ಆಟೋ ಚಾಲಕ ಮಹಮ್ಮದ್ ಗೌಸ್ ಪ್ರಾಮಾಣಿಕತೆಗೆ ಖಾಕಿ‌ ಶಹಭಾಷ್’ಗಿರಿ, ನಡೆದಿದ್ದೇನು?

auto driver

 

 

HIGHLIGHTS

  • ಮಹಿಳೆಯೊಬ್ಬರು ಆಟೋದಲ್ಲೇ ಬೆಟ್ಟು ಹೋಗಿದ್ದರು ಬ್ಯಾಗ್, 40 ಗ್ರಾಂ ಚಿನ್ನದ ಸರ
    ಗಮನಕ್ಕೆ‌ ಬಂದಿದ್ದೇ ಬ್ಯಾಗ್ ಅನ್ನು ವಾರಸುದಾರರಿಗೆ ತಲುಪಿಸಿದ ಆಟೋ ಚಾಲಕ ಮಹಮ್ಮದ್ ಗೌಸ್
  • ಉತ್ತಮ ಕಾರ್ಯಕ್ಕೆ ಮೆಚ್ಚಿ ಆಟೋ ಚಾಲಕನಿಗೆ ಪ್ರಶಂಸನಾ ಪತ್ರ ನೀಡಿದ ಶಿವಮೊಗ್ಗ ಪೊಲೀಸ್

ಸುದ್ದಿ ಕಣಜ.ಕಾಂ | DISTRICT | 11 SEP 2022
ಶಿವಮೊಗ್ಗ: ಆಟೋ ಚಾಲಕ(Auto driver)ನ ಪ್ರಾಮಾಣಿಕತೆಗೆ ಮೆಚ್ಚಿ ಪೊಲೀಸ್‌ ಇಲಾಖೆ(Police department)ಯು ಪ್ರಶಂಸನಾ ಪತ್ರ ನೀಡಿದೆ.
ಅಣ್ಣಾನಗರ (anna nagar) ನಿವಾಸಿ ಆಟೋ ಚಾಲಕ‌ ಮಹಮ್ಮದ್ ಗೌಸ್ ಅವರಿಗೆ ಪೊಲೀಸರು ಬೆನ್ನು ತಟ್ಡುವ ಕೆಲಸ‌ ಮಾಡಿದ್ದಾರೆ.

Pet lovers | ಪೆಟ್ ಲವರ್ಸ್’ಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ನಾಯಿ ಕಚ್ಚಿದರೆ ಆಹಾರ ಹಾಕುವವರೇ ಜವಾಬ್ದಾರರು, ಸುಪ್ರೀಂ ಕೋರ್ಟ್ ಹೇಳಿದ್ದೇನು?

ನಡೆದಿದ್ದೇನು?
ಸೆಪ್ಟೆಂಬರ್ 10ರಂದು ಟಿಪ್ಪುನಗರದ ಮಹಿಳೆಯೊಬ್ಬರು ನಗರದ ಅಶೋಕ ಸರ್ಕಲ್‌(Ashok circle)ನಲ್ಲಿ ಮಹಮ್ಮದ್‌ ಗೌಸ್‌ ಅವರ ಆಟೋ ಹತ್ತಿದ್ದು, ಟಿಪ್ಪುನಗರ(Tippu nagar)ದಲ್ಲಿ ಇಳಿಯುವಾಗ ತಾವು ತಂದಿದ್ದ ಬ್ಯಾಗ್‌ ಮತ್ತು ಅದರಲ್ಲಿದ್ದ 40 ಗ್ರಾಂ ತೂಕದ ಬಂಗಾರದ ಸರದ ಸಮೇತ ಆಟೋದಲ್ಲಿಯೇ ಬಿಟ್ಟು ಇಳಿದು ಹೋಗಿರುತ್ತಾರೆ. ನಂತರ ಮಹಮ್ಮದ್‌ ಗೌಸ್‌‌ ಅವರು ತಮ್ಮ ಆಟೋದಲ್ಲಿದ್ದ ಬ್ಯಾಗ್‌ ಹಾಗೂ ಬಂಗಾರ ಸರವನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆಯನ್ನು ತೋರಿದ್ದು, ಇವರ ಈ ಉತ್ತಮ ಕಾರ್ಯಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ ಇಲಾಖಾ ವತಿಯಿಂದ ಪ್ರಶಂಸನಾ ಪತ್ರವನ ನೀಡಿ ಗೌರವಿಸಲಾಗಿದೆ.

https://suddikanaja.com/2021/09/14/auto-driver-gave-bag-of-a-passenger-to-police-station/

Leave a Reply

Your email address will not be published. Required fields are marked *

error: Content is protected !!