Shimul Milk Rate | ಹೈನುಗಾರರಿಗೆ ಗುಡ್ ನ್ಯೂಸ್, ಕನ್ನಡ ರಾಜ್ಯೋತ್ಸವಕ್ಕೆ ಶಿಮುಲ್ ಕೊಡುಗೆ

Nandini Milk

 

 

HIGHLIGHTS 

  • ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯ ರೈತರಿಗೆ ಕನ್ನಡ ರಾಜ್ಯೋತ್ಸವ ಕೊಡುಗೆ ನೀಡಿದ ಶಿಮುಲ್
  • ಒಕ್ಕೂಟದಲ್ಲಿ ಹಿಂದೆಂದೂ ಹಾಲಿನ ದರ 30 ರೂ. ಇರಲಿಲ್ಲ, ಇತಿಹಾಸದಲ್ಲೇ ಇದೇ ಮೊದಲು ಅತ್ಯಧಿಕ ಧಾರಣೆ
  • ರೈತರಿಂದ ಹಾಲು ಖರೀದಿಸುವ ದರವನ್ನು ಏರಿಸಲಾಗಿದೆಯೇ ವಿನಹ ಇದರ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ.

ಸುದ್ದಿ ಕಣಜ.ಕಾಂ | KARNATAKA | 26 OCT 2022
ಶಿವಮೊಗ್ಗ: ಹೈನುಗಾರರಿಗೆ ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್-Shimul) ಶುಭಸುದ್ದಿ (Good news) ನೀಡಿದೆ. ನವೆಂಬರ್ 1ರಿಂದ ಅನ್ವಯವಾಗುವಂತೆ ಪ್ರತಿ ಲೀಟರ್ ಹಾಲು (Milk) ಖರೀದಿಗೆ 2 ರೂಪಾಯಿ ಹೆಚ್ಚಿಸಲು ತೀರ್ಮಾನಿಸಿದೆ.

READ | ಬಲಿಪಾಢ್ಯಮಿ ದಿನವೇ ಪೊಲೀಸ್ ಗುಂಡಿನ ಸದ್ದು, ಮಹಜರು ವೇಳೆ ಖಾಕಿ ಮೇಲೆಯೇ ಅಟ್ಯಾಕ್

ಶಿಮುಲ್ ಆಡಳಿತ ಕಚೇರಿಯಲ್ಲಿ ಮಂಗಳವಾರ ನಡೆದ ಒಕ್ಕೂಟದ 425ನೇ ಆಡಳಿತ ಮಂಡಳಿ ಸಭೆ ಬಳಿಕ ಶಿಮುಲ್ ಅಧ್ಯಕ್ಷ ಎನ್.ಎಚ್.ಶ್ರೀಪಾದ್ ರಾವ್ ನಿರ್ಧಾರವನ್ನು ಪ್ರಕಟಸಿದ್ದಾರೆ.

ಹಾಲಿನ ಉತ್ಪಾದನಾ ವೆಚ್ಚ ದುಬಾರಿಯಾಗಿದೆ. ಇದರ ನಡುವೆ ಕಳೆದ ಒಂದು ವರ್ಷದಿಂದ ದರ ಹೆಚ್ಚಿಸುವ ಬೇಡಿಕೆಯನ್ನು ನಿರಂತರವಾಗಿ ಸಲ್ಲಿಸಲಾಗುತ್ತಿತ್ತು. ರೈತರ ನೆರವಿಗೆ ಬರಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ 2 ರೂ. ಹೆಚ್ಚಿಸಲಾಗಿದೆ.
| ಎನ್.ಎಚ್.ಶ್ರೀಪಾದ್ ರಾವ್, ಅಧ್ಯಕ್ಷ, ಶಿಮುಲ್

ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯ ಹೈನುಗಾರರಿಗೆ ಇದರ ಪ್ರಯೋಜನ ಪ್ರಾಪ್ತವಾಗಲಿದೆ. ಸಂಘದಿಂದ 30.20 ರೂ., ಸರ್ಕಾರದ ಪ್ರೋತ್ಸಾಹ ಧನ 5 ರೂ. ಸೇರಿ ಪ್ರತಿ ಲೀಟರ್ ಹಾಲಿಗೆ ಒಟ್ಟು 35.20 ರೂ. ನೀಡಲಾಗುವುದು.
ಶಿಮುಲ್ ಈ ಹಿಂದೆ ಯಾವಾಗೆಲ್ಲ ದರ ಹೆಚ್ಚಿಸಿದೆ?
ಆಗಸ್ಟ್ 11ರಿಂದ ಪ್ರತಿ ಲೀಟರ್ ಹಾಲಿಗೆ ಒಂದು ರೂ. ಹೆಚ್ಚಿಸಲಾಗಿತ್ತು. ಇದರಿಂದ ರೈತರಿಗೆ 28.20 ರೂ. ಸಿಗುತ್ತಿತ್ತು. ನ.1ರಿಂದ ಎರಡು ಹೆಚ್ಚಿಸಿರುವುದರಿಂದ 35.20 ರೂ. ಲಭ್ಯವಾಗಲಿದೆ.

https://suddikanaja.com/2022/10/25/deepawali-festival-special-train-from-shivamogga-to-yashwanathpur-south-western-railway-requsted-to-use-fecility/

Leave a Reply

Your email address will not be published. Required fields are marked *

error: Content is protected !!