Training | ಬೀದಿಬದಿ ವ್ಯಾಪಾರಿಗಳಿಗೆ FSSAI ಪ್ರಮಾಣ ಪತ್ರ ವಿತರಣೆ

Shivamogga city logo

 

 

ಕಣಜ.ಕಾಂ | DISTRICT | 12 OCT 2022
ಶಿವಮೊಗ್ಗ(Shivamogga): ನಗರದ ಬಿ.ಎಚ್. ರಸ್ತೆಯ ಬೆಕ್ಕಿನ ಕಲ್ಮಠ ವೃತ್ತದ ಮಹಾನಗರ ಪಾಲಿಕೆಯ ಕೋಟೆ ಸಂಕೀರ್ಣದಲ್ಲಿ ಬೀದಿಬದಿ ವ್ಯಾಪಾರಿಗಳು, ಫುಡ್ ಸೇಪ್ಟಿ ತರಬೇತಿ ಪಡೆದ ವ್ಯಾಪಾರಿಗಳಿಗೆ ಶಿವಮೊಗ್ಗ ಮಹಾನಗರ ಪಾಲಿಕೆ (Shivamogga city corporation) ಪಟ್ಟಣ ಮಾರಾಟ ಸಮಿತಿ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ ಅವರು ಪ್ರಮಾಣ ಪತ್ರ ವಿತರಿಸಿದರು.

READ | ಬೊಮ್ಮನಕಟ್ಟೆಯಲ್ಲಿ ನಿವೇಶನ ಕಳೆದುಕೊಳ್ಳುವ ಭೀತಿಯಲ್ಲಿರುವವರಿಗೆ ಶುಭ ಸುದ್ದಿ

2020 ಜುಲೈ 5 ರಿಂದ ನಿರಂತರ ಹತ್ತು ದಿನಗಳವರೆಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಸಾವಿರ ಬೀದಿಬದಿ ವ್ಯಾಪಾರಿಗಳಿಗೆ ಪುಡ್ ಸೆಫ್ಟಿ ತರಬೇತಿಯನ್ನು ಮಹಾನಗರ ಪಾಲಿಕೆ ಮತ್ತು ಕೌಶಲಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ನಾರಾಯಣ ತರಬೇತಿ ಸಂಸ್ದೆಯವರು FSSAI ಪುಡ್ ಸೇಪ್ಟಿ ತರಬೇತಿ ನೀಡಿದ್ದರು.
ಈ ಸಂದರ್ಭದಲ್ಲಿ ಪಾಲಿಕೆಯ ಸಮುದಾಯ ವ್ಯವಾಹರಿಕ ಅಧಿಕಾರಿ ಅನುಪಮಾ, ಸಮುದಾಯ ಸಂಘಟಕ ರತ್ನಾಕರ್, ಪಾಲಿಕೆ ಸಿಬ್ಬಂದಿ ವರ್ಗದವರು ಮತ್ತು ಬೀದಿಬದಿ ವ್ಯಾಪಾರಿಗಳು ಉಪಸ್ಥಿತರಿದ್ದರು.

https://suddikanaja.com/2022/10/11/chain-link-fraud-in-shivamogga/

Leave a Reply

Your email address will not be published. Required fields are marked *

error: Content is protected !!