Political news | ರಾಜ್ಯ ರಾಜಕಾರಣದಲ್ಲಿ ಆಪ್ ಭಿನ್ನವಾಗಿ ಎಂಟ್ರಿ, ಮತದಾರರಿಗೆ ಓಪನ್ ಚಾಲೆಂಜ್

Pruthvi Reddy

 

 

HIGHLIGHTS 

  • ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಆಪ್ ವಾಗ್ದಾಳಿ
  • ರಾಜ್ಯದ 224 ವಿಧಾನಸಭೆ ಕ್ಷೇತ್ರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಚುನಾವಣೆಯಲ್ಲಿ ಸ್ಪರ್ಧೆ

ಸುದ್ದಿ ಕಣಜ.ಕಾಂ | DISTRICT | 23 SEP 2022
ಶಿವಮೊಗ್ಗ(shivamogga): ರಾಜ್ಯ ರಾಜಕಾರಣದಲ್ಲಿ ಆಪ್ ಆದ್ಮಿ ಪಾರ್ಟಿ aam aadmi party (ಆಪ್-AAP) ಭಿನ್ನವಾಗಿ ಎಂಟ್ರಿ ಕೊಟ್ಟಿದೆ. ಒಂದುವೇಳೆ, ಪ್ರಣಾಳಿಕೆಯಲ್ಲಿನ ಅಂಶಗಳನ್ನು ಈಡೇರಿಸಲು ಪಕ್ಷದಿಂದ ಸಾಧ್ಯವಾಗದಿದ್ದರೆ ಮತದಾರರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ (Pratap reddy) ಹೇಳಿದರು.

ರಾಜ್ಯ ಸರ್ಕಾರ ಮೋಸದ ಸರ್ಕಾರವಾಗಿದೆ. ಇಲ್ಲಿ ಯಾವುದಕ್ಕೂ ನ್ಯಾಯ ಸಿಗುವುದಿಲ್ಲ. ಚುನಾವಣೆಗೆ ಮುಂಚೆ ನೀಡಿದ ಆಶ್ವಾಸನೆಗಳು ಈಡೇರಿಲ್ಲ. ಮುಖ್ಯಮಂತ್ರಿ ಅವರಿಗೆ ಸ್ವಂತ ಬುದ್ಧಿಯೇ ಇಲ್ಲ. ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಹೇಳಿದಂತೆ ಆಡಳಿತ ನಡೆಯುತ್ತಿದೆ. ಕಾಂಗ್ರೆಸ್ ಕೂಡ ವಿರೋಧ ಪಕ್ಷದ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಒಳಜಗಳಗಳು ಹೆಚ್ಚಿವೆ. ಜೆಡಿಎಸ್ ಮೂಕ ಪ್ರೇಕ್ಷಕನಾಗಿದೆ.
| ಮುಖ್ಯಮಂತ್ರಿ ಚಂದ್ರು, ಆಪ್ ಪ್ರಚಾರ ಉಸ್ತುವಾರಿ

ಬಿಜೆಪಿ(BJP), ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷಗಳು ಭ್ರಷ್ಟಾಚಾರ(Corruption)ದಲ್ಲಿ ಮುಳುಗಿವೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಅಭಿವೃದ್ಧಿಯೇ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅಭಿವೃದ್ಧಿಯ ಬಗ್ಗೆ ತುಡಿತವಿರುವ ಪಕ್ಷದ ಅವಶ್ಯಕತೆ ಇದೆ. ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ (arvind kejriwal) ನೇತೃತ್ವದ ಸರ್ಕಾರವೇ ಮಾದರಿಯಾಗಿದೆ ಎಂದರು.

READ | ಶಿವಮೊಗ್ಗದಲ್ಲಿ ಬಂಧಿತ ಶಂಕಿತ ಉಗ್ರರು ಬಾಂಬ್ ತಯಾರಿಸುವುದನ್ನು ಕಲಿತಿದ್ದೆಲ್ಲಿ? ವಿಚಾರಣೆ ವೇಳೆ ಗೊತ್ತಾಯ್ತು ರೋಚಕ ವಿಚಾರಗಳು

ರಾಜ್ಯದ 224 ಕ್ಷೇತ್ರ, ಸ್ಥಳೀಯ ಸಂಸ್ಥೆಗಳಲ್ಲೂ ಸ್ಪರ್ಧೆ
ರಾಜ್ಯದ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳು ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಆಪ್ ಸ್ಪರ್ಧಿಸಲಿದೆ. ಇದಕ್ಕಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಲಾಗುವುದು. ಮನೆ ಮನೆಗೆ ತಲುಪಿ ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಚರ್ಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಪ್ರಮುಖರಾದ ಕೆ.ದಿವಾಕರ್, ಏಳುಮಲೈ ಬಾಬು, ನವಿಲೇಶ್, ಮನೋಹರ್ ಗೌಡ, ಕೆ.ಕಿರಣ್, ನೇತ್ರಾವತಿ, ದರ್ಶನ್ ಜೈನ್ ಉಪಸ್ಥಿತರಿದ್ದರು.

https://suddikanaja.com/2022/09/07/indias-first-lady-cricket-pitch-curator-jacintha-kalyan-visited-shivamogga/

Leave a Reply

Your email address will not be published. Required fields are marked *

error: Content is protected !!