Court News | ಭದ್ರಾವತಿ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್

Judgement

 

 

ಸುದ್ದಿ ಕಣಜ.ಕಾಂ | DISTRICT | 17 OCT 2022
ಶಿವಮೊಗ್ಗ(Shivamogga): ಪೋಕ್ಸೊ (Pocso) ಕಾಯ್ದೆ ಅಡಿ ಆರೋಪ ದೃಢಪಟ್ಟ ಹಿನ್ನೆಲೆ ಭದ್ರಾವತಿ (Bhadravathi) ಮೂಲದ ವ್ಯಕ್ತಿಯೊಬ್ಬರಿಗೆ 20 ವರ್ಷ ಜೈಲು ಹಾಗೂ ₹1 ಲಕ್ಷ ದಂಡ ವಿಧಿಸಿ ಶಿವಮೊಗ್ಗ ನ್ಯಾಯಾಲಯವು ಸೋಮವಾರ ತೀರ್ಪು (Judgement) ನೀಡಿದೆ.

READ | ಖಾಕಿ ಸರ್ಪಗಾವಲಲ್ಲಿ ಆಪರೇಷನ್ ಬುಲ್ಡೋಜರ್, ‘ಹಕ್ಕಿಪಿಕ್ಕಿ ಕ್ಯಾಂಪ್’ನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ

ಭದ್ರಾವತಿಯ ಗ್ರಾಮವೊಂದರ ರಾಘವೇಂದ್ರ(27) ಎಂಬಾತ 3 ವರ್ಷ 4 ತಿಂಗಳ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದನು. ಈ ಬಗ್ಗೆ ಸಂತ್ರಸ್ತೆಯ ತಾಯಿ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಆಗಿನ ತನಿಖಾಧಿಕಾರಿ ಭದ್ರಾವತಿ ಸಿಪಿಐ ಇ.ಒ.ಮಂಜುನಾಥ್‌ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎಸ್‌.ಮೋಹನ್‌ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಅಭಿಯೋಜಕ ಹರಿಪ್ರಸಾದ್‌ ವಾದ ಮಂಡಿಸಿದ್ದರು.

https://suddikanaja.com/2022/10/17/kunchitiga-state-level-convention-at-shikaripura/

Leave a Reply

Your email address will not be published. Required fields are marked *

error: Content is protected !!