Diploma Exams | ನಾಳೆ ನಡೆಯಬೇಕಿದ್ದ ಡಿಪ್ಲೋಮಾ ಥಿಯರಿ ಪರೀಕ್ಷೆ ಮುಂದೂಡಿಕೆ, ಯಾವಾಗ ನಡೆಯಲಿದೆ ಪರೀಕ್ಷೆ?

 

 

ಸುದ್ದಿ ಕಣಜ.ಕಾಂ | KARNATAKA | 01 SEPT 2022
ಬೆಂಗಳೂರು: ರಾಜ್ಯದ ಎಲ್ಲ ಪಾಲಿಟೆಕ್ನಿಕ್ (Polytechnic)  ಗಳಲ್ಲಿ ಸೆಪ್ಟೆಂಬರ್ 2ರಂದು ನಡೆಯಬೇಕಾಗಿದ್ದ ಥಿಯರಿ ಪರೀಕ್ಷೆಗಳನ್ನು ಮುಂದೂಡಿ ತಾಂತ್ರಿಕ ಶಿಕ್ಷಣ ಇಲಾಖೆ (Department of Technical Education) ಆದೇಶ ಹೊರಡಿಸಿದೆ.

DTE Diploma
ಡಿಪ್ಲೋಮಾ ಪರೀಕ್ಷೆ ಮುಂದೂಡಿಕೆ ಆದೇಶ

READ | ತಾಳಗುಪ್ಪ-ಹುಬ್ಬಳ್ಳಿ ಸರ್ವೇ ವರದಿ‌ ನವೆಂಬರ್ ನಲ್ಲಿ ಸಲ್ಲಿಕೆ

ಡಿಪ್ಲೋಮಾ (Diploma) ಸೆಮಿಸ್ಟರ್ ಥಿಯರಿ ಪರೀಕ್ಷೆಗಳು ವೇಳಾಪಟ್ಟಿ(Time Table) ಯಂತೆ ನಡೆಯುತ್ತಿದ್ದು, ಕಾರಣಾಂತರಗಳಿಂದ ಸೆ.2ರಂದು ನಡೆಯಬೇಕಾಗಿದ್ದ ಎಲ್ಲ ಥಿಯರಿ ಪರೀಕ್ಷೆಗಳನ್ನು ಮಾತ್ರ ಮುಂದೂಡಿ ಅಂದಿನ ಪರೀಕ್ಷೆಗಳನ್ನು ಸೆಪ್ಟೆಂಬರ್ 23ರಂದು ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ವಿಷಯವನ್ನು ಉಪನ್ಯಾಸಕರು ಮತ್ತು ಪೋಷಕರುಗಳ ಗಮನಕ್ಕೆ ತರುವಂತೆ ಎಲ್ಲ ಪಾಲಿಟೆಕ್ನಿಕ್ ಪ್ರಾಂಶುಪಾಲರುಗಳಿಗೆ ತಿಳಿಸಲಾಗಿದೆ. ಉಳಿದಂತೆ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!