Arecanut theft | ಮನೆ ಪಕ್ಕ ಒಣಗಲು ಹಾಕಿದ್ದ ಅಡಿಕೆ ಕಳವು, ಆರೋಪಿಗಳನ್ನು ಬಂಧಿಸಿದ ಪೊಲೀಸ್

arecanut harwesting

 

 

ಸುದ್ದಿ ಕಣಜ.ಕಾಂ ರಿಪ್ಪನ್ ಪೇಟೆ
RIPPONPET: ಹರತಾಳು ಮಜಿರೆ ಕ್ವಾಡ್ರಿಗೆ ಗ್ರಾಮದ ಬಾಲರಾಜ್ ಅವರು ತಮ್ಮ ಮನೆ ಪಕ್ಕದಲ್ಲಿ ಒಣಗಿಸಲು ಹಾಕಿದ್ದ ಸುಮಾರು ₹1 ಲಕ್ಷ ಮೌಲ್ಯದ ಅಡಿಕೆ ಕಳ್ಳತನ ಪ್ರಕರಣವನ್ನು ರಿಪ್ಪನ್ ಪೇಟೆ ಪೊಲೀಸರು ಬೇಧಿಸಿದ್ದಾರೆ‌.

READ | ಅಡಿಕೆ ಸುಲಿಯುವ ಯಂತ್ರಕ್ಕೆ ಮೀಟರ್, ಸಿಎಂ, ಇಂಧನ ಸಚಿವರಿಗೆ ಪತ್ರದಲ್ಲಿ ಏನಿದೆ?

ಹೊಸನಗರದ ಹರತಾಳ್ ಗ್ರಾಮ ನಿವಾಸಿ ರಾಘವೇಂದ್ರ(28),
‌ನಂಜವಳ್ಳಿ ಗ್ರಾಮದ ಶ್ರೀಧರ್(52) ಬಂಧಿತ ಆರೋಪಿಗಳು. ಇವರ ಬಳಿಯಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ₹85,000 ಮೌಲ್ಯದ 1 ಕ್ವಿಂಟಾಲ್ 85 ಕೆ.ಜಿ ತೂಕದ ಒಣ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ಮೌಲ್ಯ ₹3,00,000 ಮೌಲ್ಯದ ಮಹೀಂದ್ರ ಜೀತೋ ಪ್ಲಸ್ ಲಗೇಜ್ ಆಟೋ ಹಾಗೂ ಅಂದಾಜು ₹25,000 ಮೌಲ್ಯದ 300 ರಬ್ಬರ್ ಶೀಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ.
ಎಸ್.ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್.ಪಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್.ಪಿ ಗಜಾನನ ವಾಮನ ಸುತಾರ, ಹೊಸನಗರ ಸಿಪಿಐ ಗುರಣ್ಣ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ರಿಪ್ಪನ್ ಪೇಟೆ ಪಿಎಸ್.ಐ ಪ್ರವೀಣ್, ಸಿಬ್ಬಂದಿಯಾದ ಶಿವಕುಮಾರ್ ನಾಯ್ಕ, ಉಮೇಶ್, ಸಂತೋಷ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿದೆ.

 

error: Content is protected !!