Shimoga Police | ಕ್ರಿಮಿನಲ್’ಗಳ ಜಾತಕ ಬಿಚ್ಚಿಡಲು ಟೆಕ್ನಾಲಜಿ ಮೊರೆ, ಇನ್ಮುಂದೆ ರಾತ್ರಿ ವೇಳೆ‌ ಶಿವಮೊಗ್ಗದಲ್ಲಿ ನಿತ್ಯವೂ ಚೆಕಿಂಗ್

Police Finger schanning

 

 

HIGHLIGHTS

  • ಶಿವಮೊಗ್ಗ ಪೊಲೀಸರಿಂದ ಅಪರಾಧಿಗಳ ಪತ್ತೆಗೆ MCCTNS ಅಪ್ಲಿಕೇಷನ್ ಮೊರೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೊಬೈಲ್ ಫೋನ್ ಗಳಲ್ಲಿ ಈಗಾಗಲೇ Install ಮಾಡಲಾಗಿದೆ.
  • ರಾತ್ರಿಗಸ್ತು ಕರ್ತವ್ಯವನ್ನು ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದ್ದು, ಅವರುಗಳು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಗಳನ್ನು ತಮ್ಮ ಮೊಬೈಲ್ ಫೋನ್ ಗೆ ಅಳವಡಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪರಿಶೀಲಿಸಬಹುದು
  • ಅಪರಾಧಿಕ ಹಿನ್ನೆಲೆ ಇರುವುದು ಕಂಡು ಬಂದಲ್ಲಿ ಠಾಣೆಗೆ ಕರೆತಂದು ಅವರ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು

ಸುದ್ದಿ ಕಣಜ.ಕಾಂ | DISTRICT | 28 OCT 2022
ಶಿವಮೊಗ್ಗ(Shivamogga): ಜಿಲ್ಲೆಯಲ್ಲಿ ಅದರಲ್ಲೂ ನಗರ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ದರೋಡೆ‌ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ತಂತ್ರಜ್ಞಾನ(Technology)ದ ಮೊರೆ ಹೋಗಿದೆ. ಈ ಮೂಲಕ ರಾತ್ರಿ ಹೊತ್ತಿನಲ್ಲಿ ಅನುಮಾನಾಸ್ಪದವಾಗಿ ಓಡಾಡುವವರ ತಪಾಸಣೆ ನಡೆಸಲಾಗುತ್ತಿದೆ.

READ | ಹೈನುಗಾರರಿಗೆ ಶುಭಸುದ್ದಿ ನೀಡಿದ ಶಿಮುಲ್, ಇದು ಶಿಮುಲ್ ಇತಿಹಾಸದಲ್ಲೇ ಮೊದಲ

MCCTNS (Mobile – Crime and Criminal Tracking Network System) ಎಂಬ ಅಪ್ಲಿಕೇಷನ್ ಅನ್ನು ಅಭಿವೃದ್ಧಿ ಪಡಿಸಲಾಗಿದ್ದು, ಅದರ ಮೂಲಕ ನಗರದ ವಿವಿಧೆಡೆ ತಪಾಸಣೆ ಮಾಡಲಾಗುತ್ತಿದೆ. ಈ ತಂತ್ರಾಂಶವನ್ನು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೊಬೈಲ್’ಗಳಲ್ಲಿ ಇನ್‌ಸ್ಟಾಲ್ ಕೂಡ ಮಾಡಲಾಗಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನೀಡಲಾಗಿದೆ.
ಮೊಬೈಲ್’ನಲ್ಲೇ ಕ್ರಿಮಿನಲ್’ಗಳ ಟ್ರ್ಯಾಕ್ ರೆಕಾರ್ಡ್
ಅನುಮಾನಾಸ್ಪದ ವ್ಯಕ್ತಿಗಳ ಬೆರಳುಗಳನ್ನು ಫಿಂಗರ್ ಪ್ರಿಂಟ್ ಸ್ಕ್ಯಾನರ್ ನಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ವ್ಯಕ್ತಿಗಳು ಈ ಹಿಂದೆ ಯಾವುದಾದರೂ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಅಪರಾಧಿಕ ಹಿನ್ನೆಲೆಯ ಸಮಗ್ರ ವಿವರಗಳ ಮಾಹಿತಿ ಅಂಗೈಯಲ್ಲಿರುವ ಮೊಬೈಲ್ ನಲ್ಲೇ ಗೊತ್ತಾಗಲಿವೆ.
ಕ್ರಿಮಿನಲ್ ಬ್ಯಾಗ್ರೌಂಡ್ ಇದ್ದರೆ ಅಂದರ್
ಫಿಂಗರ್ ಸ್ಕ್ಯಾನಿಂಗ್’ನಲ್ಲಿ ವ್ಯಕ್ತಿಯ ಮೇಲೆ‌ ಕ್ರಿಮಿನಲ್‌ ಪ್ರಕರಣಗಳಿದ್ದರೆ,‌ ಅಂತಹವರನ್ನು ವಶಕ್ಕೆ ಪಡೆಯಲಾಗುವುದು. ಇದರಿಂದ ಸಂಭಾವ್ಯ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.
ಅಪರಾಧಿಗಳು ತಮ್ಮ ವಾಸ್ತವತೆಯನ್ನು ಮರೆಮಾಚಿ‌ ಓಡಾಡುತ್ತಿರುತ್ತಾರೆ. ಅಂತಹವರ ಕ್ರಮಕನ್ ಹಿನ್ನೆಲೆ ತಿಳಿದುಕೊಳ್ಳುವುದೇ ಕಷ್ಟಕರ. ಇಂತಹ ಸ್ಥಿತಿಯಲ್ಲಿ ತಂತ್ರಜ್ಞಾನ ಸಹಾಯಕ್ಕೆ ಬರಲಿದೆ.

https://suddikanaja.com/2022/10/19/scientists-for-the-scientific-committee-to-study-and-address-the-issue-of-yld-in-arecanut-in-karnataka-other-states/

Leave a Reply

Your email address will not be published. Required fields are marked *

error: Content is protected !!