Shiralakoppa | ಶಿರಾಳಕೊಪ್ಪ‌ ಭೂ‌ಕಂಪನ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಹತ್ವದ ಪ್ರಕಟಣೆ

shikaripura map1

 

 

HIGHLIGHTS

  • ಶಿರಾಳಕೊಪ್ಪದಲ್ಲಿ ಭೂಮಿ ಕಂಪಿಸಿರುವ ಬಗ್ಗೆ KSNDMC ಮಹತ್ವದ ಪ್ರಕಟಣೆ
  • ಶಾಶ್ವತ ಭೂಕಂಪನ ಮಾಪನ ಕೇಂದ್ರದ ದತ್ತಾಂಶವನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಭೂಕಂಪನ ದಾಖಲಾಗಿರುವುದಿಲ್ಲ

ಸುದ್ದಿ ಕಣಜ.ಕಾಂ | DISTRICT | 06 OCT 2022
ಶಿವಮೊಗ್ಗ(Shivamogga): ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ಸುಮಾರು 2 ರಿಂದ 4 ಗಂಟೆಯ ಅವಧಿಯಲ್ಲಿ ಭೂಕಂಪನವಾಗಿರುವ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (Karnataka State Natural Disaster Monitoring Centre)ದ ಪ್ರಕಟಣೆಯೊಂದು ಹೊರಡಿಸಿದೆ.
ಕೇಂದ್ರದ‌‌ ಪ್ರಕಟಣೆಯಲ್ಲಿ ಏನಿದೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ವತಿಯಿಂದ ಲಿಂಗನಮಕ್ಕಿ ಅಣೆಕಟ್ಟು (ಶಿವಮೊಗ್ಗ ಜಿಲ್ಲೆ) ಹೇಮಾವತಿ ಅಣೆಕಟ್ಟು (ಹಾಸನ ಜಿಲ್ಲೆ), ಸೂಪಾ ಅಣೆಕಟ್ಟು (ಉತ್ತರ ಕನ್ನಡ ಜಿಲ್ಲೆ), ಕೆ. ಆರ್. ಎನ್. ಅಣೆಕಟ್ಟು (ಮೈಸೂರು ಜಿಲ್ಲೆ) ಮತ್ತು ಉಡುಪಿ ಜಿಲ್ಲೆಯಲ್ಲಿ ಸ್ಥಾಪಿಸಿರುವ ಶಾಶ್ವತ ಭೂಕಂಪನ ಮಾಪನ ಕೇಂದ್ರದ ದತ್ತಾಂಶವನ್ನು ಪರಿಶೀಲಿಸಿದಾಗ ಯಾವುದೇ ರೀತಿಯ ಭೂಕಂಪನದ (Seismic Signatures) ದಾಖಲಾಗಿರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!