Route Change | ಈದ್ ಮಿಲಾದ್ ಪ್ರಯುಕ್ತ ಶಿವಮೊಗ್ಗದ ಈ ರಸ್ತೆಗಳಲ್ಲಿ‌ ಸಂಚಾರ ನಿರ್ಬಂಧ, 5 ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ

shivamogga city

 

 

HIGHLIGHTS

  • ಈದ್‌ ಮಿಲಾದ್‌ ಹಬ್ಬದ ಪ್ರಯುಕ್ತ ನಗರದಲ್ಲಿ ನಡೆಯಲಿದೆ ಮೆರವಣಿಗೆ
  • ಲಷ್ಕರ್ ಮೊಹಲ್ಲಾ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರ ನಿಷೇಧ ಮಾಡುವುದು
  • ಈ ಎಲ್ಲ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಗಣ್ಯ ವ್ಯಕ್ತಿಗಳ ವಾಹನಗಳು, ಆಂಬ್ಯುಲೆನ್ಸ್’ಗೆ ಹೊರತಾಗಿದೆ

ಸುದ್ದಿ ಕಣಜ.ಕಾಂ | DISTRICT | 07 OCT 2022
ಶಿವಮೊಗ್ಗ(Shivamogga): ಈದ್‌ ಮಿಲಾದ್‌ ಹಬ್ಬ (eid milad festival)ದ ಪ್ರಯುಕ್ತ ವಿವಿಧ ಭಾಗಗಳಲ್ಲಿ ಮೆರಮಣಿಗೆ ಸಾಗುವುದರಿಂದ ಸುಗಮ ವಾಹನ ಸಂಚಾರ ಸಲುವಾಗಿ ನಗರದಲ್ಲಿ ಮಾರ್ಗ ಬದಲಾವಣೆ ಮಾಡಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ‌ (Dr R.Selvamani) ಆದೇಶದಲ್ಲಿ‌ ತಿಳಿಸಿದ್ದಾರೆ.

READ | ಶಿವಮೊಗ್ಗದಲ್ಲಿ ಆಟೋ ರಿಕ್ಷಾಗಳಿಗೆ ಹೆಚ್ಚು ಬಾಡಿಗೆ ವಿಧಿಸುವಂತಿಲ್ಲ, RTO ರೂಲ್ಸ್ ಏ‌ನಿದೆ?

ಹೇಗೆ ಸಾಗಲಿದೆ ಮೆರವಣಿಗೆ?
ಅಕ್ಟೋಬರ್‌ 9ರಂದು ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮರವಣಿಗೆಯು ಗಾಂಧಿಬಜಾರ್ (Gandhi Bazaar) ಜಾಮೀಯ ಮಸೀದಿಯಿಂದ ಪ್ರಾರಂಭಗೊಂಡು ಗಾಂಧಿ ಬಜಾರ್ ಎರಡನೇ ಕ್ರಾಸ್, ನಾಗಪ್ಪನ ಕೇರಿ, ಲಷ್ಕರ್ ಮೊಹಲ್ಲಾ ಮುಖ್ಯ ರಸ್ತೆಯ ಮುಖಾಂತರ ಓಲ್ಡ್ ಬಾರ್ ಲೈನ್ ರಸ್ತೆ, ಪೆನ್ಶನ್ ಮೊಹಲ್ಲಾ, ಬಿ.ಎಚ್.ರಸ್ತೆ, ಮೀನಾಕ್ಷಿ ಭವನ, ಟ್ಯಾಂಕ್ ಬಾಂಡ್ ರಸ್ತೆ, ಬಾಪೂಜಿ ನಗರ ಮುಖ್ಯರಸ್ತೆ ಟ್ಯಾಂಕ್ ಮೊಹಲ್ಲಾ, ಬಾಲರಾಜ್ ಅರಸ್ ರಸ್ತೆ, ಮಹಾವೀರ ಸರ್ಕಲ್‌ ಗೋಪಿ ಸರ್ಕಲ್‌ ನೆಹರೂ ರಸ್ತೆ ಮುಖಾಂತರವಾಗಿ ಅಮೀರ್ ಅಹಮ್ಮದ್ ಸರ್ಕಲ್, ಬಿ.ಎಚ್ ರಸ್ತೆ ಅಶೋಕ ಸರ್ಕಲ್, ಎನ್.ಟಿ ರಸ್ತೆ, ಗುರುದೇವ ರಸ್ತೆ, ಕ್ಲಾರ್ಕ್ ಪೇಟೆ, ನೂರಾನಿ ಮಸೀದಿ ಕೆಆರ್ ಪುರಂ ರಸ್ತೆ ಮಾರ್ಗವಾಗಿ ಅಮೀರ್ ಅಹಮ್ಮದ್ ಸರ್ಕಲ್ ತಲುಪಲಿದೆ.
ಮೇಲ್ಕಂಡ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲ ವಾಹನಗಳ ಸಂಚಾರ ಹಾಗೂ ನಿಲುಗಡೆ ನಿಷೇಧಿಸಲಾಗಿದೆ.

READ | ‘ವೃಷ್ಟಿ’ ಪೋಸ್ಟರ್ ರಿಲೀಸ್, ಏನಿದು ಚಿತ್ರ

ಪರ್ಯಾಯ ಮಾರ್ಗದ ಮಾಹಿತಿ

  1. ಭದ್ರಾವತಿ, ಬೆಂಗಳೂರು ಕಡೆಯಿಂದ ಬರುವ ಎಲ್ಲ ಭಾರಿ ವಾಹನ, ಬಸ್ ಗಳು ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  2. ಚಿತ್ರದುರ್ಗ ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲ ಭಾರಿ ವಾಹನ ಮತ್ತು ಬಸ್ ಗಳು ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
  3. ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲ ಭಾರಿ ವಾಹನ ಮತ್ತು ಬಸ್ ಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ, ಶಂಕರಮಠ ರಸ್ತೆ ಹೊಳೆ ಬಸ್ ನಿಲ್ದಾಣ ಮೂಲಕ ಎಂ.ಆರ್.ಎಸ್ ಸರ್ಕಲ್ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರವಾಗಿ ಹೋಗುವುದು.
  4. KSRTC ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಹರಿಹರ, ದಾವಣಗೆರೆಗೆ ಹೋಗುವ ಎಲ್ಲ ಬಸ್ ಗಳು ಮತ್ತು ಭಾರಿ ಸರಕು ವಾಹನಗಳು ಬೈಪಾಸ್ ಮುಖಾಂತರವಾಗಿ ಎಂಆರ್.ಎಸ್ ಸರ್ಕಲ್, ವಿದ್ಯಾನಗರ ಶಂಕರಮಠ ಸರ್ಕಲ್‌, ಸಂಗೂಳ್ಳಿ ರಾಯಣ್ಣ ಸರ್ಕಲ್‌ ಮುಖಾಂತರ ಹೋಗುವುದು.
  5. KSRTC ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂ.ಆರ್.ಎಸ್ ಸರ್ಕಲ್ ಕಡೆಗೆ ಹೋಗುವುದು.

https://suddikanaja.com/2022/10/01/swachh-bharat-award-to-shimoga/

Leave a Reply

Your email address will not be published. Required fields are marked *

error: Content is protected !!