Auto Rent | ಶಿವಮೊಗ್ಗದಲ್ಲಿ ಆಟೋ ರಿಕ್ಷಾಗಳಿಗೆ ಹೆಚ್ಚು ಬಾಡಿಗೆ ವಿಧಿಸುವಂತಿಲ್ಲ, RTO ರೂಲ್ಸ್ ಏ‌ನಿದೆ?

Auto

 

 

ಸುದ್ದಿ ಕಣಜ.ಕಾಂ | DISTRICT | 07 OCT 2022
ಶಿವಮೊಗ್ಗ(Shivamogga): ಜಿಲ್ಲೆಯ ಎಲ್ಲ ಆಟೋ‌ ಚಾಲಕರು ನಿಯಮದ ಪ್ರಕಾರ ಬಾಡಿಗೆ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ(Regional Transportation Authority- RTA)ದ ಕಾರ್ಯದರ್ಶಿ ತಿಳಿಸಿದ್ದಾರೆ.

READ | ಎಚ್.ಕೆ.ಜಂಕ್ಷನ್ ಬಳಿ ಏಳೆಂಟು ಮಂಗಗಳ ಸಾವು, ಜನರಲ್ಲಿ ಆತಂಕ

ನಿಯಮದ‌ನ್ವಯ, ಆಟೋ ರಿಕ್ಷಾಗಳಿಗೆ ಬಾಡಿಗೆಯನ್ನು ಕನಿಷ್ಠ ₹35 ಹಾಗೂ ಕಿ.ಮೀ.ಗೆ ₹17.50ರಂತೆ ಮತ್ತು ಮೀಟರ್ ಅನ್ನು ಅಳವಡಿಸದೇ/ ಉಪಯೋಗಿಸದೇ ಇರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು.
ಬಸ್ ಮಾಲೀಕರು, ಸರಕು ಸಾಗಣಿಕೆ ವಾಹನ ಮಾಲೀಕರು ಸಾರ್ವಜನಿಕ ವಾಹನವನ್ನು ಕಡ್ಡಾಯವಾಗಿ ಬ್ರೇಕ್ ಲೈಟ್, ರಿಪ್ಲೆಕ್ಟರ್, ಇಂಡಿಕೇಟರ್, ಹೆಡ್‌ ಲೈಟ್, ಪಾರ್ಕಿಂಗ್ ಲೈಟ್‍ಗಳನ್ನು ಮತ್ತು ವಾಹನಕ್ಕೆ ಬೇಕಾಗಿರುವ ಎಲ್ಲ ರೀತಿಯ ವಿಂಡ್ ಸ್ಕ್ರೀನ್ ಗ್ಲಾಸ್‍ಗಳನ್ನು ಸರಿಯಾಗಿ ಅಳವಡಿಸಿಕೊಂಡು ಸಾರ್ವಜನಿಕ ರಸ್ತೆಗಳಲ್ಲಿ ಸಂಭವಿಸಬಹುದಾದ ಅವಘಾತವನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನ ಬಳಕೆ ಮಾಡಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ತಿಳಿಸಿದೆ.
ಆರ್.ಟಿ.ಓ‌ ಅಧಿಕಾರಿಗಳೊಂದಿಗೆ ಪ್ರಮುಖ ಸಭೆ ಅ.10ರಂದು
ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ಶಿವಮೊಗ್ಗ ನಗರ ವ್ಯಾಪ್ತಿಯೊಳಗೆ ಆಟೋ ರಿಕ್ಷಾಗಳಲ್ಲಿ ನಿಗದಿತ ಕನಿಷ್ಠ ಬಾಡಿಗೆಗಿಂತ ದುಬಾರಿ ಹಣ ವಸೂಲಿ ಮಾಡುತ್ತಿರುವುದು ಸಾರ್ವಜನಿಕರ ದೂರಿನಿಂದ ಪ್ರಾಧಿಕಾರದ ಗಮನಕ್ಕೆ ಬಂದಿರುವ ನಿಮಿತ್ತ ಸೂಕ್ತ ಪರಿಹಾರೋಪಾಯಕ್ಕಾಗಿ ಅಕ್ಟೋಬರ್‌ 10ರಂದು ತುರ್ತು ಸಭೆ ಕರೆಯಲಾಗಿದೆ.
ಯಾರೆಲ್ಲ ಪಾಲ್ಗೊಳ್ಳಬೇಕು?
ಜಿಲ್ಲೆಯ ಎಲ್ಲ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರು ಹಾಗೂ ವಿವಿಧ ಆಟೋರಿಕ್ಷಾಗಳ ಸಂಘ ಸಂಸ್ಥೆಯವರು 10ರಂದು  ಸಂಜೆ 4.30ಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಯ ಸಭಾಂಗಣದಲ್ಲಿ ತುರ್ತು ಸಭೆಗೆ ಹಾಜರಾಗುವಂತೆ ತಿಳಿಸಲಾಗಿದೆ.

https://suddikanaja.com/2022/10/07/karntaka-state-government-employees-dearness-allowance-da-hike/

Leave a Reply

Your email address will not be published. Required fields are marked *

error: Content is protected !!