Pet lovers | ಪೆಟ್ ಲವರ್ಸ್’ಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್, ನಾಯಿ ಕಚ್ಚಿದರೆ ಆಹಾರ ಹಾಕುವವರೇ ಜವಾಬ್ದಾರರು, ಸುಪ್ರೀಂ ಕೋರ್ಟ್ ಹೇಳಿದ್ದೇನು?

 

HIGHLIGHTS

  • ನಾಯಿಗಳಿಗೆ ಆಹಾರ ಹಾಕುವವರೆ ಅದಕ್ಕೆ ಕಾಲ-ಕಾಲಕ್ಕೆ ಲಸಿಕೆ ಹಾಕಿಸಬೇಕು
  • ಅನ್ನ ಹಾಕಿದ ಬೀಡಾಡಿ ನಾಯಿ ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ ಅದರ ವೈದ್ಯಕೀಯ ವೆಚ್ಚವನ್ನು ಆಹಾರ ಹಾಕುವವರೇ ಹೊರಬೇಕು
  • ಜನರ‌ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ‌ ನಡುವೆ ಸಮತೋಲನದ‌ ಅಗತ್ಯವಿದೆ: ಸುಪ್ರೀಂ

ಸುದ್ದಿ ಕಣಜ.ಕಾಂ | NATIONAL | 11 SEP 2022
ನವದೆಹಲಿ: ಅನುಕಂಪ ಮತ್ತು ಕರುಣೆಯಿಂದ ಶ್ವಾನಗಳಿಗೆ ಆಹಾರ ಉಣಿಸುವುದು ಸರ್ವೇ ಸಾಮಾನ್ಯ. ಆದರೆ, ಇನ್ಮುಂದೆ ಆಹಾರ ನೀಡಬೇಕಾದರೆ ಜಾಗರೂಕತೆ ವಹಿಸಲೇಬೇಕು. ಇದಕ್ಕೆ ಕಾರಣ ಅಂತಹ ನಾಯಿ ಯಾರಿಗಾದರೂ ಕಚ್ಚಿದರೆ ಅದರ ಹೊಣೆ ಆಹಾರ ಹಾಕಿದವರೇ ಹೊರಬೇಕಾಗುತ್ತದೆ.
ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸುವ ಮಹತ್ವದ ಉದ್ದೇಶದಿಂದ ಸುಪ್ರೀಂ ಕೋರ್ಟ್, ‘ನಾಯಿಗಳಿಗೆ ಆಹಾರ ಹಾಕುವವರೆ ಅದಕ್ಕೆ ಕಾಲ-ಕಾಲಕ್ಕೆ ಲಸಿಕೆ ಹಾಕಿಸಬೇಕು. ಅನ್ನ ಹಾಕಿದ ಬೀಡಾಡಿ ನಾಯಿ ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ ಅದರ ವೈದ್ಯಕೀಯ ವೆಚ್ಚವನ್ನು ಆಹಾರ ಹಾಕುವವರೇ ಹೊರಬೇಕು’ ಎಂದು ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯವನ್ನು ಹೊರಹಾಕಿದೆ.

READ | ಶೀಘ್ರವೇ 778 ಉಪನ್ಯಾಸಕರ ನೇರ ನೇಮಕ

ಕೇರಳದಲ್ಲಿ‌ ಸಲ್ಲಿಸಿದ್ದ ಬೀದಿನಾಯಿಗಳ ಹಾವಳಿ‌ ಕುರಿತು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ‌ ನ್ಯಾಯಾಲಯ, ‘ಬೀದಿನಾಯಿಗಳನ್ನು‌ ಪ್ರೀತಿಸಿದರೆ ಮಾತ್ರ‌ ಸಾಲದು.‌ ಅದರ ಜವಾಬ್ದಾರಿಯನ್ನು ಹೊರಬೇಕು. ಬೀದಿನಾಯಿಗಳಿಂದ ಅಮಾಯಕರಿಗೆ ತೊಂದರೆ ಆಗದಂತೆ ಜಾಗರೂಕತೆ ವಹಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಜೆ.ಕೆ.ಮಹೇಶ್ವರಿ ಅವರನ್ನು ಒಳಗೊಂಡ ಪೀಠ ತಿಳಿಸಿದೆ.
ಪ್ರಕರಣದ ಮುಂದಿನ‌ ವಿಚಾರಣೆಯನ್ನು ‌ಸೆಪ್ಟೆಂಬರ್ 30ಕ್ಕೆ‌ ಮುಂದೂಡಲಾಗಿದೆ.

SNAKE BITE | ಇನ್ನೇನು ಕಾಲೇ‌ ಕಳೆದುಕೊಳ್ಳಲಿದ್ದ ಬಾಲಕನಿಗೆ ಸಿಕ್ಕಿತು ನೆರವು

Leave a Reply

Your email address will not be published.