HIGHLIGHTS
- ಶಿವಮೊಗ್ಗದಿಂದ ರಾಜ್ಯದ ವಿವಿಧೆಡೆ ಸಂಪರ್ಕ ಕಲ್ಪಿಸುವ ನಾಲ್ಕು ರೈಲುಗಳಿಗೆ ಹೆಚ್ಚುವರಿ ಬೋಗಿ ಸೌಲಭ್ಯ
- ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿ ಅಳವಡಿಕೆ
- ಪ್ರಯಾಣಿಕರು ಇದರ ಪ್ರಯೋಜನ ಪಡೆಯುವಂತೆ ನೈರುತ್ಯ ರೈಲ್ವೆ ಮನವಿ
ಸುದ್ದಿ ಕಣಜ.ಕಾಂ | KARNATAKA | 22 SEP 2022
ಶಿವಮೊಗ್ಗ: ನಾಡಹಬ್ಬ ದಸರಾ (dasara) ಆಚರಣೆಯಲ್ಲಿ ಇಡೀ ರಾಜ್ಯವೇ ಸಂಭ್ರಮದಲ್ಲಿದೆ. ಇದರ ನಡುವೆ ನೈರುತ್ಯ ರೈಲ್ವೆ (south western railway) ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಮುಂದಾಗಿದೆ. ಇದು ತಾತ್ಕಾಲಿಕವಾಗಿದ್ದು, ದಸರಾ ಹಬ್ಬ(festival)ದಲ್ಲಿ ಮಾತ್ರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
READ | ಶಿವಮೊಗ್ಗ ಮೃಗಾಲಯದಲ್ಲಿ ಹಿರಿಯ ಹುಲಿ ಸಾವು, ಕಾರಣವೇನು?
ಯಾವ್ಯಾವ ರೈಲುಗಳಿಗೆ ಹೆಚ್ಚುವರಿ ಬೋಗಿ?
- ಮೈಸೂರು(Mysuru)- ತಾಳಗುಪ್ಪ(Talaguppa)- ಮೈಸೂರು ಎಕ್ಸ್ ಪ್ರೆಸ್ (express) ರೈಲು (16227/ 16228) | ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಬೋಗಿ (second class sleeper bogie) ಹೆಚ್ಚುವರಿಯಾಗಿ ಅಳವಡಿಸಲಾಗಿದ್ದು, ಮೈಸೂರಿನಿಂದ ಹೊರಡುವ ರೈಲಿಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರವರೆಗೆ ಹಾಗೂ ತಾಳಗುಪ್ಪದಿಂದ ಹೊರಡುವ ರೈಲಿಗೆ ಸೆ.27ರಿಂದ ಅ.6ರ ವರೆಗೆ ಹೆಚ್ಚುವರಿ ಬೋಗಿ ಸೌಲಭ್ಯ ಕಲ್ಪಿಸಲಾಗಿದೆ.
- ಮೈಸೂರು- ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು(16221/ 16222) | ಎರಡು ಸೆಕೆಂಡ್ ಕ್ಲಾಸ್ ಬೋಗಿ ನೀಡಲಾಗಿದೆ. ಮೈಸೂರಿನಿಂದ ಹೊರಡುವ ರೈಲಿಗೆ ಸೆ.26ರಿಂದ ಅಕ್ಟೋಬರ್ 5ರವರೆಗೆ, ತಾಳಗುಪ್ಪದಿಂದ ತೆರಳುವ ರೈಲಿಗೆ ಸೆ.27ರಿಂದ ಅ.6ವರೆಗೆ.
- ಮೈಸೂರು- ಶಿವಮೊಗ್ಗ-ಮೈಸೂರು ಎಕ್ಸ್ ಪ್ರೆಸ್ ರೈಲು (ಸಂಖ್ಯೆ 16225/ 16226) | ಎರಡು ಸೆಕೆಂಡ್ ಕ್ಲಾಸ್ ಬೋಗಿಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುವುದು. ಮೈಸೂರಿನಿಂದ ತೆರಳುವ ಈ ರೈಲಿಗೆ ಸೆ.26ರಿಂದ ಸ.5ವರೆಗೆ ಹಾಗೂ ತಾಳಗುಪ್ಪದಿಂದ ತೆರಳುವಾಗ ಸೆ.28ರಿಂದ ಅ.7ರ ವರೆಗೆ ಹೆಚ್ಚುವರಿ ಬೋಗಿ ಸೌಲಭ್ಯ.
- ಶಿವಮೊಗ್ಗ- ಚಿಕ್ಕಮಗಳೂರು- ಶಿವಮೊಗ್ಗ ಪ್ಯಾಸೆಂಜರ್ ರೈಲು (07365/ 07366) | ಎರಡು ಸೆಕೆಂಡ್ ಕ್ಲಾಸ್ ಬೋಗಿಗಳ ಅಳವಡಿಕೆ ಮಾಡಲಾಗುವುದು. ಈ ರೈಲು ಶಿವಮೊಗ್ಗದಿಂದ ತೆರಳುವಾಗ ಸೆ.26ರಿಂದ ಅ.5ರವರೆಗೆ ಹಾಗೂ ತಾಳಗುಪ್ಪದಿಂದ ಹೊರಡುವಾಗ ಸೆ.28ರಿಂದ ಅ.7ವರೆಗೆ ಬೋಗಿ ಸೌಲಭ್ಯ ಇರಲಿದೆ.
https://suddikanaja.com/2022/03/05/case-has-been-registered-at-vinobanagar-station-for-allegedly-selling-car-and-fraud/