ ಸ್ಥಾನಕ್ಕೆ ಎನ್.ಡಿ.ಪ್ರಕಾಶ್ ಅವರನ್ನು ನಿಯೋಜಿಸಿ‌ ರಾಜ್ಯ ಸರ್ಕಾರ ಆದೇಶಿಸಿದೆ.
ಗದಗ ಜಿಲ್ಲಾಧಿಕಾರಿಯಾಗಿ‌ ವೈಶಾಲಿ ಅವರನ್ನು ಸರ್ಕಾರ‌‌ ನಿಯೋಜನೆ ಮಾಡಿದೆ. ಹೊಸದಾಗಿ ಸಿಇಓ ಆಗಿ ಅಧಿಕಾರ‌ ಸ್ವೀಕರಿಸಲಿರುವ ಪ್ರಕಾಶ್ ಅವರು ಈ ಹಿಂದೆ ಮಂಡ್ಯ ಜಿಪಂ‌ ಉಪ‌ ಕಾರ್ಯದರ್ಶಿ ಸೇರಿದಂತೆ ಹಲವೆಡೆ ಕರ್ತವ್ಯ ನಿರ್ವಹಣೆ ಮಾಡಿದ್ದಾರೆ.

ml vaishali
ಎಂ.ಎಲ್.ವೈಶಾಲಿ‌ IAS

READ | ಬೀಗರ ಊಟದ ತಂದ ಫಜೀತಿ, ಬಾಣಸಿಗ ಸೇರಿ‌ 11 ಜನರ ವಿರುದ್ಧ ಕೇಸ್

2 ವರ್ಷ 11 ತಿಂಗಳು ಸೇವೆ
2019ರ ಆಗಸ್ಟ್ 20ರಂದು‌ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ‌ನಿರ್ವಾಹಣಾಧಿಕಾರಿಯಾಗಿ ಅಧಿಕಾರ‌‌ ವಹಿಸಿಕೊಂಡಿದ್ದ ಅವರು ಜಿಲ್ಲೆಯಲ್ಲಿ‌ ಬರೋಬ್ಬರಿ 2 ವರ್ಷ 11 ತಿಂಗಳು 23 ದಿನ ಸಿಇಓ ಆಗಿ ಕಾರ್ಯನಿರ್ವಹಿಸಿದ್ದು, ಕೆಎಎಸ್’ನಿಂದ‌ ಐಎಎಸ್’ಗೆ ಬಡ್ತಿ ಹೊಂದಿದ ಬಳಿಕ‌ ಇದೇ‌ ಮೊದಲನೇ‌ ಬಾರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಇವರು ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲೂಕಿನ ಶೆಟ್ಟಿಕೆರೆ ಮೂಲದವರು. ಜಿಪಂ‌ ಸಿಇಓ ಆಗುವುದಕ್ಕೂ‌ ಮುನ್ನ ಶಿವಮೊಗ್ಗ ಉಪ‌ ವಿಭಾಗಾಧಿಕಾರಿ, ಚಿಕ್ಕಮಗಳೂರು ಹೆಚ್ಚುವರಿ ಜಿಲ್ಲಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ.

https://suddikanaja.com/2022/04/08/shivamogga-dysp-prashanth-munnolli-transfer/

Leave a Reply

Your email address will not be published. Required fields are marked *

error: Content is protected !!