SUDA | ಸ್ಬೂಡಾ‌ ಖಡಕ್‌ ವಾರ್ನಿಂಗ್, ಮನೆ ಕಟ್ಟದಿದ್ದರೆ ನಿವೇಶನ ರದ್ದತಿ ಎಚ್ಚರಿಕೆ, ವರದಿ ಸಲ್ಲಿಕೆಗೆ ಡೆಡ್ ಲೈನ್

Ashraya mane

 

 

HIGHLIGHTS

  • ನಿವೇಶನವನ್ನು ಗುತ್ತಿಗೆ ಕರಾರು ಮಾಡಿಕೊಂಡ ದಿನಾಂಕದಿಂದ 5 ವರ್ಷದೊಳಗಾಗಿ ಅಥವಾ ಪ್ರಾಧಿಕಾರವು ಲಿಖಿತವಾಗಿ ಅನುಮತಿ ವಿಸ್ತರಿಸಿದ ಅವಧಿಯೊಳಗಾಗಿ ಕಟ್ಟಡ ಕಟ್ಟತಕ್ಕದ್ದು
  • ಮನೆ ನಿರ್ಮಾಣದ ಬಗ್ಗೆ ‌45 ದಿನಗಳಲ್ಲಿ ವರದಿ ಮಾಡಿಕೊಳ್ಳುವಂತೆ ಡೆಡ್ ಲೈನ್

ಸುದ್ದಿ ಕಣಜ.ಕಾಂ | SHIVAMOGGA CITY | 24 SEP 2022
ಶಿವಮೊಗ್ಗ: ಶಿವಮೊಗ್ಗ -ಭದ್ರಾವತಿ (bhadravathi) ನಗರಾಭಿವೃದ್ಧಿ ಪ್ರಾಧಿಕಾರ (Shimoga Urban Development Authority) ನಿವೇಶ‌ನ‌ ಪಡೆದವರಿಗೆ ಖಡಕ್ ವಾರ್ನಿಂಗ್ ನೀಡಿದೆ.
ಸೂಡಾದಿಂದ ರಚಿಸಲಾದ ಬಡಾವಣೆಗಳಲ್ಲಿ ನಿವೇಶನ ಪಡೆದಂತಹ ನಿವೇಶನ ಹಂಚಿಕೆದಾರರು ನಿವೇಶನವನ್ನು ಗುತ್ತಿಗೆ ಕರಾರು ಮಾಡಿಕೊಂಡ ದಿನಾಂಕದಿಂದ 5 ವರ್ಷದೊಳಗಾಗಿ ಅಥವಾ ಪ್ರಾಧಿಕಾರವು ಲಿಖಿತವಾಗಿ ಅನುಮತಿ ವಿಸ್ತರಿಸಿದ ಅವಧಿಯೊಳಗಾಗಿ ವಾಸದ ಕಟ್ಟಡವನ್ನು ಕಟ್ಟತಕ್ಕದೆಂದು 1991ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಿವೇಶನ ಹಂಚಿಕೆ) 19(6)ರಲ್ಲಿ ತಿಳಿಸಲಾಗಿದೆ.

READ | ಶಿವಮೊಗ್ಗ ಪೊಲೀಸರಿಂದ ಬಂಧಿತ ಶಂಕಿತ ಉಗ್ರ ಮಾಜ್’ನ ತಂದೆ ಮುನೀರ್ ಸಾವು

ನಿವೇಶನ ಪಡೆದವರು ಸಕ್ಷಮ ಪ್ರಾಧಿಕಾರದಿಂದ ಕಟ್ಟಡ ಪರವಾನಗಿಯನ್ನು ಪಡೆದು ವಾಸದ ಕಟ್ಟಡವನ್ನು ಕಟ್ಟಿರುವ ಬಗ್ಗೆ ದಾಖಲೆಗಳೊಂದಿಗೆ 45 ದಿವಸದೊಳಗಾಗಿ ಪ್ರಾಧಿಕಾರಕ್ಕೆ ವರದಿ ಮಾಡಿಕೊಳ್ಳುವಂತೆ ಹಾಗೂ ತಪ್ಪಿದಲ್ಲಿ 1991ರ ನಿವೇಶನ ಹಂಚಿಕೆ ನಿಯಮದಂತೆ ನಿವೇಶನ ಹಂಚಿಕೆಯನ್ನು ರದ್ದುಪಡಿಸುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸೂಡಾ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://suddikanaja.com/2022/09/23/shivamogga-sp-bm-lakshmi-prasad-press-meet-on-arrest-of-suspected-terrorist-at-shimoga/

Leave a Reply

Your email address will not be published. Required fields are marked *

error: Content is protected !!