Robbery | ಭದ್ರಾವತಿಯಲ್ಲಿ ಲಾರಿಯಲ್ಲಿ ಮಲಗಿದ್ದವರ ಮೇಲೆ‌ ಚಾಕುದಿಂದ ಹಲ್ಲೆ ನಡೆಸಿ ದರೋಡೆ

 

HIGHLIGHTS

  • ಲಾರಿಯಲ್ಲಿ ಮಲಗಿದ್ದ ಚಾಲಕ‌ಮತ್ತು ಕ್ಲೀನರ್ ಮೇಲೆ ಚಾಕುದಿಂದ ಹಲ್ಲೆ ನಡೆಸಿ‌ ದರೋಡೆ
  • ಭತ್ತವನ್ನು ಕೇರಳಕ್ಕೆ‌ ಕೊಂಡೊಯ್ಯುತ್ತಿದ್ದ ಲಾರಿ, ಬೈಕಿನಲ್ಲಿ‌ ಬಂದವರಿಂದ ಕೃತ್ಯ

ಸುದ್ದಿ ಕಣಜ.ಕಾಂ | TALUK | 19 SEP 2022
ಭದ್ರಾವತಿ(Bhadravathi): ಲಾರಿ(Lorry)ಯಲ್ಲಿ ಮಲಗಿದ್ದ ಚಾಲಕ ಮತ್ತು ಕ್ಲೀನರ್ ಅವರನ್ನು ಬೆದರಿಸಿ ಅವರ ಬಳಿಯಿಂದ ಹಣ ದೋಚಿ ಪರಾರಿಯಾದ ಘಟನೆ ತರೀಕೆರೆ (Tarikere) ರಸ್ತೆ ಹತ್ತಿರದ ದಿ ಸತ್ ಮಲಬಾರ್ ರೋಡ್ ವೆಸ್ ಬಳಿ ಭಾನುವಾರ (Sunday) ಬೆಳಗಿನ ಜಾವ ನಡೆದಿದೆ.
ಕೇರಳ ಮೂಲದ ಲಾರಿ ಚಾಲಕ (driver) ರಷೀದ್‌ (43) ಮತ್ತು ಕ್ಲೀನರ್‌ (Cleaner) ಕಮರುದ್ದಿ (32) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ₹8 ಸಾವಿರ ನಗದು ದೋಚಲಾಗಿದೆ.

READ | ಶಿವಮೊಗ್ಗದಲ್ಲಿ ಎರಡು ಬೈಕ್’ಗಳ‌ ಕಳ್ಳತನ

ಭತ್ತದ ಲೋಡ್ ಕೊಂಡೊಯ್ಯುತ್ತಿದ್ದ ಲಾರಿ
ಸೆಪ್ಟೆಂಬರ್ 17ರಂದು ಭತ್ತದ (Paddy) ಲೋಡ್ ಮಾಡಿಕೊಂಡು ಕೇರಳಕ್ಕೆ ತೆಗೆದುಕೊಂಡು ಹೋಗುತ್ತಿದ್ದು, ಸೆ.18ರ ಬೆಳಗಿನ ಜಾವ ಲಾರಿಯಲ್ಲಿಯೇ ಮಲಗಿಕೊಂಡಿದ್ದಾರೆ. ಆಗ ಮೂವರು ಬೈಕ್‌ ನಲ್ಲಿ ಬಂದಿದ್ದಾರೆ. ಅದರಲ್ಲಿ ಇಬ್ಬರು ಲಾರಿಯ ಡೋರ್ ಗಳಿಂದ ಕ್ಯಾಬಿನ್ ಗೆ ಒಳಗೆ ಪ್ರವೇಶಿಸಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಬೆಂಕಿ ಪಟ್ಟಣ ಕೊಡುವಂತೆ ಎಬ್ಬಿಸಿದ್ದಾನೆ. ನಂತರ ಹಣವನ್ನು ಕೊಡುವಂತೆ ಕೇಳಿ ಚಾಕುವಿನಿಂದ ರಷೀದ್ ಅವರ ಕೈ ಮತ್ತು ಕಾಲಿಗೆ ಹೊಡೆದಿದ್ದಾನೆ. ಪಕ್ಕದಲ್ಲಿದ್ದ ಕ್ಲೀನರ್ ಮೇಲೆಯೂ ಹಲ್ಲೆ ಮಾಡಲಾಗಿದೆ. ₹8 ಸಾವಿರ ದೋಚಿ ಪರಾರಿಯಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಗಾಯಾಳುಗಳು
ಈ ವಿಚಾರವನ್ನು ಟಾನ್ಸ್ ಪೋರ್ಟ್ ಮಾಲೀಕರಿಗೆ ತಿಳಿಸಿದ್ದು, ಗಾಯಾಳುಗಳನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿ ಓಲ್ಡ್ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಟ್ಟೆಪಾಡಿಗಾಗಿ ಗುಳೆ ಬಂದಿದ್ದ ಕಾರ್ಮಿಕನ ದಾರುಣ ಸಾವು

Leave a Reply

Your email address will not be published.