Threat letter | ಕೆ.ಎಸ್.ಈಶ್ವರಪ್ಪಗೆ ಬೆದರಿಕೆ ಪತ್ರ, ಅದರಲ್ಲೇನಿದೆ, ಈಶ್ವರಪ್ಪ ಹೇಳಿದ್ದೇನು?

KSE Letter

 

 

ಸುದ್ದಿ ಕಣಜ.ಕಾಂ | DISTRICT | 24 AUG 2022
ಶಿವಮೊಗ್ಗ: ಶಾಸಕ ಕೆ.ಎಸ್.ಈಶ್ವರಪ್ಪ ಅವರಿಗೆ ಪತ್ರವೊಂದು ಬರೆಯಲಾಗಿದ್ದು, ಅದರಲ್ಲಿ ಬೆದರಿಕೆಯೊಡ್ಡಲಾಗಿದೆ. ಅನಾಮಧೇಯ ಪತ್ರವನ್ನು ಮಲ್ಲೇಶ್ವರ ನಗರದಲ್ಲಿರುವ ಮನೆಗೆ ಕಳುಹಿಸಲಾಗಿದೆ.
ಎಸ್.ಪಿಗೆ ದೂರು ನೀಡಿದ ಆಪ್ತ ಸಹಾಯಕ
ಬೆದರಿಕೆ ಪತ್ರದ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕರ ಆಪ್ತ ಸಹಾಯಕ ದೂರು ನೀಡಿದ್ದಾರೆ. ಪರಿಶೀಲನೆ ಮಾಡಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

CLICK FOR VIDEO REPORT

KSE SP Compliant copy 1

ಎಸ್.ಪಿಗೆ ನೀಡಿರುವ ದೂರಿನ ಪ್ರತಿ.ಪತ್ರದಲ್ಲಿ ಏನಿದೆ?
‘ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್ ಬಗ್ಗೆ ಬಾಯಿಗೆ ಬಂದಂತೆ ಮುಸ್ಲಿಂ ಗೂಂಡಾ ಅಂತೆಲ್ಲ ಹೇಳಿದ್ದೀರಲ್ಲ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿಗೆ ಕಟ್ಟಡ ಕಟ್ಟಲಿಕ್ಕೆ ನಮ್ಮ ಮುಸ್ಲಿಂ ಸಮಾಜದವರು ತಯಾರಿಸಿದ ಸಿಮೆಂಟ್ ಬ್ರಿಕ್ಸ್ ಬೇಕೆ? ಮುಸ್ಲಿಮರು ಬೇಡವೇ? ನಿಮಗೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್ ಮಗನೆ’ ಎಂದು ಬೆದರಿಕೆಯೊಡ್ಡಿದ್ದಾರೆ.

READ | ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್, ಉಪ‌ ಮೇಯರ್ ಮೀಸಲು ಪ್ರಕಟ 

ಈಶ್ವರಪ್ಪ ಹೇಳಿದ್ದೇನು?
ಬೆದರಿಕೆ ಪತ್ರ ಬಂದಿದ್ದೇ ತಕ್ಷಣ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಯಾವುದೇ ಬೆದರಿಕೆ ಪತ್ರಗಳಿಗೆ ನಾನು ಹೆದರುವುದಿಲ್ಲ. ನನಗೆ ಭದ್ರತೆಯ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

https://suddikanaja.com/2022/04/25/former-cm-bs-yediyurappa-wrote-a-letter-to-cm-basavaraj-bommai/

Leave a Reply

Your email address will not be published. Required fields are marked *

error: Content is protected !!