Eye Donate | ಸಾವಿನಲ್ಲೂ ಸಾರ್ಥಕತೆ ಮೆರೆದ ಏಳು ವರ್ಷದ ಬಾಲಕ

Aryan

 

 

ಸುದ್ದಿ ಕಣಜ.ಕಾಂ | DISTRICT | 29 OCT 2022
ಹೊಸನಗರ(Hosanagar): ತಾಲೂಕಿನ ರಿಪ್ಪನಪೇಟೆ (ripponpet) ಸಮೀಪದ ಬಸವಾಪುರ  ಗ್ರಾಮದ ಜಗನ್ನಾಥ್ ಮತ್ತು ಆಶಾ ಅವರ ಏಳು ವರ್ಷದ ಪತ್ರ ಬಿ.ಜೆ.ಆರ್ಯ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ.

READ | ಹೊಳೆಹೊನ್ನೂರಿನಲ್ಲಿ ಐದು ಕುರಿಗಳನ್ನು ಬಲಿ ಪಡೆದ ಚಿರತೆ 

ತಾಯಿ ಆಶಾ ಅವರು ಶಾಲೆಯಲ್ಲಿ ಬಿಸಿಯೂಟ ಸಹಾಯಕಿಯಾಗಿದ್ದು ತಂದೆ ಕೂಲಿ ಕಾರ್ಮಿಕರಾಗಿದ್ದಾರೆ. ಇವರಿಗೆ ಇಬ್ಬರು ಪುತ್ರರಿದ್ದು, ಅದರಲ್ಲಿ ಆರ್ಯನ್ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದ. ಈತನ ಮೆದುಳಿನಲ್ಲಿ ರಕ್ತಸ್ರಾವ(Bleeding in the brain)ವಾಗಿದ್ದು, ಉಳಿಸಿಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಅದ್ಯಾವುದೂ ಫಲಿಸಿಲ್ಲ. ಒಂದುವೇಳೆ, ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಅಂಗಾಂಗ ದಾನ ಮಾಡಬೇಕು ಎಂದು ತೀರ್ಮಾನ ಕೂಡ ಮಾಡಿದ್ದರು.
ಮಣಿಪಾಲಕ್ಕೆ ಕರೆದೊಯ್ಯುವ ಸಿದ್ಧತೆ ಮಾಡಿಕೊಳ್ಳುವಾಗಲೇ ಸಾವು
ಆರ್ಯನ್ ಗುರುವಾರ ಶಾಲೆಯಲ್ಲಿರುವಾಗಲೇ ವಾಂತಿ ಮಾಡಿಕೊಂಡು ಅಸ್ವಸ್ಥನಾಗಿದ್ದಾನೆ. ತಕ್ಷಣ ಶಿಕ್ಷಕರು ಸಮೀಪದ ಮಂಡಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ(shimoga)ಕ್ಕೆ ರೆಫರ್ ಮಾಡಿದ್ದು, ಇಲ್ಲಿಗೂ ಕರೆದುಕೊಂಡು ಬರಲಾಗಿದೆ. ಆದರೆ, ರಕ್ತಸ್ರಾವವಾಗಿದ್ದು, ಮಣಿಪಾಲಕ್ಕೆ ಕರೆದೊಯ್ಯುವಂತೆ ಸೂಚಿಸಲಾಗಿದೆ. ಈ ನಡುವೆ ಸಿದ್ಧತೆ ಮಾಡಿಕೊಳ್ಳುವಾಗಲೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಕಣ್ಣುಗಳನ್ನು ಮಾತ್ರ ದಾನ ಮಾಡಲಾಗಿದೆ. ಶುಕ್ರವಾರ ಆರ್ಯನ್ ಅಂತ್ಯಕ್ರಿಯೆಯು ಸ್ವಗ್ರಾಮ ಬಸವಾಪುರದಲ್ಲಿ ನೆರೆವೇರಿದೆ.

https://suddikanaja.com/2022/10/27/shimoga-police-interduced-mcctns-mobile-crime-and-criminal-tracking-network-system-to-identify-criminals/

Leave a Reply

Your email address will not be published. Required fields are marked *

error: Content is protected !!