Monkey | ಮಲೆನಾಡಿನ ಗ್ರಾಮಗಳಲ್ಲಿ ಹೆಚ್ಚಿದ ಮಂಗಗಳ‌ ಕಾಟ, ಅಡಿಕೆ, ತೆಂಗು ರಕ್ಷಣೆಗೆ ಮನವಿ

Hosanagara map

 

 

HIGHLIGHTS

  • ಹೊಸನಗರ ತಾಲೂಕಿನ ದುಮ್ಮಾ, ಕಾಳಿಕಾಪುರದಲ್ಲಿ ಹೆಚ್ಚಿದ ಮಂಗಗಳ‌ ಹಾವಳಿ
  • ಗದ್ದೆ, ತೋಟ, ಮನೆಗಳಿಗೆ ನುಗ್ಗುತ್ತಿರುವ ಮಂಗಗಳು, ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಕೆ
  • ಅಡಿಕೆ, ತೆಂಗು, ಭತ್ತವನ್ನು ಹಾಳು ಮಾಡುತ್ತಿರುವ ಮಂಗಗಳು, ಶೀಘ್ರ ಕಡಿವಾಣಕ್ಕೆ ಒತ್ತಾಯ

ಸುದ್ದಿ ಕಣಜ.ಕಾಂ | DISTRICT | 05 OCT 2022
ಹೊಸನಗರ: ಮಂಗಗಳ ಕಾಟ ಹೆಚ್ಚಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ತಾಲೂಕಿನ ದುಮ್ಮಾ ಮತ್ತು ಕಾಳಿಕಾಪುರ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮ‌ನವಿ ಮಾಡಿದ್ದಾರೆ.

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಮಹತ್ವದ ಘೋಷಣೆ

ಕೆಲವು ದಿನಗಳಿಂದ ಮಂಗಗಳ ಉಪಟಳ ಹೆಚ್ಚಿದ್ದು, ಅಡಿಕೆ, ತೆಂಗು ಮತ್ತು ಭತ್ತ ಹಾಳು ಮಾಡುತ್ತಿವೆ. ಬೆಳೆಗಳ ರಕ್ಷಣೆಗಾಗಿ ತೋಟಗಳಲ್ಲಿ ವಾಸಿಸಬೇಕಾಗಿದೆ. ಇತ್ತ ಮನೆಗಳಿಗೂ ಮಂಗಗಳು ನುಗ್ಗುತ್ತಿವೆ. ವಸ್ತುಗಳನ್ನು ಎತ್ತಿಕೊಂಡು ಹೋಗುತ್ತಿವೆ. ಇದೆಲ್ಲದಕ್ಕೂ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ವಲಯ ಅರಣ್ಯ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸುವಾಗ ಗ್ರಾಮದ ಮುಖಂಡರಾದ ಎಂ.ಎಂ.ನೀಲಕಂಠ, ಚೇತು, ಪ್ರಶಾಂತ್, ಗಣೇಶ್, ವಿನಯ್ ಕುಮಾರ್ ಉಪಸ್ಥಿತರಿದ್ದರು.

https://suddikanaja.com/2022/10/04/tunga-arathi-at-tunga-river-shivamogga/

Leave a Reply

Your email address will not be published. Required fields are marked *

error: Content is protected !!