Planthopper in Paddy crop | ಭತ್ತಕ್ಕೆ ಕಂದು ಜಿಗಿ ಹುಳುವಿನ ಬಾಧೆ, ನಿಯಂತ್ರಣ ಕ್ರಮಗಳೇನು?

Paddy crop planthopper

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ತಾಲ್ಲೂಕಿನಲ್ಲಿ ಭತ್ತದ ಬೆಳೆಗೆ ಕಂದು ಜಿಗಿ ಹುಳುವಿನ ಬಾಧೆ (planthopper in Paddy crop) ಕಂಡುಬಂದಿದೆ. ರೈತರು ಈ ಬಗ್ಗೆ ಜಾಗೃತರಾಗಿ ಗದ್ದೆಯನ್ನು ಪ್ರತಿ ದಿನ ವೀಕ್ಷಿಸುತ್ತಿರಬೇಕು.

READ | ಸ್ವಯಂ ಉದ್ಯೋಗ ಮಾಡಬಯಸುವವರಿಗೆ ಇಲ್ಲಿದೆ ತರಬೇತಿ, ಕೂಡಲೇ ಅರ್ಜಿ ಸಲ್ಲಿಸಿ

ಭತ್ತದ ಬುಡವನ್ನು ಪರೀಕ್ಷಿಸಿ ಮತ್ತು ಜಮೀನಿನಲ್ಲಿ ಹೆಚ್ಚು ದಿನ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆಗಾಗ ಜಮೀನಿನ ನೀರನ್ನು ಬಸಿದು, ಪುನಃ ಒಂದೆರಡು ದಿನ ಬಿಟ್ಟು ನೀರನ್ನು ಹಾಯಿಸಬೇಕು. ಯೂರಿಯಾ ರಸಗೊಬ್ಬರ ಬಳಕೆ ಕಡಿಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯಲ್ಲಿ ಗಾಳಿ ಸರಾಗವಾಗಿ ಹಾದು ಹೋಗುವಂತೆ ಪ್ರತಿ 5 ಸಾಲಿಗೆ ಒಂದು ಸಾಲು ಜಾಗ ಮಾಡಬೇಕಾಗುತ್ತದೆ.
ರಾಸಾಯನಿಕಗಳ ಬಳಕೆ ಹೇಗೆ?
ಬುಡದಲ್ಲಿ ರಸ ಹೀರುವ ಹುಳು, ಕಂದು ಜಿಗಿ ಹುಳು ಪ್ರಮಾಣ ಹೆಚ್ಚಾಗಿ ಕಂಡುಬಂದಲ್ಲಿ, ರಾಸಾಯನಿಕ ನಿಯಂತ್ರಣ ಅಗತ್ಯ. ನಿಯಂತ್ರಣಕ್ಕಾಗಿ ಇಮಿಡಾಕ್ಲೋಪ್ರಿಡ್ 17.8 ಎಸ್ ಎಲ್ 0.5 ಮಿಲಿ/ಲೀ ಅಥವಾ ಪೈಮೆಟ್ರೋಜೈನ್ 50 ಡಬ್ಲ್ಯುಜಿ 0.6 ಗ್ರಾಂ/ಲೀ ನೀರಿಗೆ ಅಥವಾ ಬುಪ್ರೋಪ್ರೇಜಿನ್ 25 ಎಸ್ ಸಿ 1 ಮಿಲಿ/ಲೀ ನೀರಿಗೆ ಅಥವಾ ಪ್ಲೋನಿಕಾಮಿಡ್ 50 ಡಬ್ಲ್ಯುಜಿ 0.3 ಗ್ರಾಂ/ಲೀ ಅಥವಾ ಥಯೋಮಿಥೋಜಾಮ್ 25 ಡಬ್ಲ್ಯುಜಿ 0.3 ಗ್ರಾಂ/ಲೀ ಇವುಗಳಲ್ಲಿ ಯಾವುದಾದರೂ ಒಂದನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಸಿಂಪಡಿಸುವ ಮುನ್ನ ಜಮೀನಿನಲ್ಲಿರುವ ನೀರನ್ನು ಬಸಿದು, ರಾಸಾಯನಿಕ ಸಿಂಪಡಿಸಿದ 24 ತಾಸುಗಳ ನಂತರ ನೀರನ್ನು ಹಾಯಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್. ಶಿವರಾಜ್ ಕುಮಾರ್ ತಿಳಿಸಿದ್ದಾರೆ.

https://suddikanaja.com/2022/11/06/today-top-news-in-shivamogga/

error: Content is protected !!