Mysuru Court | ಮೈಸೂರು ನ್ಯಾಯಾಲಯದಲ್ಲಿ 45 ಹುದ್ದೆಗಳು ಖಾಲಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು

Mysuru

 

 

ಸುದ್ದಿ ಕಣಜ.ಕಾಂ ಮೈಸೂರು
MYSURU: ಮೈಸೂರು ಜಿಲ್ಲಾ ನ್ಯಾಯಾಲಯ (Mysuru District Court) ಘಟಕದಲ್ಲಿ ಖಾಲಿ ಇರುವ 45 ಸೇವಕರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹರು ಕೂಡಲೇ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಸಂಸ್ಥೆ- ಮೈಸೂರು ಜಿಲ್ಲಾ ನ್ಯಾಯಾಲಯ (Mysore district court recruitment 2023)
ಹುದ್ದೆಗಳ ಸಂಖ್ಯೆ- 45
ಹುದ್ದೆಯ ಹೆಸರು- ಸೇವಕರು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 05/06/2023
ಅರ್ಜಿ ಸಲ್ಲಿಕೆ ಕೊನೆ ದಿನಾಂಕ– 04/07/2023
ಶುಲ್ಕು ಪಾವತಿ ಕೊನೆ ದಿನಾಂಕ– ಭಾರತೀಯ ಸ್ಟೇಟ್ ಬ್ಯಾಂಕ್ (SBI) ಚಲನ್ ಮುಖಾಂತರ ಶುಲ್ಕ ಪಾವತಿಸಿ 08/07/2023ರೊಳಗೆ
ಅರ್ಜಿ ಸಲ್ಲಿಕೆ ವಿಧಾನ– ಆನ್‍ಲೈನ್
ವೆಬ್‍ಸೈಟ್- https://districts.ecourts.gov.in/mvsuru-onlinerecruitment
NOTIFICATIONCLICK

READ | ಶಾಲಾ ಶಿಕ್ಷಕರ ವೃಂದದ ಹುದ್ದೆಗಳಿಗೆ 20ರಂದು ನಡೆಯಲಿದೆ ದಾಖಲೆ ಪರಿಶೀಲನೆ

ವಿದ್ಯಾರ್ಹತೆ
10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ

  • ಅಭ್ಯರ್ಥಿಗಳ ಆಯ್ಕೆಯನ್ನು ಕರ್ನಾಟಕ, ಅಧೀನ ನ್ಯಾಯಾಲಯಗಳು (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮಗಳು 2007 ಮತ್ತು 2021ರ ಅನ್ವಯ ನೇರ ನೇಮಕಾತಿಯ ಮೂಲಕ ನಡೆಸಲಾಗುವುದು.
  • ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಶೇಕಡವಾರು ಅಂಕಗಳ ಆಧಾರದ ಮೇಲೆ 1 ಹುದ್ದೆಗೆ 10 ಅಭ್ಯರ್ಥಿಗಳಂತೆ ಅತಿ ಹೆಚ್ಚು ಅಂಕ ಪಡೆದ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಹುದ್ದೆಗಳಿಗೆ ಅನುಗುಣವಾಗಿ ಸಂದರ್ಶನಕ್ಕೆ ಕರೆಯಲಾಗುವುದು, ಸಂದರ್ಶನದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
  • ಸಂದರ್ಶನವು 10 ಅಂಕಗಳನ್ನೊಳಗೊಂಡಿರುತ್ತದೆ.
  • ಯಾವುದೇ ವರ್ಗ’ಗಳ ಮಹಿಳಾ ಅಭ್ಯರ್ಥಿಗಳು, ಮಾಜಿ ಸೈನಿಕ ಅಭ್ಯರ್ಥಿಗಳು, ಕನ್ನಡ ಮಾಧ್ಯಮ ಅಭ್ಯರ್ಥಿಗಳು, ಯೋಜನಾ ನಿರಾಶ್ರಿತ ಅಭ್ಯರ್ಥಿಗಳು ಹಾಗೂ ಗ್ರಾಮೀಣ ಅಭ್ಯರ್ಥಿಗಳ ಮೀಸಲಾತಿಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರದೇ ಇದ್ದ ಪಕ್ಷದಲ್ಲಿ, ಆ ಹುದ್ದೆಗಳನ್ನು ಆಯಾ ಪ್ರವರ್ಗಗಳ, ಇತರೆ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು. ಆಯಾ ಪ್ರವರ್ಗಗಳ ಇತರೆ ಅಭ್ಯರ್ಥಿಗಳೂ ಸಹ ಲಭ್ಯವಾಗದಿದ್ದಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಆಯಾ ಪ್ರವರ್ಗಗಳ ಅರ್ಹ ಅಭ್ಯರ್ಥಿಗಳ ಲಭ್ಯತೆಯ ಕೊರತೆಯಿಂದಾಗಿ ಭರ್ತಿ ಮಾಡಲಾಗದ ರಿಕ್ತ ಸ್ಥಾನಗಳನ್ನು ಬ್ಯಾಕ್ ಲಾಗ್ ಎಂದು ಪರಿಗಣಿಸಿ ಮುಂದಕ್ಕೆ ಕೊಂಡೊಯ್ಯಲಾಗುವುದು.
  • ಅಧಿಸೂಚಿಸಲಾಗಿರುವ 45 ಹುದ್ದೆಗಳಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ- 2 ಎ ವರ್ಗದ ದೃಷ್ಟಿಮಾಂಧ್ಯ/ ದೃಷ್ಟಿ ದೋಷವುಳ್ಳ ಅಂಗವಿಕಲತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದೇ
    ಇದ್ದಲ್ಲಿ ಸದರಿ ಸ್ಥಾನವನ್ನು ಮುಂದಿನ ನೇಮಕಾತಿಗೆ ಕೊಂಡೊಯ್ಯಲಾಗುವುದು.
  • ತೃತೀಯ ಲಿಂಗದ ಅಭ್ಯರ್ಥಿಗಳ ಮೀಸಲಾತಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಆ ಹುದ್ದೆಗಳನ್ನು ಆಯಾ ಪ್ರವರ್ಗಕ್ಕೆ ಸೇರಿದ ಪುರುಷ ಅಥವಾ ಮಹಿಳಾ ಅಭ್ಯರ್ಥಿಗಳಿಂದ ಭರ್ತಿ ಮಾಡಲಾಗುವುದು.
  • ಆಯ್ಕೆಯಾದ ಅಭ್ಯರ್ಥಿಗಳು ನೂತನ ಪಿಂಚಣಿ ಯೋಜನೆಗೆ ಒಳಪಡುತ್ತಾರೆ.

ವಯೋಮಿತಿ
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗರಿಷ್ಠ ವಯೋಮಿತಿ ಸಾಮಾನ್ಯ ವರ್ಗ 35 ವರ್ಷ, 2ಎ, 2ಬಿ, 3ಎ, 3ಬಿಗೆ 38 ವರ್ಷ, ಪ.ಜಾತಿ, ಪ.ಪಂಗಡ, ಪ್ರವರ್ಗ -1 40 ವರ್ಷ.

Self employment | ಸ್ವಯಂ ಉದ್ಯೋಗ ಮಾಡಲು‌ ಇಚ್ಛಿಸುವವರಿಗೆ ಇಲ್ಲಿದೆ ಸುವರ್ಣ ಅವಕಾಶ, ಕೂಡಲೇ ಅರ್ಜಿ‌ ಸಲ್ಲಿಸಿ

error: Content is protected !!