Shivamogga dasara | ಶಿವಮೊಗ್ಗ ದಸರಾಗೆ ಸಕಲ‌ ಸಿದ್ಧತೆ, ರೆಡಿಯಾಯ್ತು ಬನ್ನಿ ಮಂಟಪ, ಎಷ್ಟು ಗಂಟೆಗೆ ಅಂಬು ಕಡಿಯಲಾಗುವುದು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Banni Mantapa

 

 

HIGHLIGHTS

  • ಶಿವಮೊಗ್ಗದಲ್ಲಿ ವಿಜಯ ದಶಮಿ ಆಚರಣೆಗೆ ಸಕಲ ಸಿದ್ಧತೆ, ಮಧ್ಯಾಹ್ನ ನಂದಿ ಧ್ವಜಕ್ಕೆ ಪೂಜೆ ಬಳಿಕ ಜಂಬೂ ಸವಾರಿ ಆರಂಭ
  • ಫ್ರಿಡಂ ಪಾರ್ಕ್’ನಲ್ಲಿ ಬನ್ನಿ ಮಂಟಪ ರೆಡಿ, ಸಂಜೆ ತಹಸೀಲ್ದಾರ್ ಅವರಿಂದ‌ ಅಂಬು ಛೇದನ
  • ನೂಕುನುಗ್ಗಲು‌ತಪ್ಪಿಸಲಿ ಫ್ರೀಡಂ ಪಾರ್ಕ್’ನಲ್ಲಿ‌ ಬ್ಯಾರಿಕೆಡ್, ಕಂಬಗಳನ್ನು‌ ನೆಟ್ಟು ಪೂರ್ವ ಸಿದ್ಧತೆ

ಸುದ್ದಿ ಕಣಜ.ಕಾಂ | DISTRICT | 05 OCT 2022
ಶಿವಮೊಗ್ಗ: ನಗರದಲ್ಲಿ ವಿಜಯ ದಶಮಿ ಆಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಫ್ರೀಡಂ ಪಾರ್ಕ್‌ನಲ್ಲಿ ಬನ್ನಿ ಮಂಟಪ, ಸಾರ್ವಜನಿಕರ ಆಗಮನ ಮತ್ತು ನಿರ್ಗಮನಕ್ಕೂ ಅಗತ್ಯ ಮಾರ್ಗವನ್ನು ಸಿದ್ಧಪಡಿಸಲಾಗಿದೆ. ನೂಕುನುಗ್ಗಲು ತಪ್ಪಿಸಲು ಬ್ಯಾರಿಕೆಡ್ ಮತ್ತು ಕಂಬಗಳನ್ನು ಹಾಕಲಾಗಿದೆ. ಅಂಬು ಛೇದನಕ್ಕೆ ಸುಸಜ್ಜಿತ ವೇದಿಕೆ ನಿರ್ಮಿಸಲಾಗಿದೆ.

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಮಹತ್ವದ ಘೋಷಣೆ

ಎಷ್ಟು ಹೊತ್ತಿಗೆ ಏನೇನು ಕಾರ್ಯಕ್ರಮ?
ಇಂದು ಮಧ್ಯಾಹ್ನ 2.30 ಗಂಟೆಗೆ ಕೋಟೆ ರಸ್ತೆಯಲ್ಲಿರುವ ಶಿವಪ್ಪನಾಯಕನ ಅರಮನೆ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುವುದು. ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವರು. ನಂತರ ಅದ್ಧೂರಿ ಮೆರವಣಿಗೆ ಹೊರಡಲಿದೆ. ರಾಜಬೀದಿ ಉತ್ಸವದಲ್ಲಿ ಗಜಪಡೆ ಭಾಗವಹಿಸಲಿದೆ.
ಮಂಗಳವಾದ್ಯ, ಡೊಳ್ಳು ಕುಣಿತ, ಚಂಡೆ, ಮದ್ದಳೆ, ತಟ್ಟಿರಾಯ, ಯಕ್ಷಗಾನ, ಕೀಲುಕುದುರೆ ನೃತ್ಯ, ನಗಿಸುವ ಗೊಂಬೆಗಳ ಕುಣಿತ, ವೀರಗಾಸೆ ಹೀಗೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.
ಸಂಜೆ 6.30 ಕ್ಕೆ ಫ್ರೀಡಂ ಪಾರ್ಕ್’ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದ್ದು, ತಹಸೀಲ್ದಾರ್ ಡಾ.ಎನ್.ಜೆ. ನಾಗರಾಜ್ ಅಂಬು ಛೇದಿಸುವ ಮೂಲಕ‌ ಬನ್ನಿ ಮುಡಿಯುವ ಉತ್ಸವಕ್ಕೆ ಚಾಲನೆ ನೀಡಲಿದರು. ನಂತರ ಬಾಣ ಬಿರುಸುಗಳನ್ನು ಹಾರಿಸಲಾಗುವುದು. ರಾವಣನ ದಹನ ಮಾಡಲಾಗುವುದು.

https://suddikanaja.com/2022/10/04/tunga-arathi-at-tunga-river-shivamogga/

Leave a Reply

Your email address will not be published. Required fields are marked *

error: Content is protected !!