Breaking News | ಬೆಳ್ಳಂಬೆಳಗ್ಗೆ ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ಕೊಲೆ, ಪೊಲೀಸರೇನು ಹೇಳ್ತಾರೆ?

Murder

 

 

ಸುದ್ದಿ ಕಣಜ.ಕಾಂ | SHIMOGA CITY | 25 OCT 2022
ಶಿವಮೊಗ್ಗ(shivamogga): ಖಾಸಗಿ ಆಸ್ಪತ್ರೆಯ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಚುಚ್ಚಿ ಮಂಗಳವಾರ ಬೆಳ್ಳಂಬೆಳಗ್ಗೆ ಕೊಲೆ (Murder) ಮಾಡಿದ ಘಟನೆ ನಡೆದಿದೆ.

READ | ಹಿಂದೂ ಹರ್ಷನ ಅಕ್ಕ ಸೇರಿ 15 ಜನರ ವಿರುದ್ಧ ಎಫ್‍ಐಆರ್ ದಾಖಲು

ವಿಜಯ್(37) ಎಂಬುವವರೇ ಕೊಲೆಯಾದ ವ್ಯಕ್ತಿ. ವೆಂಕಟೇಶ ನಗರದ ಅನಕೃ ಒಂದನೇ ತಿರುವಿನಲ್ಲಿ ಘಟನೆ ಸಂಭವಿಸಿದ್ದು, ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದನ್ನು ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರೇನು ಹೇಳುತ್ತಾರೆ?
ವಿಜಯ್ ಅವರಿಗೆ ಚಾಕು ಚುಚ್ಚಿ ಕೊಲೆ ಮಾಡಿರುವವರು ಅವರಿಗೆ ಪರಿಚಯದವರೇ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಘಟನೆಗೂ ಬೇರೆಯದ್ದಕ್ಕೂ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://suddikanaja.com/2022/10/24/rto-seized-five-vehicles-at-shikaripura/

Leave a Reply

Your email address will not be published. Required fields are marked *

error: Content is protected !!