Shivamogga Police | ಬೆಳ್ಳಂಬೆಳಗ್ಗೆ ಕಾರ್ಯಾಚರಣೆ, ಶಿವಮೊಗ್ಗ, ಭದ್ರಾವತಿಯಲ್ಲಿ ಐವರು ಪಿಎಫ್.ಐ ಕಾರ್ಯಕರ್ತರನ್ನು ವಶ, ಈ ಬಗ್ಗೆ ಪೊಲೀಸರೇನು ಹೇಳ್ತಾರೆ?

police

 

 

HIGHLIGHTS

  • ಶಿವಮೊಗ್ಗ, ಭದ್ರಾವತಿಯಲ್ಲಿ ಒಟ್ಟು5 ಜನರನ್ನು ವಶಕ್ಕೆ ಪಡೆದ ಪೊಲೀಸರು
  • ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ವಶಕ್ಕೆ, Preventive Detentionಗೆ ತಾಲ್ಲೂಕು ದಂಡಾಧಿಕಾರಿಗಳ ಆದೇಶ
  • ಶಿವಮೊಗ್ಗದ ತುಂಗಾನಗರ, ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸುದ್ದಿ ಕಣಜ.ಕಾಂ | DISTRICT | 27 SEP 2022
ಶಿವಮೊಗ್ಗ: ಜಿಲ್ಲೆಯ ಎರಡು ಕಡೆಗಳಲ್ಲಿ ಪೊಲೀಸರು ಮಂಗಳವಾರ ಬೆಳ್ಳಬೆಳಗ್ಗೆ ದಾಳಿ‌ ನಡೆಸಿ ಒಟ್ಟು ಐವರು ಪಿಎಫ್‌ಐ (PFI) ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ನಗರ ಮತ್ತು ಭದ್ರಾವತಿಯಲ್ಲಿ ಪಿಎಫ್.ಐ ಕಾರ್ಯಕರ್ತರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಬಳಿಕ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಶಿವಮೊಗ್ಗದ ತುಂಗಾನಗರ(Tunga nagara), ಭದ್ರಾವತಿಯ ಓಲ್ಡ್ ಟೌನ್ (old town) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

READ | ಪಶ್ಚಿಮಘಟ್ಟ ಸಂರಕ್ಷಿಸಲು ಸರ್ಕಾರಕ್ಕೆ‌ ಸಮಗ್ರ ವರದಿ ಸಲ್ಲಿಕೆ, ಗೋವಿಂದ್ ಜಟ್ಟಪ್ಪ ನಾಯ್ಕ ಹೇಳಿದ್ದೇನು?

ದಾಳಿಯ ಬಗ್ಗೆ ಪೊಲೀಸರೇನು ಹೇಳ್ತಾರೆ?
“ಶಿವಮೊಗ್ಗ ಜಿಲ್ಲೆಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರಾವತಿಯಲ್ಲಿ 3 ಜನ ಮತ್ತು ಶಿವಮೊಗ್ಗದಲ್ಲಿ 2 ಜನರನ್ನು ಸೇರಿ ಒಟ್ಟು 5 ಜನರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದು ಆಯಾ ತಾಲ್ಲೂಕು ದಂಡಾಧಿಕಾರಿಗಳ ಮುಂದೆ ಹಾಜರು ಪಡಿಸಿದ್ದು, ಈ ವ್ಯಕ್ತಿಗಳ Preventive Detentionಗೆ ತಾಲ್ಲೂಕು ದಂಡಾಧಿಕಾರಿಗಳು ಆದೇಶಿಸಿರುತ್ತಾರೆ” ಎಂದು ತಿಳಿಸಿದ್ದಾರೆ.

https://suddikanaja.com/2022/09/25/punit-rajkumar-film-festival-at-shivamogga/

Leave a Reply

Your email address will not be published. Required fields are marked *

error: Content is protected !!