Shivamogga Dasara | ಮಳೆಯ ನಡುವೆಯೇ ತುಂಗಾ ಆರತಿ, ಮನೆ ಮಾಡಿದ ಸಂಭ್ರಮ, ನಗರವಿಡೀ ಟಾಫ್ರಿಮ್ ಜಾಮ್

Tunga arti Shivamogga

 

 

HIGHLIGHTS

  • ಶಿವಮೊಗ್ಗದಲ್ಲಿ ದಸರಾ ಪ್ರಯುಕ್ತ ನಡೆದ ತುಂಗಾ ಆರತಿ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಭಾಗಿ
  • ತುಂಗಾ ಆರತಿ ಹಿನ್ನೆಲೆ ಸೇತುವೆಗೆ ಪುಷ್ಪ, ದೀಪಾಲಾಂಕರ, ಕಣ್ತುಂಬಿಕೊಂಡ‌ ಜನ
  • ತುಂಗಾ ಸೇತುವೆಯಿಂದ MRS ಹಾಗೂ ಅಮೀರ್ ಅಹಮ್ಮದ್ ವೃತ್ತದವರೆಗೆ ಟ್ರಾಫಿಕ್ ಜಾಮ್

ಸುದ್ದಿ ಕಣಜ.ಕಾಂ | DISTRICT | 04 OCT 2022
ಶಿವಮೊಗ್ಗ: ನಗರದಲ್ಲಿ ಮಳೆಯ ನಡುವೆಯೇ ತುಂಗಾ ಆರತಿ (Tunga arati) ಕಾರ್ಯಕ್ರಮ ಸೋಮವಾರ ಜರುಗಿತು.
ಮಹಾನಗರ ಪಾಲಿಕೆ (shimoga city corporation) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೋಟೆ ರಸ್ತೆಯ ಕೋರ್ಪಲಯ್ಯ ಛತ್ರ (Korpalayya Chatra)ಬಳಿ ಅದ್ಧೂರಿ ಕಾರ್ಯಕ್ರಮ ನಡೆಯಿತು. ಬಾಣ ಬಿರುಸುಗಳನ್ನು ಹಾರಿಸಿ ಸಂಭ್ರಮಿಸಲಾಯಿತು.
ಗಂಗಾ ಪರಮೇಶ್ವರಿ ದೇವಸ್ಥಾನ ಆವರಣದಿಂದ ತುಂಗಾ ನದಿಯ ಕೋರ್ಪಳಯ್ಯನ ಮಂಟಪದವರೆಗೆ ವಾದ್ಯ ಮಂಟಪಗಳೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

Tunga Arti mahanagara 1

READ | ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರಕಾರದಿಂದ ಮಹತ್ವದ ಘೋಷಣೆ

ತುಂಗಾ ಸೇತುವೆ(Tunga Bridge), ಮಂಟಪಕ್ಕೆ ದೀಪಾಲಂಕಾರ ಮಾಡಲಾಗಿತ್ತು‌. ವಿಶೇಷವೆಂದರೆ, ಸೇತುವೆಯನ್ನು ಹೂವಿನಿಂದ ಅಲಂಕರಿಸಲಾಗಿದೆ. ಲೇಸರ್ ಲೈಟ್ (Laser light) ಹಾಕಲಾಗಿತ್ತು. ಜನರು ಸೇತುವೆಯ ಬಳಿ ನಿಂತ ಮನಮೋಹಕ ದೃಶ್ಯ ಕಣ್ಮನ ತುಂಬಿಕೊಂಡರು.
ಕಾರ್ಯಕ್ರಮಕ್ಕೆ ಚಾಲನೆ
ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ಉದ್ಘಾಟಿಸಿದರು. ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.
ಒಂದೆಡೆ ತುಂಗಾ ಆರತಿ, ಮತ್ತೊಂದೆಡೆ ಟ್ರಾಫಿಕ್ ಜಾಮ್
ತುಂಗಾ ಆರತಿ ಹಿನ್ನೆಲೆ ಹಳೇ ಸೇತುವೆಯ ಮೇಲೆ ಸಂಚಾರ ನಿರ್ಬಂಧಿಸಲಾಗಿತ್ತು. ಹೀಗಾಗಿ, ಹೊಸ ಸೇತುವೆಯ ಮೇಲೆ ಸಂಚಾರ ದಟ್ಟಣೆ ಉಂಟಾಗಿತ್ತು. ಸೇತುವೆಯಿಂದ ಎಂ.ಆರ್.ಎಸ್.ವರೆಗೆ ಹಾಗೂ ಇನ್ನೊಂದು ಭಾಗದಲ್ಲಿ ಅಮೀರ್ ಅಹಮ್ಮದ್ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.
ಬಾಣ ಬಿರುಸುಗಳ ಸಂಭ್ರಮ
ತುಂಗಾ ಆರತಿಯ ಪ್ರಯುಕ್ತ ಮಾಡಲಾಗುವ ದೀಪಾಲಾಂಕರ ಸವಿಯುವುದೇ ಖುಷಿಯ ವಿಚಾರ. ಹೂವು, ಬಣ್ಣ ಬಣ್ಣದ ದೀಪಗಳು ಹಾಗೂ ಬಾಣ ಬಿರುಸುಗಳು ನಯನ ಮನೋಹರವಾಗಿದ್ದವು.
ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಭಾಗವಹಿಸಿದ್ದರು.

https://suddikanaja.com/2022/10/02/elephant-welcome-by-shimoga-city-corporation-at-vasavi-school-interesting-fact-of-elephants/

Leave a Reply

Your email address will not be published. Required fields are marked *

error: Content is protected !!