Asha Bhat | ಭದ್ರಾವತಿಯ ಸ್ವಚ್ಛತಾ ರಾಯಭಾರಿ ನಟಿ ಆಶಾ ಭಟ್, ಐರನ್ ಸಿಟಿಗೆ ಇಂದು ಭೇಟಿ

asha bhat

 

 

ಸುದ್ದಿ ಕಣಜ.ಕಾಂ ಭದ್ರಾವತಿ
BHADRAVATHI: ಚಿತ್ರನಟಿ ಹಾಗೂ ಭದ್ರಾವತಿಯ ಪ್ರತಿಭೆ ಆಶಾ ಭಟ್ (Asha Bhat) ಅವರು ಭದ್ರಾವತಿಯ ಸ್ವಚ್ಛತಾ ರಾಯಭಾರಿಯಾಗಿ ಆಯ್ಕೆಯಾಗಿದ್ದು, ನವೆಂಬರ್ 10ರಂದು ಬೆಖಗ್ಗೆ 11 ಗಂಟೆಗೆ ಭದ್ರಾವತಿ ನಗರಕ್ಕೆ ಭೇಟಿ ನೀಡಲಿದ್ದಾರೆ.
ಅಂಬೇಡ್ಕರ್ ವೃತ್ತದಲ್ಲಿ ಆಶಾ ಅವರು ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಆಶಾ ಭಟ್ ಅವರು ದರ್ಶನ್ ಅವರೊಂದಿಗೆ ರಾಬರ್ಟ್ ಚಿತ್ರದಲ್ಲಿ ನಾಯಕಿ ನಟಿಯಾಗಿ ನಡಿಸಿದ್ದಾರೆ.

READ | ಶಿವಮೊಗ್ಗ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮೂವರ ಬಂಧನ

ಸಿನಿ ಜರ್ನಿ ಆರಂಭಕ್ಕೂ ಮುನ್ನ ಆಶಾ ಅವರು ಫ್ಯಾಶನ್ ಲೋಕದಲ್ಲಿ ಹೆಸರು ಮಾಡಿದ್ದರು‌. ಇವರು ಮೂಡಬಿದರೆಯ ಆಳ್ವಾಸ್ ಕಾಲೇಜ್ ನಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ವಿದ್ಯಾರ್ಥಿದೆಸೆಯಲ್ಲೇ ಫ್ಯಾಶನ್ ಲೋಕಕ್ಕೆ ಕಾಲಿಟ್ಟರು. ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ಕಿರೀಟ ಗೆದ್ದರು. ಜಾಹೀರಾತು ಲೋಕಕ್ಕೂ ಪದಾರ್ಪಣೆ ಮಾಡಿದರು. ಒಂದೊಂದೇ ಹೆಜ್ಜೆಗಳನ್ನು ಇಡುತ್ತ ಆಶಾ ಭಟ್ ಈಗ ಬಹುಬೇಡಿಕೆಯ ನಟಿಯಾಗಿದ್ದಾರೆ‌‌.

error: Content is protected !!