Crop insurance | ವಿಮಾ ಕಂಪನಿಗೆ ಜಿಲ್ಲಾಧಿಕಾರಿ ಖಡಕ್ ವಾರ್ನಿಂಗ್, ನೀಡಿದ ಸೂಚನೆಗಳೇನು?

dc selvamani

 

 

ಸುದ್ದಿ ಕಣಜ.ಕಾಂ | DISTRICT | 18 OCT 2022
ಶಿವಮೊಗ್ಗ(shivamogga): ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(pradhan mantri fasal bima yojana) ಅಡಿ 2022ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಅರ್ಜಿ ಸಲ್ಲಿಸಿರುವ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರದ ಮೊತ್ತವನ್ನು ಅಕ್ಟೋಬರ್ 31 ರೊಳಗೆ ಪಾವತಿಸುವಂತೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ (Dr. R.Selvamani) ಕೃಷಿ ವಿಮಾ ಕಂಪನಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಂರಕ್ಷಣ್ ತಂತ್ರಾಂಶದಲ್ಲಿ ರೈತರ ವಿಮೆಯ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುತ್ತಿದ್ದು, ಆದಷ್ಟು ಶೀಘ್ರದಲ್ಲಿ ವಿಮೆ ಮೊತ್ತವನ್ನು ಅರ್ಹ ರೈತರ ಖಾತೆಗೆ ಬಿಡುಗಡೆ ಮಾಡಲಾಗುವುದು.
| ಪ್ರವೀಣ್ ಕುಮಾರ್, ಉಪ ವ್ಯವಸ್ಥಾಪಕ, ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ.

ಬುಧವಾರ ಜಿಲ್ಲಾಡಳಿತ ಕಚೇರಿಯಲ್ಲಿ ಕೃಷಿ ಅಧಿಕಾರಿಗಳು ಮತ್ತು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿ. ಅಧಿಕಾರಿಗಳೊಂದಿಗೆ ವೈಯಕ್ತಿಕ ಬೆಳೆ ವಿಮೆ ಪಾವತಿ ಕುರಿತು ಚರ್ಚಿಸಿದರು.
ಸಮಸ್ಯೆ ಇತ್ಯರ್ಥಪಡಿಸಿಕೊಂಡು ವಿಮಾ ಮೊತ್ತ ನೀಡಿ
ಮುಂಗಾರು ಹಂಗಾಮಿನ ಮಧ್ಯಂತರ ಬೆಳೆ ಪರಿಹಾರವನ್ನು ಶೀಘ್ರದಲ್ಲಿ ಪಾವತಿಸುವಂತೆ ಈ ಹಿಂದೆಯೇ ವಿಮಾ ಕಂಪನಿಗೆ ಸೂಚಿಸಲಾಗಿತ್ತು. ತಾಂತ್ರಿಕ ಮತ್ತಿತರೆ ಏನೇ ಸಮಸ್ಯೆಗಳಿದ್ದರೂ ಬಗೆಹರಿಸಿಕೊಂಡು, ವಿಮೆ ಅರ್ಜಿಗಳನ್ನು ಇತ್ಯರ್ಥಪಡಿಸಿ ಅಕ್ಟೋಬರ್ 31 ರೊಳಗೆ ರೈತರಿಗೆ ವಿಮಾ ಮೊತ್ತವನ್ನು ಪಾವತಿಸುವಂತೆ ಸೂಚಿಸಿದರು.

READ | ಶರಾವತಿ ಮುಳುಗಡೆ ಸಂತ್ರಸ್ತರಿಗೆ ಅಭಯ ನೀಡಿದ ಸಂಸದ ಬಿ.ವೈ.ರಾಘವೇಂದ್ರ, ಏನೇನು ಭರವಸೆ?

ವಿಮಾ ಮೊತ್ತ ಪಡೆಯಲು 12038 ರೈತರು ಅರ್ಹರು
ಕೃಷಿ ಜಂಟಿ ನಿರ್ದೇಶಕಿ (agriculture department Joint director) ಪೂರ್ಣಿಮಾ, 2022ರ ಮುಂಗಾರು ಹಂಗಾಮಿಗೆ ಇದುವರೆಗೆ ಜಿಲ್ಲೆಯಲ್ಲಿ ಸುಮಾರು 31 ಸಾವಿರ ಅರ್ಜಿಗಳು ಬಂದಿದ್ದು, ಮಧ್ಯಂತರ ಅವಧಿಗೆ 12,038 ರೈತರು ಸುಮಾರು ₹13.80 ಕೋಟಿ ವಿಮೆ ಮೊತ್ತ ಪಡೆಯಲು ಅರ್ಹರಾಗಿದ್ದಾರೆ. ಈ ಮೊತ್ತವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ವಿಮಾ ಕಂಪನಿಗೆ ಕೋರಲಾಗಿದೆ ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕ ಬಸವರಾಜ್, ತಾಲ್ಲೂಕುಗಳ ಕೃಷಿ ಸಹಾಯಕ ನಿರ್ದೇಶಕರು, ವಿಮಾ ಕಂಪೆನಿ ಜಿಲ್ಲಾ ವ್ಯವಸ್ಥಾಪಕಿ ಪ್ರಿಯಾಂಕಾ ಇದ್ದರು.

https://suddikanaja.com/2022/10/18/three-who-stole-sandalwood-5-years-simple-imprisonment-shivamogga-court-judgment/

Leave a Reply

Your email address will not be published. Required fields are marked *

error: Content is protected !!