
ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ತಾಲೂಕಿನ ಯಡೂರು ಬಳಿಯ ಮೇಕೇರಿಯಲ್ಲಿ ಶನಿವಾರ ಸಂಜೆ ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
READ | ಮಲೆನಾಡಿನಲ್ಲಿ ಮಳೆ ಕೊರತೆ, ಎಲ್ಲೆಲ್ಲಿ ಎಷ್ಟು ವರ್ಷಧಾರೆ?
ತೀರ್ಥಹಳ್ಳಿಯಿಂದ ಕುಂದಾಪುರದ ಕಡೆಗೆ ತೆರಳುತಿದ್ದ ಬಸ್ಸಿಗೆ ಇಟ್ಟಿಗೆ ಲೋಡ್ ತೆಗೆದುಕೊಂಡು ಹೋಗುತಿದ್ದ ಲಾರಿಯು ಡಿಕ್ಕಿ ಹೊಡೆದಿದೆ. ಗಾಯಗೊಂಡವರಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು ಇದ್ದಾರೆ.
ಗಾಯಗೊಂಡಿರುವ ಯಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚುವರಿ ಚಿಕಿತ್ಸೆಗೆ ತೀರ್ಥಹಳ್ಳಿ ಆಸ್ಪತ್ರೆಗೂ ದಾಖಲಿಸಲಾಗಿದೆ.