
HIGHLIGHTS
- ಎಲೆ ಚುಕ್ಕೆ ರೋಗ ಕಂಟ್ರೋಲ್’ಗೆ ರಾಜ್ಯ ಸರ್ಕಾರದಿಂದ ₹4 ಕೋಟಿ ಅನುದಾನ ಘೋಷಣೆ
- ಒಟ್ಟು ₹8 ಕೋಟಿ ಅನುದಾನ ನಿಗಡಿಮಾಡಿ, ₹4 ಕೋಟಿ ರೈತರಿಗೆ ವಿತರಿಸಲು ಬಿಡುಗಡೆ
- ಎಲೆ ಚುಕ್ಕೆ ರೋಗ ಹಬ್ಬಿದ್ದು, ಇದರ ನಿಯಂತ್ರಣ ಬಗ್ಗೆ ತೋಟಗಾರಿಕೆ ಇಲಾಖೆ ಔಷಧಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆ
ಸುದ್ದಿ ಕಣಜ.ಕಾಂ | KARNATAKA | 04 OCT 2022
ಬೆಂಗಳೂರು: ರಾಜ್ಯ ಸರ್ಕಾರ ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿಯನ್ನು ನೀಡಿದೆ. ಅಡಿಕೆ ಬೆಳೆಯುವ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ತಲೆ ನೋವಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡು ಅನುದಾನ ಬಿಡುಗಡೆ ಮಾಡಿದೆ.
READ | ಭೂತಾನ್ ಅಡಿಕೆ ಆಮದು ಬಗ್ಗೆ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದ್ದೇನು?
ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಒಟ್ಟು ₹8 ಕೋಟಿ ಅನುದಾನ ನಿಗದಿ ಮಾಡಿ, ₹4 ಕೋಟಿಗಳನ್ನು ರೈತರಿಗೆ ವಿತರಿಸಲು ಬಿಡುಗಡೆ ಮಾಡಲಾಗಿದೆ.
ಆರಗ ಜ್ಞಾನೇಂದ್ರ ಹೇಳಿದ್ದೇನು?
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿದ್ದು, “ರಾಜ್ಯದ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಮತ್ತು ಕೊಡಗು, ಹಾಸನ ಜಿಲ್ಲೆಯಲ್ಲಿ ಒಟ್ಟು 20 ಸಾವಿರ ಹೆಕ್ಟೆರ್ ಅಡಿಕೆ ಬೆಳೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಹಬ್ಬಿದ್ದು, ಇದರ ನಿಯಂತ್ರಣ ಬಗ್ಗೆ ತೋಟಗಾರಿಕೆ ಇಲಾಖೆ ಔಷಧಿ ಹಾಗೂ ಸಿಂಪರಣೆ ವೆಚ್ಚ ಭರಿಸಲು ಅನುದಾನ ಬಿಡುಗಡೆಗೊಳಿಸಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು” ಎಂದು ವಿನಂತಿಸಿದ್ದಾರೆ.
ರೋಗ ನಿಯಂತ್ರಣಕ್ಕೆ ಉತ್ತಮ ಗುಣಮಟ್ಟದ ಸಸ್ಯ ಸಂರಕ್ಷಣೆ ಔಷಧ ಕೊಳ್ಳಲು ಪ್ರತಿ ಹೆಕ್ಟೆರ್ ಗೆ, ₹4000 ಅನುದಾನವನ್ನು ಮೊದಲ ಸಿಂಪರಣೆಗಾಗಿ 1.5 ಹೆಕ್ಟೆರ್ ತೋಟಗಾರಿಕಾ ಪ್ರದೇಶ ಮಿತಿಗೊಳಪಟ್ಟು ರೈತರಿಗೆ ಅನುದಾನ ಒದಗಿಸಲಾಗುವುದು.
| ಆರಗ ಜ್ಞಾನೇಂದ್ರ, ಅಧ್ಯಕ್ಷ, ರಾಜ್ಯ ಅಡಿಕೆ ಟಾಸ್ಕ್ ಫೋರ್ಸ್
ಅಡಿಕೆ ಎಲೆ ಚುಕ್ಕೆ ರೋಗದ ಬಗ್ಗೆ ಚರ್ಚೆ
ಎಲೆ ಚುಕ್ಕೆ ಬಾಧೆ ಕುರಿತು ಕಳೆದ ವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ತೋಟಗಾರಿಕಾ ಸಚಿವ ಮುನಿರತ್ನ, ಮೀನುಗಾರಿಕೆ ಸಚಿವ ಅಂಗಾರ ಅವರೊಂದಿಗೆ, ಸಭೆ ನಡೆಸಿ ರೋಗ ನಿಯಂತ್ರಣದ ಅಗತ್ಯದ ಬಗ್ಗೆ ಚರ್ಚಿಸಿದ್ದರು.
ತಜ್ಞರು ಮಾಡಿದ ಶಿಫಾರಸು ಏನು?
ಸುಮಾರು 20,000 ಹೆಕ್ಟೇರ್ ಅಡಿಕೆ ಬೆಲೆ ಪ್ರದೇಶದಲ್ಲಿ ಎಲೆ ಚುಕ್ಕೆ ರೋಗ ಭಾದಿಸುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ ಹಾಗೂ ರೋಗ ನಿಯಂತ್ರಣಕ್ಕೆ ಒಟ್ಟು ₹8 ಕೋಟಿ ಅನುದಾನದ ಅಗತ್ಯವಿದೆ ಎಂದು ತೋಟಗಾರಿಕಾ ತಜ್ಞರು, ಶಿಫಾರಸು ಮಾಡಿದ್ದಾರೆ.