AITA Code | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ದೊರಕಿತು ಐಎಟಿಎ ಕೋಡ್, ಏನಿದು, ಪ್ರಯೋಜನಗಳೇನು?

Shivamogga airport IATA

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ 
SHIVAMOGGA: ಶಿವಮೊಗ್ಗ ತಾಲೂಕಿನ ಸೋಗಾನೆ(Sogane)ಯಲ್ಲಿರುವ ವಿಮಾನ ನಿಲ್ದಾಣ(Shimoga Airport)ಕ್ಕೆ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಓ)ಯು ಎಐಟಿಎ ಕೋಡ್ ದೊರೆತಿದೆ. ಈ ಮೂಲಕ ವಿಮಾನ ನಿಲ್ದಾಣಕ್ಕೆ ಜಾಗತಿಕ ಹಸಿರು ನಿಶಾನೆ ಸಿಕ್ಕಿದೆ.
ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆಯು (ಐಸಿಎಓ) ಹೊರತರುವ ಎಐಪಿ ಮ್ಯಾಗ್‍ಜಿನ್’ನಲ್ಲಿ ವಾರದ ಹಿಂದಷ್ಟೇ ಇದು ಪ್ರಕಟವಾಗಿದೆ.

READ | ಶಿವಮೊಗ್ಗದಲ್ಲಿ ಮೂವರಲ್ಲಿ ಯಾರಿಗೆ ಸಚಿವ ಸ್ಥಾನ? ಯಾರದ್ದೇನು ಪ್ಲಸ್ ಪಾಯಿಂಟ್

ಎಐಟಿಎ ಕೋಡ್ ಮಹತ್ವವೇನು?
ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯು ನೀಡುವ ವಿಮಾನ ನಿಲ್ದಾಣ ಕೋಡ್ ಇದಾಗಿದೆ. ಇದನ್ನು ಸರಳ ಭಾಷೆಯಲ್ಲಿ ಸ್ಟೇಷನ್ ಅಥವಾ ಸ್ಥಳದ ಕೋಡ್ ಎನ್ನಬಹುದು. ಇದು ಮೂರು ಅಕ್ಷರದ ಸಂಕೇತವನ್ನು ( Location Identifier is a unique 3-letter code) ಹೊಂದಿರುತ್ತದೆ. ವಿಶ್ವದ ಎಲ್ಲ ನಿಯೋಜಿತ ವಿಮಾನ ನಿಲ್ದಾಣಗಳಿಗೆ ಈ ಕೋಡ್ ನೀಡಲಾಗುತ್ತದೆ. (ಉದಾಹರಣೆಗೆ ಭಾರತದ ಅಮೃತಸರದಲ್ಲಿರುವ ವಿಮಾನ ನಿಲ್ದಾಣಕ್ಕೆ ಎಟಿಕ್ಯೂ, ಬೆಂಗಳೂರಿಗೆ (Bangalore) ಬಿಎಲ್.ಆರ್, ಮೈಸೂರಿಗೆ (Mysore) ಎಂವೈಕ್ಯೂ) ಹೀಗೆ ಮೂರು ಅಕ್ಷರಗಳ ಕೋಡ್ ನೀಡಲಾಗುತ್ತದೆ.
ವಿಮಾನ ನಿಲ್ದಾಣಕ್ಕೆ ಈ ಕೋಡ್ ದೊರೆತ 45 ದಿನಗಳ ನಂತರ ವಿಮಾನ ಹಾರಾಟ ಆರಂಭಿಸಬಹುದಾಗಿದೆ. ಹೀಗಾಗಿ, ಶಿವಮೊಗ್ಗ ವಿಮಾನ ನಿಲ್ದಾಣದ ಪಾಲಿಗೆ ಇದು ಮೈಲಿಗಲ್ಲೆಂದು ಪರಿಗಣಿಸಬಹುದಾಗಿದೆ.
ಎಐಟಿಎ ಕೋಡ್’ನಲ್ಲೇನಿರುತ್ತದೆ?
ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದ ಭೌಗೋಳಿಕ ನೆಲೆ ಎಲ್ಲಿದೆ? ಅದರ ತಾಂತ್ರಿಕ ವಿವರಗಳೇನು? ಎಂಬುವುದು ಕೋಡ್ ಒಳಗೊಂಡಿರುತ್ತದೆ. ಈ ಕೋಡ್ ವಿಶ್ವದಾದ್ಯಂತ ಇಲ್ಲಿಂದ ವಿಮಾನ ಹಾರಾಟಕ್ಕೆ ಬಳಕೆ ಆಗಲಿದೆ. ಈ ಮೂಲಕ ವಿಮಾನ ಹಾರಾಟಕ್ಕಿದ್ದ ತಾಂತ್ರಿಕ ಅಡಚಣೆ ನಿವಾರಣೆಯಾಗಿದೆ.
ಕೋಡ್ ಅನ್ನು ಐಎಟಿಎ ಪ್ರೊಪೊಸಿಷನ್ -63 ನಿರ್ಧರಿಸುತ್ತದೆ. ಮಾಂಟ್ರಿಯಲ್‌ನಲ್ಲಿರುವ ಐಎಟಿಎ ಪ್ರಧಾನ ಕಚೇರಿಯಿಂದ ನಿರ್ವಹಿಸಲ್ಪಡುತ್ತದೆ. ಈ ಚಿಹ್ನೆಗಳನ್ನು ವರ್ಷಕ್ಕೆ ಎರಡು ಬಾರಿ ಐಎಟಿಎ ಏರ್‌ಲೈನ್ ಕೋಡ್ ಡೈರೆಕ್ಟರಿಯಲ್ಲಿ (ಕೋಡಿಂಗ್ ಡೈರೆಕ್ಟರಿ) ಪ್ರಕಟಿಸಲಾಗುತ್ತದೆ

Mysuru Court | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

error: Content is protected !!