Sports | ಬೆಂಗಳೂರಿನಲ್ಲಿ ನಡೆಯಲಿದೆ ರಾಜ್ಯ ಮಹಿಳಾ ವಾಲಿಬಾಲ್ ತಂಡದ ಆಯ್ಕೆ, ಯಾರೆಲ್ಲ ಪಾಲ್ಗೊಳ್ಳಬಹುದು?

Public Notice

 

 

ಸುದ್ದಿ ಕಣಜ.ಕಾಂ | KARNATAKA | 22 OCT 2022
ಶಿವಮೊಗ್ಗ: ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯಲಿರುವ 19 ವರ್ಷದೊಳಗಿನ ‘ಖೇಲೋ ಇಂಡಿಯಾ ಮಹಿಳಾ ವಾಲಿಬಾಲ್ ಲೀಗ್ ಪಂದ್ಯಾವಳಿ’ಗಳಿಗೆ ರಾಜ್ಯ ಮಹಿಳಾ ವಾಲಿಬಾಲ್ ತಂಡದ ಆಯ್ಕೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶಾಖೆಯಾದ ಕ್ರೀಡಾ ಕಲ್ಯಾಣದ ವತಿಯಿಂದ ಅಕ್ಟೋಬರ್ 27 ರಂದು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ವಾಲಿಬಾಲ್ ಅಂಗಣದಲ್ಲಿ ಏರ್ಪಡಿಸಲಾಗಿದೆ.

READ | ಅಭ್ಯರ್ಥಿಗಳೇ ಗಮನಿಸಿ, ರಜಾ ದಿನಗಳಂದೂ ಕಾರ್ಯನಿರ್ವಹಿಸಲಿದೆ KSOU ಕಚೇರಿ

ಯಾರೆಲ್ಲ ಪಾಲ್ಗೊಳ್ಳಬಹುದು?
ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹಿಳಾ ಕ್ರೀಡಾಪಟುಗಳು ದಿನಾಂಕ: 01-01-2004 ಅಥವಾ ನಂತರ ಜನಿಸಿರಬೇಕು. ವಿವಿಧ ಜಿಲ್ಲೆಯ ಮಹಿಳಾ ವಾಲಿಬಾಲ್ ಕ್ರೀಡಾಪಟುಗಳು ಹಾಗೂ ಸ್ಥಳೀಯ ವಾಲಿಬಾಲ್ ಕ್ರೀಡಾಪಟುಗಳು ಭಾಗವಹಿಸಬಹುದು.
ಈ ದಾಖಲೆಗಳೊಂದಿಗೆ ಬನ್ನಿ
ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹಿಳಾ ಕ್ರೀಡಾಪಟುಗಳಿಗೆ ಯಾವುದೇ ಪ್ರಯಾಣ ಭತ್ಯೆ ಹಾಗೂ ದಿನಭತ್ಯೆಯನ್ನು ಪಾವತಿಸುವುದಿಲ್ಲ. ಆಯ್ಕೆಯಾದ ಕ್ರೀಡಾಪಟುಗಳು ತರಬೇತಿ ಶಿಬಿರ ಹಾಗೂ ಪಂದ್ಯಾವಳಿಗೆ ತೆರಳುವ ಪೂರ್ವ ತಯಾರಿ ಹಾಗೂ ಆಧಾರ್ ಕಾರ್ಡ್, ಎಸ್‍ಎಸ್‍ಎಲ್‍ಸಿ ಅಂಕಪಟ್ಟಿಯೊಂದಿಗೆ ಬರಬೇಕೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

https://suddikanaja.com/2022/10/20/accident-at-shiralakoppa-two-person-died/

Leave a Reply

Your email address will not be published. Required fields are marked *

error: Content is protected !!