Sorab Politics | ಶಾಸಕರ ವಿರುದ್ಧ ಸಿಡಿದೆದ್ದ ಬಿಜೆಪಿ ಮುಖಂಡರಿಗೆ ಟ್ರೀಟ್ಮೆಂಟ್, ಯಾರಿಗೆಲ್ಲ ಪಕ್ಷದ ಜವಾಬ್ದಾರಿಯಿಂದ ಮುಕ್ತಿ?

kumar bangarappa

 

 

ಸುದ್ದಿ ಕಣಜ.ಕಾಂ | DISTRICT | 01 NOV 2022
ಸೊರಬ(sorab): ಶಾಸಕ ಕುಮಾರ್ ಬಂಗಾರಪ್ಪ (kumar Bangarappa) ವಿರುದ್ಧ ಸಿಡಿದೆದ್ದ ಬಿಜೆಪಿ ಮುಖಂಡ(BJP Leaders)ರಿಗೆ ಪಕ್ಷ ಟ್ರೀಟ್ಮೆಂಟ್ ನೀಡಿದೆ. ನಿರಂತರ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದ್ದು, ಇದು ಮುಂದೆ ಎಂತಹ ತಿರುವು ಪಡೆಯಲಿದೆ ಎನ್ನುವುದು ಕಾದು ನೋಡಬೇಕಿದೆ.

READ | ಕ್ಯಾತಿನಕೊಪ್ಪದಲ್ಲಿ ಬೋನಿಗೆ ಬಿದ್ದ ಹೆಣ್ಣು ಚಿರತೆ, 2 ವರ್ಷದಲ್ಲಿ ಎರಡು ಚಿರತೆ ಸೆರೆ

ಕುಮಾರ ಬಂಗಾರಪ್ಪ ವಿರುದ್ಧ ನಮೋ ವೇದಿಕೆ ಆರಂಭಿಸಿ, ಅವರ ವಿರುದ್ಧವೇ ಕಾರ್ಯಕ್ರಮಗಳನ್ನು ಮಾಡಿದ ಮುಖಂಡರ ವಿರುದ್ಧ ಪಕ್ಷ ಕ್ರಮಕೈಗೊಂಡಿದ್ದು, ಹಲವರಿಗೆ ಪಕ್ಷದ ಜವಾಬ್ದಾರಿಗಳಿಂದ ಮುಕ್ತಿಗೊಳಿಸಿದೆ. ಇದು ಇನ್ನೊಂದು ಹಂತದ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಚರ್ಚೆಗಳು ಕೇಳಿಬರುತ್ತಿವೆ.
ಯಾರ ವಿರುದ್ಧ ಕ್ರಮ?
ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುರುಪ್ರಸನ್ನಗೌಡ ಬಾಸೂರು, ಪಂಚಾಯತ್ ರಾಜ್ ಗ್ರಾಮೀಣ ಪ್ರಕೋಷ್ಠದ ಗ್ರಾಮೀಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಎ.ಎಲ್.ಅರವಿಂದ್, ಸಾಗರ ನಗರ ಮಂಡಲದ ಪ್ರಭಾರ ಗಜಾನನರಾವ್, ಜಿಲ್ಲಾ ವಿಶೇಷ ಆಹ್ವಾನಿತ ಪಾಣಿರಾಜಪ್ಪ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಂಜನ್ ಕುಪ್ಪಗಡ್ಡೆ, ಜಿಲ್ಲಾ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ದ್ವಾರಳ್ಳಿ, ಶ್ರೀಪಾದ್ ನಿಸರಾಣಿ, ಎಂ.ಕೆ.ಯೋಗೇಶ್ ಅವರ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

https://suddikanaja.com/2022/11/01/three-person-died-in-hori-habba-at-shikaripura-and-sorab/

Leave a Reply

Your email address will not be published. Required fields are marked *

error: Content is protected !!