ಶಿವಮೊಗ್ಗ RTO ಕಚೇರಿಯಲ್ಲಿ ಆಟೋ ಚಾಲಕರಿಗೆ ಸಿಗುತ್ತಿಲ್ಲ‌ ಡ್ರೈವಿಂಗ್ ಲೈಸೆನ್ಸ್

 

 

ಸುದ್ದಿ ಕಣಜ.ಕಾಂ | DISTRICT | POLICE MEETING
ಶಿವಮೊಗ್ಗ: ಆಟೋ‌ ಚಾಲನೆಗೆ ಅಗತ್ಯವಿರುವ ಪರವಾ‌ನಗಿ(ಲೈಸೆನ್ಸ್)ಯನ್ನು ಆರ್.ಟಿ.ಓ ಕಚೇರಿಯಲ್ಲಿ ನೀಡುತ್ತಿಲ್ಲ. ಹಲವು ಸಲ ಭೇಟಿ‌ ನೀಡಿ‌ ಅರ್ಜಿ‌ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಟೋ ಚಾಲಕರೊಬ್ಬರು ಅಳಲು ತೋಡಿಕೊಂಡರು.
ನಗರದ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ ಗುರುವಾರ ನಡೆದ ಆಟೋ ಚಾಲಕರ ಸಭೆಯಲ್ಲಿ ಆಟೋ ಚಾಲಕರು ತಮ್ಮ ಸಮಸ್ಯೆಗಳನ್ನು ತೋಡಿಕೊಂಡರು.

READ | ಕೋವಿಡ್ 3ನೇ ಅಲೆ, ಶಿವಮೊಗ್ಗದಲ್ಲಿ ಶಾಲೆ ಆರಂಭದ ಬಗ್ಗೆ ತಜ್ಞರ ಸಲಹೆ, ವೈದ್ಯರ ಟಾಪ್ 5 ಸೂಚನೆ

ಲಘು ವಾಹನಗಳ ಪರವಾನಗಿ ಆಧಾರದ ಮೇಲೆಯೇ ಆಟೋ ಚಾಲನೆ ಮಾಡುವಂತೆ ಸೂಚಿಸಲಾಗುತ್ತಿದೆ. ಆದರೆ, ಅದರಿಂದ ರಾತ್ರಿ ಹೊತ್ತಲ್ಲಿ ಆಟೋಗಳನ್ನು ಹಿಡಿದಾಗ ಆಟೋ ಚಾಲನಾ ಪರವಾನಗಿ ಇಲ್ಲದೇ ಆಟೋ ಚಲಾಯಿಸುವಂತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತಿದ್ದಾರೆ. ಇದರಿಂದಾಗಿ, ಹಲವು ಆಟೀ ಚಾಲಕರು ದಂಡ ಕೂಡ ಪಾವತಿಸಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕಲ್ಪಿಸಬೇಕು. ಚಾಲಕರಿಗೆ ಆಗುತ್ತಿರುವ ಅನಾನುಕೂಲ ಸರಿಪಡಿಸಬೇಕು ಎಂದು ಮನವಿ ಮಾಡಿದರು.
ಮತ್ತೊಬ್ಬ ಚಾಲಕರು ಮಾತನಾಡಿ, ನಗರದಲ್ಲಿ ಆಟೋ ಚಾಲಕರಾದ ನಾವು ಹಲವು ವರ್ಷಗಳಿಂದ ಜನರಿಗೆ ಉತ್ತಮ ಸೇವೆ ನೀಡುತ್ತ ಬಂದಿದ್ದೇವೆ.‌ ಈ ಹೆಸರನ್ನು ಮುಂದೆಯೂ ಉಳಿಸಿಕೊಂಡು ಹೋಗುತ್ತೇವೆ ಎಂದರು.
ಕುಂದುಕೊರತೆಯನ್ನು ಆಲಿಸಿದ ಎಸ್.ಪಿ. ಬಿ.ಎಂ.ಲಕ್ಷ್ಮೀ ಪ್ರಸಾದ್, ಸಮಸ್ಯೆಗಳ ಬಗ್ಗೆ ಗಮನ ಹರಿಸುವ ಭರವಸೆ ನೀಡಿದರು. ನಂತರ, ಸಭೆಯಲ್ಲಿ ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ನೀಡಲಾಯಿತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಕ್ರಂ ಆಮ್ಟೆ ಸೇರಿದಂತೆ ಆಟೋ ಚಾಲಕರು, ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

https://www.suddikanaja.com/2021/08/02/mp-by-raghavendra-appreciated-the-work-of-auto-drivers/

error: Content is protected !!