Trade license | ಟ್ರೇಡ್ ಲೈಸೆನ್ಸ್ ಗರಿಷ್ಠ ಅವಧಿ 5 ವರ್ಷ ನಿಗದಿಪಡಿಸಿದ ಸರ್ಕಾರ, ಇದರಿಂದ ವ್ಯಾಪಾರಸ್ಥರಿಗೇನು ಪ್ರಯೋಜನ?

DS arun

 

 

HIGHLIGHTS

  • ಪ್ರತಿವರ್ಷ ಟ್ರೇಡ್ ಲೈಸೆನ್ಸ್ ಪಡೆಯುವ ತಲೆನೋವಿನಿಂದ ಮುಕ್ತಿ.
  • ಶಿವಮೊಗ್ಗ ಜಿಲ್ಲೆಯಲ್ಲಿ 20 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು

ಸುದ್ದಿ ಕಣಜ.ಕಾಂ | KARNATAKA | 21 OCT 2022
ಶಿವಮೊಗ್ಗ(Shivamogga): ಟ್ರೇಡ್ ಲೈಸೆನ್ಸ್ ಅನ್ನು 5 ವರ್ಷಕ್ಕೆ ತೆಗೆದುಕೊಳ್ಳಲು ಸರ್ಕಾರ ಆದೇಶ ಹೊರಡಿಸಿದೆ ಎಂದು ವಿಧಾನ ಪರಿಷತ ಸದಸ್ಯ ಡಿ.ಎಸ್. ಅರುಣ್ ತಿಳಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಡಿ.ಎಸ್. ಅರುಣ್ ಪಶ್ನೋತ್ತರ ವೇಳೆಯಲ್ಲಿ ಪ್ರಶ್ನೆ ಕೇಳಿದ್ದರು. ಟ್ರೇಡ್ ಲೈಸನ್ಸ್ ಅವಶ್ಯಕತೆ ಮತ್ತು ಸರ್ಕಾರಕ್ಕೆ ಟ್ರೇಡ್ ಲೈಸನ್ಸ್ ನಿಂದ ಆದಾಯ ಮತ್ತು ಅದರಿಂದ ಆಗುವ ಉಪಯೋಗಗಳು ಮತ್ತು ಅದು ಸರಳೀಕರಣ ಆಗಬೇಕು, ಅದನ್ನ ರದ್ದು ಮಾಡಬೇಕು ಅನ್ನುವುದರ ಬಗ್ಗೆ ಶಾಸಕರು ಉಲ್ಲೇಖ ಮಾಡಿದ್ದರು.ಅದಕ್ಕೆ ಸಕಾರಾತ್ಮವಾಗಿ ಸ್ಪಂದಿಸಿದ ಸಚಿವರು ಗರಿಷ್ಠ ಐದು ವರ್ಷಕ್ಕೆ ತೆಗೆದುಕೊಳ್ಳಬಹುದು ಎಂದು ಆದೇಶ ಹೊರಡಿಸಿದ್ದಾರೆ.
ಒಂದರಿಂದ ಗರಿಷ್ಠ 5 ವರ್ಷದವರೆಗೆ ಅವಕಾಶ
ಒಂದು ವರ್ಷಕ್ಕೂ ತೆಗೆದುಕೊಳ್ಳಬಹುದು, ಎರಡು ವರ್ಷಕ್ಕೂ ತೆಗೆದುಕೊಳ್ಳಬಹುದು, ಹಾಗೆ ಗರಿಷ್ಠ ಐದು ವರ್ಷಕ್ಕೆ ವ್ಯಾಪಾರ ಪರವಾನಗಿ ತೆಗೆದುಕೊಳ್ಳುವುದರ ಮೂಲಕ ಸಾಕಷ್ಟು ತೊಂದರೆಗಳನ್ನು ವ್ಯಾಪಾರಸ್ಥರು ಅನುಭವಿಸುತ್ತಿದ್ದರು. ಪ್ರತಿವರ್ಷ ತೆಗೆದುಕೊಳ್ಳಲು ನಿರ್ಧಾರ ತಪ್ಪಿದಂತಾಗಿದೆ. ಐದು ವರ್ಷಕ್ಕೊಮ್ಮೆ ಅವರು ಹಣ ಸಂದಾಯ ಮಾಡಿ ಮಾಡಬಹುದು.
ಟ್ರೇಡ್ ಲೈಸೆನ್ಸ್ ನಿಂದ ವಾರ್ಷಿಕ ₹22 ಕೋಟಿ
ದಯಮಾಡಿ ಸರ್ಕಾರ ಮತ್ತೊಮ್ಮೆ ಪರಿಗಣಿಸಿ ಟ್ರೇಡ್ ಲೈಸನ್ಸ್ ರದ್ದು ಮಾಡಬೇಕು ಅದರಿಂದ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿದೆ. ಇಲ್ಲಿ ಆಗುತ್ತಿರುವ ಭ್ರಷ್ಟಚಾರ, ಆದ್ದರಿಂದ ಆದರ ಅವಶ್ಯಕತೆ ರಾಜ್ಯದಲ್ಲಿ ಟ್ರೇಡ್ ಲೈಸನ್ಸ್ ನಿಂದ ಒಟ್ಟು ಸಂದಾಯ ಆಗುವುದು ₹20 ರಿಂದ 22 ಕೋಟಿ ಆದ್ದರಿಂದ ಅನುಭವಿಸುತ್ತಿರುವ ವ್ಯಾಪಾರಸ್ಥರು ಲಕ್ಷಾಂತರ ಜನ, ಶಿವಮೊಗ್ಗ ಜಿಲ್ಲೆಯಲ್ಲೆ 20 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು ಇದ್ದಾರೆ.
ಅವರು ಯಾರು ತೆಗೆದುಕೊಳ್ಳುವುದಕ್ಕೆ ಮುಂದೆ ಬರುವುದಿಲ್ಲ ಏಕೆ ಅಂದ್ರೆ ಅದರಿಂದ ಆಗುತ್ತಿರುವ ಸಮಸ್ಯೆಗಳು ಹಾಗಾಗಿ ಇದನ್ನ ರದ್ದು ಮಾಡಬೇಕು ಅನ್ನುವ ಕೂಗು ಇಂದಿಗೂ ಇದೆ. ಹಾಗಾಗಿ ಐದು ವರ್ಷಕ್ಕೊಮ್ಮೆ ಪರವಾನಗಿ ತೆಗೆದುಕೊಳ್ಳುವ ಆದೇಶ ಮಾಡಿರುವುದರಿಂದ ತುಂಬ ಜನ ವ್ಯಾಪಾರಸ್ಥರಿಗೆ ಅನುಕೂಲ ಆಗುತ್ತದೆ. ಮನವಿಗೆ ಸ್ಪಂದಿಸಿದ ಸಿಎಂ, ಸಚಿವರುಗಳಿಗೆ ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.

https://suddikanaja.com/2022/10/15/arecanut-task-force-important-meeting-at-bengaluru/

Leave a Reply

Your email address will not be published. Required fields are marked *

error: Content is protected !!