ಸುದ್ದಿ ಕಣಜ.ಕಾಂ | DISTRICT | NIGHT CURFEW
ಶಿವಮೊಗ್ಗ: ರಾಜ್ಯ ಸರ್ಕಾರದ ಸೂಚನೆಯ ಮೇರೆಗೆ ಡಿಸೆಂಬರ್ 28ರಿಂದ ಜನವರಿ 7ರ ವರೆಗೆ ನೈಟ್ ಕರ್ಫ್ಯೂ ಇರಲಿದ್ದು, ಸಾರ್ವಜನಿಕರು ರಾತ್ರಿ 10 ಗಂಟೆಯ ನಂತರ ಸಂಚರಿಸುವುದಕ್ಕೆ ಪೂರ್ಣ ನಿರ್ಬಂಧವಿದೆ.
ಓಮಿಕ್ರಾನ್ ಸೋಂಕು ತಡೆಯುವುದಕ್ಕಾಗಿ ನೈಟ್ ಕರ್ಫ್ಯೂ ವಿಧಿಸಿದ್ದು, ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೆ ಸಾರ್ವಜನಿಕರ ಸಂಚಾರ ನಿರ್ಬಂಧವಿದೆ.
READ | ಕುವೆಂಪು ವಿಶ್ವವಿದ್ಯಾಲಯ ಪಿಜಿ ಪ್ರವೇಶ, ಎಲ್ಲೆಲ್ಲಿ ನಡೀತಿದೆ ಕೌನ್ಸೆಲಿಂಗ್
ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಿರುವುದರಿಂದ ಅಲ್ಲಿ ಕೆಲಸ ಮಾಡುವವರು ರಾತ್ರಿ ಹೊತ್ತಿನಲ್ಲಿ ಸಂಚರಿಸುವಂತಿಲ್ಲ. ಕೈಗಾರಿಕೆಗೆ ಹೋಗುವವರು ಕಡ್ಡಾಯವಾಗಿ ಆಯಾ ಕೈಗಾರಿಕೆಗಳ ಗುರುತಿನ ಚೀಟಿ ಅಥವಾ ಕಳೆದ ಕೋವಿಡ್ ಕಾಲ್ ಡೌನ್ ಅವಧಿಯಲ್ಲಿ ನೀಡಿದ್ದ ಗುರುತಿನ ಚೀಟಿ ಇದ್ದು, ನಿಜವಾಗಿಯೂ ಕೆಲಸಕ್ಕೆಹೋಗುತ್ತಿದ್ದರೆ ಅಂತಹವರಿಗೆ ಯಾವುದೇ ತೊಂದರೆ ಇರುವುದಿಲ್ಲ. ಅಗತ್ಯ ವಸ್ತುಗಳ ಸೇವೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವವರು, ತುರ್ತು ಸೇವೆ ಇವರಿಗೂ ನಿರ್ಬಂಧ ಇರುವುದಿಲ್ಲ. ಹಾಗಂತ ಅನಗತ್ಯವಾಗಿ ಸಂಚರಿಸುವಂತಿಲ್ಲ.
ಹಲವೆಡೆ ಚೆಕ್ ಪೋಸ್ಟ್, ಪೊಲೀಸ್ ಗಸ್ತು
ನಗರಕ್ಕೆ ಪ್ರವೇಶಿಸುವ ಪ್ರತಿಯೊಂದು ವಾಹನ, ವ್ಯಕ್ತಿಯನ್ನೂ ತಪಾಸಣೆಗೆ ಒಳಪಡಿಸಲಾಗುವುದು, ಪ್ರಮುಖ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು. ಈಗಾಗಲೇ ನೈಟ್ ಬೀಡ್ ನಲ್ಲಿ 60 ಸಿಬ್ಬಂದಿ ಕರ್ತವ್ಯ ನಿರ್ವಹಿಸುತಿದ್ದಾರೆ. ಆ ಸಂಖ್ಯೆಯನ್ನು ನೂರಕ್ಕೆ ಏರಿಕೆ ಮಾಡಲಾಗುವುದು. ಅದರಲ್ಲೂ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲಾಗುವುದು. ಇವರು ಚೆಕ್ ಪೋಸ್ಟ್ ಮೂಲಕ ನಿಗಾ ಇಡಲಿದ್ದಾರೆ.
ರಾತ್ರಿ 10ರ ನಂತರ ಅಂಗಡಿಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಆದ್ದರಿಂದ ಪೊಲೀಸರು ನಗರದಲ್ಲಿರುವ ಅಂಗಡಿಗಳನ್ನು 9.30ರ ಆಸುಪಾಸಿನಲ್ಲೇ ಬಂದ್ ಮಾಡಿಸುವ ಸಾಧ್ಯತೆ ಇದೆ.
https://www.suddikanaja.com/2021/02/03/chain-snatching-pulsar-gang-re-active-in-shivamogga/