Covid 19 vaccine | ಶಿವಮೊಗ್ಗದಲ್ಲಿ 12 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ಲಭ್ಯ,‌ ಯಾರೆಲ್ಲ, ಎಲ್ಲೆಲ್ಲಿ‌ ಪಡೆಯ‌ಬಹುದು?

Covid vaccine

 

 

HIGHLIGHTS

  • ಕೇಂದ್ರ, ರಾಜ್ಯ ಸರ್ಕಾರದಿಂದ 12ರಿಂದ 17 ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ
  • ಶಿವಮೊಗ್ಗ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ‌ ಲಭ್ಯ
  • ಕೋವ್ಯಾಕ್ಸಿನ್/ ಕೋವಿಶೀಲ್ಡ್ ಹಾಗೂ ಕಾರ್ಬಿವ್ಯಾಕ್ಸ್‌ ಕೋವಿಡ್-19 ಲಸಿಕೆ

ಸುದ್ದಿ ಕಣಜ.ಕಾಂ | DISTRICT | 10 OCT 2022
ಶಿವಮೊಗ್ಗ(Shivamogga): ಕೇಂದ್ರ (central) ಹಾಗೂ ರಾಜ್ಯ (state) ಸರ್ಕಾರದ ಆದೇಶದಂತೆ ಈಗಾಗಲೇ ಜಿಲ್ಲೆಯ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಕೋವಿಡ್ (covid) 19 ಲಸಿಕೆ(vaccine) ಯನ್ನು ನೀಡಲಾಗುತ್ತಿದೆ.

READ | ಶಿವಮೊಗ್ಗ ಮೃಗಾಲಯದಲ್ಲಿ‌ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಬೇಕೇ? ಕೂಡಲೇ ಸಂಪರ್ಕಿಸಿ

ಯಾರು, ಎಲ್ಲೆಲ್ಲಿ ಲಸಿಕೆ‌ ಪಡೆಯಬಹುದು?
12 ರಿಂದ 17 ವರ್ಷದ ಎಲ್ಲ ಮಕ್ಕಳು ಮತ್ತು 18 ವರ್ಷ ಮೇಲ್ಪಟ್ಟ ಎಲ್ಲ ಸಾರ್ವಜನಿಕರು ಕೋವಿಡ್-19 ಎರಡನೇ ಡೋಸ್ ಮತ್ತು ಬೂಸ್ಟರ್ ಡೋಸ್ ಲಸಿಕೆಯನ್ನು ಹತ್ತಿರದ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವ್ಯಾಕ್ಸಿನ್/ ಕೋವಿಶೀಲ್ಡ್ ಹಾಗೂ ಕಾರ್ಬಿವ್ಯಾಕ್ಸ್‌ ಕೋವಿಡ್-19 ಲಸಿಕೆ ಲಭ್ಯವಿದೆ.
ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮನವಿ ಮಾಡಿದ್ದಾರೆ.

https://suddikanaja.com/2022/10/07/ksrtc-bus-pass/

Leave a Reply

Your email address will not be published. Required fields are marked *

error: Content is protected !!