BM Lakshmi Prasad | ಅಧಿಕಾರ ವಹಿಸಿದಾಗಿನಿಂದ ಸವಾಲುಗಳನ್ನೇ ಎದುರಿಸಿದ ಸೂಪರ್ ಕಾಪ್, ಕೆಲಸದ ವಿಚಾರದಲ್ಲಿ ದೈತ್ಯ, ಟೆಕ್ನಾಲಜಿಯಲ್ಲಿ ಸ್ಮಾರ್ಟ್, ಇವರ ಬಗ್ಗೆ ತಿಳಿಯಲೇಬೇಕಾದ ಟಾಪ್‌ 8 ವಿಚಾರಗಳಿವು

BM Lakshmiprasad

 

 

HIGHLIGHTS

  • ಹರ್ಷನ ಕೊಲೆಯ ಬೆನ್ನೆಲ್ಲೇ‌ ಮತ್ತೊಂದು ಹತ್ಯೆಗೆ ಸ್ಕೆಚ್ ವಿಫಲಗೊಳಿಸಿದ ಲಕ್ಷ್ಮೀಪ್ರಸಾದ್
  • ಚಾಕು‌ ಇರಿತ ಪ್ರಕರಣದಲ್ಲಿ ಶಂಕಿತ‌ ಉಗ್ರರ ಜಾಲವನ್ನು ಬೇಧಿಸಿದರು
  • ಪೊಲೀಸರಿಂದ ತಲೆಮರೆಸಿಕೊಂಡಿದ್ದ ನಟೋರಿಯಸ್ ರೌಡಿ ಬಚ್ಚಾ ಅಲಿಯಾಸ್ ಬಚ್ಚನ್ ಬಂಧನ
  • ಮಾದಕ ವಸ್ತು ಗಾಂಜಾ ಜಾಲವನ್ನು ಬೇಧಿಸುವಲ್ಲಿ ಸಫಲರಾದ ಪೊಲೀಸರು

ಸುದ್ದಿ ಕಣಜ.ಕಾಂ | DISTRICT | 05 OCT 2022
ಶಿವಮೊಗ್ಗ: ಇವರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ(superintendent of Police)ಯಾಗಿ ಅಧಿಕಾರ ಸ್ವೀಕಾರಿಸಿದಂದಿನಿಂದ ಹಲವು ಸವಾಲುಗಳನ್ನು ಎದುರಿಸಿ ಅವುಗಳಿಗೆ ಸಮರ್ಥ ಪರಿಹಾರಗಳನ್ನು ಕಂಡುಹಿಡಿದಿದ್ದಾರೆ.
ಹಲವು ಒತ್ತಡಗಳ ನಡುವೆಯೂ ಪ್ರಕರಣಗಳನ್ನು ಎಲ್ಲ ಆಯಾಮಗಳಲ್ಲಿ ಪರಿಶೀಲಿಸಿ, ಇವರು ಸೂಪರ್ ಕಾಪ್ ಎನಿಸಿಕೊಂಡಿದ್ದಾರೆ. ಕ್ಲಿಷ್ಟಕರ ಪ್ರಕಾರಗಳನ್ನು ಬಾಳೆಹಣ್ಣು ಸುಲಿದಂತೆ ಸಾಲ್ವ್ ಮಾಡಿದ್ದಾರೆ. ಇದಕ್ಕೆ ಇವರು ಕಾರ್ಯನಿರ್ವಹಿಸುತ್ತಿದ್ದ ರೀತಿಯೂ ಕಾರಣವಾಗಿರಬಹುದು.

READ | ಶಿವಮೊಗ್ಗ ಎಸ್ಪಿ ಲಕ್ಷ್ಮೀಪ್ರಸಾದ್ ವರ್ಗಾವಣೆ, ಹೊಸ ಎಸ್ಪಿ ಯಾರು?

  1. ಒಂದೂವರೆ ವರ್ಷ ಶಿವಮೊಗ್ಗ ಎಸ್ಪಿ ಆಗಿ ಲಕ್ಷ್ಮೀಪ್ರಸಾದ್ (BM Lakshmiprasad) ಕಾರ್ಯನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ‌ ಹರ್ಷ ಕೊಲೆ ಪ್ರಕರಣ ಸೇರಿದಂತೆ ಹಲವು ಹೈ ಪ್ರೋಫೈಲ್ ಪ್ರಕರಣಗಳನ್ನು‌‌ ಬೇಧಿಸಿದ್ದಾರೆ. ಎಸ್.ಪಿ. ಬಿ.ಪಿ.ಲಕ್ಷ್ಮೀಪ್ರಸಾದ್ ಬಗ್ಗೆ ತಿಳಿಯಬೇಕಾದ ವಿಚಾರಗಳಿವು…
  2. ಅಪರಾಧ ಜಗತ್ತಿಗೆ ಉದ್ದೀಪನದಂತೆ ಕಾರ್ಯನಿರ್ವಹಿಸುವ ಗಾಂಜಾ (Ganja) ಸೇರಿದಂತೆ ಇನ್ನಿತರ ಮಾದಕ ವಸ್ತುಗಳನ್ನು ಬುಡ ಸಮೇತ ಅಲ್ಲಾಡಿಸಿದ್ದಾರೆ. ಗಾಂಜಾ ಜಾಲದ‌ ಕಿಂಗ್ ಪಿನ್’ಗಳನ್ನು ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ. ಹೊರ ಜಿಲ್ಲೆಗಳಿಂದ ಸಪ್ಲೈ ಮಾಡಲಾಗುತ್ತಿದ್ದ ಗಾಂಜಾ ಹೆಡೆಮುರಿ ಕಟ್ಟಿದ್ದಾರೆ.
  3. ಹರ್ಷನ ಹತ್ಯೆ ಪ್ರಕರಣ ಆರೋಪಿಗಳನ್ನು‌ ಬಂಧಿಸಿದ್ದಾರೆ. ಇದರ ಬೆನ್ನಲ್ಲೇ ಇನ್ನೊಂದು ಹಿಂದೂ ಯುವಕನ ಹತ್ಯೆಯ ಸಂಚಿನ ಬಗ್ಗೆ ವಿಚಾರಣೆ ವೇಳೆ ಮಾಹಿತಿ ಲಭಿಸಿದ್ದೇ ಯೋಜನೆಯನ್ನು ವಿಫಲಗೊಳಿಸಿದ್ದಾರೆ. ಸಮರ್ಥ ನಾಯಕತ್ವದ ಗುಣದಿಂದಾಗಿ ಅಧಿಕಾರಿಗಳ‌ ನೇತೃತ್ವದಲ್ಲಿ ಈ ಎಲ್ಲ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ.
  4. ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ ಕಿಂಗ್ ಪಿನ್ ಆರೋಪಿ‌ ಜಬಿಯನ್ನು ಬಂಧಿಸಿದ ಪೊಲೀಸರ‌ ತಂಡ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಲಭಿಸಿದ್ದೇ ಶಂಕಿತ‌‌ ಉಗ್ರರನ್ನು ವಶಕ್ಕೆ ಪಡೆದಿದ್ದಾರೆ. ಅವರು ನಡೆಸಿದ್ದಾರೆನ್ನಲಾದ ಸ್ಫೋಟಕಗಳನ್ನು‌ ವಶಕ್ಕೆ ಪಡೆದಿದ್ದಾರೆ. ಇದರ ಹಿಂದಿನ ಜಾಲವೇ‌ ಬೆಚ್ಚಿ ಬೀಳುವಂತೆ ಮಾಡಿದ್ದು ಇದೇ‌ ಲಕ್ಷ್ಮೀಪ್ರಸಾದ್.
  5. ಶಿವಮೊಗ್ಗದಂತಹ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ‌ ತಮ್ಮ ಚಾಕಚಕ್ಯತೆ ಮೆರೆದಿದ್ದಾರೆ. ಮಂಗಳೂರಿನಂತಹ ಕೋಮು‌ಸೂಕ್ಷ್ಮ ಪ್ರದೇಶದಲ್ಲಿ ದಕ್ಷತೆಯಿಂದ‌ ಸೇವೆ ಸಲ್ಲಿಸಿದ್ದೇ‌ ಇದಕ್ಕೆ ಬುನಾದಿ ಹಾಕಿ‌ಕೊಟ್ಟಿತ್ತು. ಜತೆಗೆ, ಇವರು ಎ.ಎನ್.ಎಫ್.ನಲ್ಲಿ ನಿರ್ವಹಿಸಿದ ಅನುಭವ ಕರ್ತವ್ಯ ನಿರ್ವಹಣೆಯಲ್ಲಿ ಸಹಾಯ ಮಾಡಿದೆ.
  6. ನಟೋರಿಯಸ್ ರೌಡಿ ಬಚ್ಚಾ ಅಲಿಯಾಸ್ ಬಚ್ಚನ್ (Bacchan) ಬಂಧನವೂ ಒಂದು ರೋಚಕ‌ವೇ ಆಗಿದೆ. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಬಚ್ಚಾ, ಉದ್ಯಮಿಗೆ ಹಣಕ್ಕಾಗಿ ಬೆದರಿಕೆಯೊಡ್ಡುತ್ತಿದ್ದ. ಇವನ ಹೆಡೆಮುರಿ‌ಕಟ್ಟುವಲ್ಲಿ ಶಿವಮೊಗ್ಗ ಪೊಲೀಸರು ಸಫಲರಾಗಿದ್ದಾರೆ.
  7. ತಂತ್ರಜ್ಞಾನವನ್ನು ಬಳಸಿಯೇ ಆರೋಪಿಗಳನ್ನು ಪತ್ತೆ ಹಚ್ಚಲು ಸಫಲರಾಗಿದ್ದಾರೆ. ಆಗಬಹುದಾದ‌ ದೊಡ್ಡ‌ ಅನಾಹುತಗಳನ್ನು ಇದರ ಮೂಲಕವೇ ವಿಫಲಗೊಳಿಸಿದ್ದಾರೆ.
  8. ವಿಶೇಷವೆಂದರೆ, ಲಕ್ಷ್ಮೀಪ್ರಸಾದ್ ಅವರು ಮಧ್ಯಾಹ್ನ ಊಟಕ್ಕೂ‌ ಹೋಗದೇ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾರ್ವಜನಿಕರ ಭೇಟಿಗೂ ಅವಕಾಶ‌‌ ನೀಡುತ್ತಿದ್ದರು. ಮಾನವೀಯತೆ ಎಂದು ಬಂದರೆ, ಅವರಿಗೆ ಸಹಾಯ ಮಾಡುವುದರಲ್ಲೂ ಎತ್ತಿದ‌ ಕೈ.

https://suddikanaja.com/2022/01/28/police-department-has-several-master-plans-for-crime-prevention-in-the-shimoga-district-sp-bm-lakshmi-prasad-said/

Leave a Reply

Your email address will not be published. Required fields are marked *

error: Content is protected !!