Vehicle Seized | ವಾಹನ ಮಾಲೀಕರಿಗೆ ಆರ್.ಟಿ.ಓ ಶಾಕ್, ಐದು ಬೃಹತ್ ವಾಹನಗಳು ಸೀಜ್

RTO

 

 

HIGHLIGHTS 

  • ಶಿಕಾರಿಪುರ ಪಟ್ಟಣದಲ್ಲಿ ಆರ್.ಟಿ.ಓ ತನಿಖಾ ತಂಡದಿಂದ ದಾಳಿ
  • ತೆರಿಗೆ ಪಾವತಿಸದೇ ಸಂಚರಿಸುತ್ತಿದ್ದ ಮೂರು ಬೃಹತ್ ವಾಹನಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು

ಸುದ್ದಿ ಕಣಜ.ಕಾಂ | TALUK | 24 OCT 2022
ಶಿಕಾರಿಪುರ(shikaripura): ಆರ್.ಟಿ.ಓ ತನಿಖಾ ತಂಡವು ಮೂರು ಜೆಸಿಬಿ, ಒಂದು ಬಸ್ ಹಾಗೂ ಲಾರಿಯನ್ನು ವಶಕ್ಕೆ ಪಡೆದಿದೆ.
ಪಟ್ಟಣದಲ್ಲಿ ಅಧಿಕೃತ ನೋಂದಣಿ ಮಾಡಿಸದೇ ಹಾಗೂ ತೆರಿಗೆ ಕಟ್ಟದೇ ಬೃಹತ್ ವಾಹನಗಳನ್ನು ಬಳಸಲಾಗುತ್ತಿತ್ತು.

READ | ಶಿವಮೊಗ್ಗ ಜಿಲ್ಲೆಯಲ್ಲಿ ಬರೀ 15 ದಿನಗಳ 41 ಜನರ ವಿರುದ್ಧ ಕೇಸ್ ದಾಖಲು

ಎಷ್ಟು ಹಣ ಬರಬೇಕಿತ್ತು?

  • ಪ್ರತಿ ಜೆಸಿಬಿಯಿಂದ 2 ಲಕ್ಷ ರೂ. ಬಾಕಿ | ಜೆಸಿಬಿಗಳು ಕಳೆದ ಎರಡು ವರ್ಷಗಳಿಂದ ತೆರಿಗೆ ಹಣ ಪಾವತಿಸದೇ ಹಾಗೆಯೇ ಕಾರ್ಯನಿರ್ವಹಿಸುತ್ತಿದ್ದವು. ಪತ್ತೆ ಹೆಚ್ಚಿದ ತನಿಖೆ ತಂಡವು ವಾಹನಗಳನ್ನು ವಶಕ್ಕೆ ಪಡೆದಿದೆ. ಪ್ರತಿ ಜೆಸಿಬಿಯಿಂದ 2 ಲಕ್ಷ ರೂಪಾಯಿಗೂ ಅಧಿಕ ಹಣ ಸರ್ಕಾರಕ್ಕೆ ಬರಬೇಕಿದೆ.
  • ಶಿರಾಳಕೊಪ್ಪದಲ್ಲಿ ಸಂಚರಿಸುತ್ತಿದ್ದ ಬಸ್ | ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದ ಬಸ್ ಅನ್ನು ಶಿರಾಳಕೊಪ್ಪ ಭಾಗದಲ್ಲಿ ಸಂಚರಿಸುತ್ತಿತ್ತು. ಬಸಬ್ ಮಾಲೀಕರು ತೆರಿಗೆ ಕಟ್ಟಿರಲಿಲ್ಲ. ಹೀಗಾಗಿ, ಈ ಬಸ್ ಅನ್ನು ಸಹ ವಶಕ್ಕೆ ಪಡೆಯಲಾಗಿದೆ.
  • ಲಾರಿಯಿಂದಲೂ ತೆರಿಗೆ ವಂಚನೆ | ಅದೇ ರೀತಿ, ಆನಂದಪುರಕ್ಕೆ ಸೇರಿದ್ದ ಲಾರಿ ಸಹ ತೆರಿಗೆ ಪಾವತಿಸಿರಲಿಲ್ಲ. ಹೀಗಾಗಿ, ವಶಕ್ಕೆ ಪಡೆಯಲಾಗಿದೆ.

ಆರ್.ಟಿ.ಓ ಅಧಿಕಾರಿ ಗಾಯತ್ರಿ ದೇವಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ತನಿಖಾಧಿಕಾರಿ ವಾಸುದೇವ್ ನೇತೃತ್ವದಲ್ಲಿ ಸಿಬ್ಬಂದಿ ಉಮೇಶ್, ಪಂಚಾಕ್ಷರಿ ಇತರರು ಕಾರ್ಯಾಚರಣೆ ಕೈಗೊಂಡಿದ್ದಾರೆ.

https://suddikanaja.com/2022/10/23/celebration-in-shivamogga-for-india-won-of-t20-world-cup-at-melbourne/

Leave a Reply

Your email address will not be published. Required fields are marked *

error: Content is protected !!