Youth fest Postponed | ನಾಳೆ ನಡೆಯಬೇಕಿದ್ದ ಜಿಲ್ಲಾಮಟ್ಟದ ಯುವ ಉತ್ಸವ ಮುಂದೂಡಿಕೆ

Kuvempu Rangamandira

 

 

ಸುದ್ದಿ ಕಣಜ.ಕಾಂ | DISTRICT | 26 OCT 2022
ಶಿವಮೊಗ್ಗ(Shivamogga): ನಗರದ ಕುವೆಂಪು ರಂಗಮಂದಿರದಲ್ಲಿ ಅಕ್ಟೋಬರ್ 28 ರಂದು ನಡೆಯಬೇಕಿದ್ದ ಮಟ್ಟದ ಯುವ ಉತ್ಸವ-2022 ಕಾರ್ಯಕ್ರಮವನ್ನು ಮುಂದೂಡಲಾಗಿದೆ.

READ | ಬಲಿಪಾಢ್ಯಮಿ ದಿನವೇ ಪೊಲೀಸ್ ಗುಂಡಿನ ಸದ್ದು, ಮಹಜರು ವೇಳೆ ಖಾಕಿ ಮೇಲೆಯೇ ಅಟ್ಯಾಕ್

ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಶಿವಮೊಗ್ಗದ ನೆಹರೂu ಯುವ ಕೇಂದ್ರ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಾರಣಾಂತರದಿಂದ ಇದನ್ನು‌ ಮುಂದೂಡಲಾಗಿದೆ. ಕಾರ್ಯಕ್ರಮದ ಮುಂದಿನ ದಿನಾಂಕವನ್ನು ಸಧ್ಯದಲ್ಲೇ ತಿಳಿಸಲಾಗುವುದು ಎಂದು ಜಿಲ್ಲಾಬಯುವ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್ ತಿಳಿಸಿದ್ದಾರೆ.
ಯುವ ಉತ್ಸವ ಕಾರ್ಯಕ್ರಮದ ಪರಿಕಲ್ಪನೆಯನ್ನು ಮತ್ತು ಕಾರ್ಯಕ್ರಮದ ಸ್ವರೂಪವನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಹೊಸ ಪರಿಕಲ್ಪನೆಯ ಜೊತೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಈಗಾಗಲೇ ನೋಂದಣಿ ಮಾಡಿಕೊಂಡಿರುವವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

https://suddikanaja.com/2022/10/25/hindu-harsha-sister-reaction-to-media-at-shimoga/

Leave a Reply

Your email address will not be published. Required fields are marked *

error: Content is protected !!