Attack on police | ಕನ್ನಡ ರಾಜ್ಯೋತ್ಸವದಲ್ಲಿ ತಮಿಳು ಹಾಡಿಗಾಗಿ ಕಿರಿಕ್, ಪೊಲೀಸರ ಮೇಲೆಯೇ ಹಲ್ಲೆ!

shivamogga Rural police station

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ತಾಲೂಕಿನ ಹೊಳೆಬೆನವಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಕಿರಿಕ್ ಮಾಡಿದ್ದಕ್ಕೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ‌.

READ | ಅಡಿಕೆ ಎಲೆಚುಕ್ಕೆ ರೋಗ ಅಧ್ಯಯನಕ್ಕೆ ಏಳು ಜನ ತಜ್ಞರ ಕೇಂದ್ರ ಸಮಿತಿ ನಿಯೋಜನೆ, ರಾಜ್ಯಕ್ಕೆ ಭೇಟಿ ನೀಡಲಿದೆ ತಂಡ

ರಸಮಂಜರಿ ಕಾರ್ಯಕ್ರಮದಲ್ಲಿ ಯುವಕರು ತಮಿಳು ಹಾಡು ಹಾಕುವಂತೆ ಆಯೋಜಕರೊಂದಿಗೆ ಕಿರಿಕಿರಿ ಮಾಡಿದ್ದಾರೆ. ರಾಜ್ಯೋತ್ಸವ ಕಾರ್ಯಕ್ರಮವಾಗಿದ್ದು, ತಮಿಳು ಹಾಡು ಹಾಕುವುದಿಲ್ಲ ಎಂದು ಹೇಳಿದ್ದರೆ ಅದಕ್ಕಾಗಿ ಮಾಣಿಕ್ಯ ಮತ್ತು ಪ್ರತಾಪ್ ಎಂಬುವವರು ಕಿರಿಕಿರಿ ಮಾಡಿದ್ದು, ಪೊಲೀಸರೊಂದಿಗೂ ವಾಗ್ವಾದ ನಡೆಸಿದ್ದಾರೆ. ಅವರ ಅತಿರೇಕದ ವರ್ತನೆ ಕಂಡು ಪೊಲೀಸರು ಬುದ್ಧಿಮಾತು ಹೇಳಿದ್ದಾರೆ. ಆಗ ಪ್ರತಾಪ್ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಳೆದಾಡಿದ್ದಾನೆ ಎಂದು ದೂರಲಾಗಿದೆ. ಪೊಲೀಸ್ ಸಿಬ್ಬಂದಿ ಸಾದುದ್ದೀನ್ ಮೇಲೆ ಹಲ್ಲೆ ಮಾಡಲಾಗಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!