ಯುಗಾದಿ, ಹೋಳಿ, ಗುಡ್ ಫ್ರೈಡೇ ಸಂಭ್ರಮಕ್ಕೆ ಬ್ರೇಕ್, ಗುಂಪು ಸೇರಿದರೆ ಬೀಳುತ್ತೆ ಕೇಸ್, ಹೊಸ ಮಾರ್ಗಸೂಚಿಯಲ್ಲಿ ಏನಿದೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ 2ನೇ ಅಲೆಯ ಅಪಾಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮುಂಬರುವ ಯುಗಾದಿ, ಹೋಳಿ ಹಬ್ಬ, ಷಬ್ ಎ ಬರಾತ್, ಗುಡ್ ಫ್ರೈ ಡೇ ಇತ್ಯಾದಿ ಹಬ್ಬಗಳ ಸಂಭ್ರಮಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ.

ಇದನ್ನೂ ಓದಿ | ಕೂಪನ್ ಹಾಕಿ, ‘ಯುವರತ್ನ’ ಚಿತ್ರ ಉಚಿತವಾಗಿ ನೋಡಿ!

ಈ ವೇಳೆ ನಡೆಯಬಹುದಾದ ಸಮಾರಂಭ, ಆಚರಣೆ ಹಾಗೂ ಸಾರ್ವಜನಿಕರು ಗುಂಪು ಸೇರಬಹುದಾದ ಇತರ ಚಟುವಟಿಕೆಗಳಿಂದ ಸೋಂಕು ಹರಡುವ ಸಾಧ್ಯತೆ ಇದೆ. ಹೀಗಾಗಿ, ಹೊಸ ಮಾರ್ಗಸೂಚಿ ಹೊರಡಿಸಿದೆ.
ಈ ರೀತಿ ಸಭೆ ಸಮಾರಂಭಗಳು ಆಚರಣೆಗಳಲ್ಲಿ ಗುಂಪು ಗುಂಪಾಗಿ ಸೇರಿ ಕಾನೂನು ಉಲ್ಲಂಘಿಸಿದರೆ ಅಂತಹ ವ್ಯಕ್ತಿ, ಸಂಘ, ಸಂಸ್ಥೆಗಳ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣ ಕಾಯ್ದೆ 2005 ಹಾಗೂ ಐ.ಪಿ.ಸಿ.ಸೆಕ್ಷನ್ 188 ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ 2020 ಭಾಗ(4), (5) ಮತ್ತು (10) ಅನ್ವಯ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ, ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೋವಿಡ್ 19 ರೋಗ ನಿಯಂತ್ರಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸುವಂತೆ ಶಿವಮೊಗ್ಗ ಮಹಾನಗರಪಾಲಿಕೆ ಆಯುಕ್ತ ಚಿದಾನಂದ್ ಎಸ್.ವಟಾರೆ ತಿಳಿಸಿದ್ದಾರೆ.

https://www.suddikanaja.com/2021/02/08/penalty-on-food-feeding-to-animals-in-agumbe-ghat/

error: Content is protected !!