Court News | ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ

Shivamogga Court

 

 

ಸುದ್ದಿ ಕಣಜ.ಕಾಂ‌ | DISTRICT | 03 SEP 2022
ಶಿವಮೊಗ್ಗ: ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಕೊಂದ ಪತಿಗೆ ಜೀವಾವಧಿ ಶಿಕ್ಷೆ ಮತ್ತು ₹40,000 ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 4 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ನ್ಯಾಯಾಲಯ ಆದೇಶಿಸಿದೆ.

READ | ಶಿವಮೊಗ್ಗದಲ್ಲಿ ತರಳಬಾಳು ಶ್ರೀ ಎಚ್ಚರಿಕೆ, ಹೇಗಿತ್ತು ‘ನಮ್ಮ ನಡೆ ಶಾಂತಿಯ ಕಡೆಗೆ’?

ಬಿಳಕಿ ಗ್ರಾಮದ ವಾಸಿ ಮಹೇಶ್ ಕುಮಾರ(31) ಶಿಕ್ಷೆ ವಿಧಿಸಲಾಗಿದೆ. ಈತ 2020ರ ಏಪ್ರಿಲ್‌ 13ರಂದು ಪತ್ನಿ ಮಂಗಳ ಅಲಿಯಾಸ್ ಚೈತ್ರಾ(28) ಅವರು ಮಲಗಿದ್ದಾಗ ಕುತ್ತಿಗೆಯನ್ನು ಹಿಸುಕಿ, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಶಿರಾಳಕೊಪ್ಪ ಪೊಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿಯಾಗಿದ್ದ ಶಿಕಾರಿಪುರ ವೃತ್ತದ ಸಿಪಿಐ ಬಸವರಾಜ್‌ ಅವರು ಪ್ರಕರಣದ ತನಿಖೆ ಕೈಗೊಂಡು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ನ್ಯಾಯಧೀಶ ಕೆ.ಎಸ್.ಮಾನು ಅವರು ಆರೋಪಿ ಮಹೇಶ್ ಕುಮಾರ್ ವಿರುದ್ಧ ಐಪಿಸಿ ಕಲಂ 302 ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು ₹40,000 ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 4 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ‌ ಅಭಿಯೋಜಕ ಶಾಂತರಾಜ್‌ ವಾದ ಮಂಡಿಸಿದ್ದರು.

https://suddikanaja.com/2022/06/09/fourth-district-additional-and-session-court-sentenced-four-persons-to-life-imprisonment-at-bhadravathi/

Leave a Reply

Your email address will not be published. Required fields are marked *

error: Content is protected !!