Today Gold, Silver Rate | ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್, ಆಭರಣ ಚಿನ್ನದ ಬೆಲೆಯಲ್ಲಿ ಇಳಿಕೆ

GOLD RATE NEW

 

 

ಸುದ್ದಿ ಕಣಜ.ಕಾಂ | KARNATAKA | 29 OCT 2022
ಬೆಂಗಳೂರು: ಚಿನ್ನಾಭರಣ ಪ್ರಿಯರಿಗೆ ಶುಭ ಸುದ್ದಿ ಇದೆ. ವಾರಾಂತ್ಯದಲ್ಲಿ ಚಿನ್ನ(gold)ದ ಬೆಲೆಯು ಕೊಂಚ ಇಳಿಕೆ ಕಂಡಿದೆ. ಪ್ರತಿ 10 ಗ್ರಾಂಗೆ ಶನಿವಾರ 24 ಕ್ಯಾರೆಟ್ ಬೆಲೆಯಲ್ಲಿ 380 ರೂಪಾಯಿ ಇಳಿಕೆಯಾದರೆ, 22 ಕ್ಯಾರೆಟ್ ನಲ್ಲಿ 250 ರೂ. ಕಡಿಮೆಯಾಗಿದೆ.

READ | ಕ್ರಿಮಿನಲ್’ಗಳ ಜಾತಕ ಬಿಚ್ಚಿಡಲು ಪೊಲೀಸರ ಟೆಕ್ನಾಲಜಿ ಮೊರೆ, ಇನ್ಮುಂದೆ ರಾತ್ರಿ ವೇಳೆ‌ ಶಿವಮೊಗ್ಗದಲ್ಲಿ ನಿತ್ಯವೂ ಚೆಕಿಂಗ್ 

ಕಳೆದ ಅಕ್ಟೋಬರ್ 22ರಿಂದ ಈಚೆಗೆ ಚಿನ್ನದ ಬೆಲೆಯು ನಿರಂತರ ಏರಿಕೆಯಾಗುತ್ತಲೇ ಇತ್ತು(ಅ.25ರ ಹೊರತು). ದೀಪಾವಳಿ ಹಬ್ಬ(Deepawali Festival)ದಲ್ಲೂ ಬೆಲೆ ಕಡಿಮೆಯಾಗಿರಲಿಲ್ಲ. ಅ.28ರಂದು ಸ್ಥಿರವಾಗಿದ್ದ ದರ ಇಳಿಮುಖವಾಗಿದೆ.
ರಾಜ್ಯದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಈ ವಾರಾಂತ್ಯ ಆಶಾದಾಯಕ ಬೆಳವಣಿಗೆಯನ್ನು ಮೂಡಿಸಿದ್ದು, ಆಭರಣ ಪ್ರಿಯರ ಮೊಗದಲ್ಲಿ ತುಸು ನಗು ಮೂಡುವಂತೆ ಮಾಡಿದೆ.
ಬೆಳ್ಳಿಯ ಬೆಲೆಯಲ್ಲಿ ಕೆಜಿಗೆ 800 ರೂ. ಇಳಿಕೆ
ಬೆಳ್ಳಿಯ ಬೆಲೆ ಕೂಡ ಇಂದು ಕಡಿಮೆಯಾಗಿದೆ. ಪ್ರತಿ ಕೆಜಿಗೆ 800 ರೂ. ಇಳಿಕೆಯಾಗಿದ್ದು, ಶನಿವಾರ ಪ್ರತಿ ಕೆಜಿ ಬೆಳ್ಳಿಯ ಬೆಲೆ 57,500 ರೂ. ಇದೆ. ಅದೇ ಅ.28ರಂದು 58,300 ರೂ. ಇತ್ತು.

ಕರ್ನಾಟಕದಲ್ಲಿ ಚಿನ್ನ & ಬೆಳ್ಳಿ ದರ (10 ಗ್ರಾಂ)
ದಿನಾಂಕ 22 ಕ್ಯಾರೆಟ್ 24 ಕ್ಯಾರೆಟ್ ಬೆಳ್ಳಿ
25-10-2022 46,900 51,160 580
26-10-2022 47,050 51,330 581
27-10-2022 47,150 51,430 583
28-10-2022 47,150 51,430 583
29-10-2022 46,800 51,050 575

https://suddikanaja.com/2022/10/26/shimul-kannada-rajyotsava-gift-to-farmers-milk-price-rise-2-rs-per-liter/

Leave a Reply

Your email address will not be published. Required fields are marked *

error: Content is protected !!